ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10ಕ್ಕೆ 2 ಚಪಾತಿ, ಅನ್ನ, ತರಕಾರಿ ಪಲ್ಯದ ಊಟ : ಮುಂಬೈನಲ್ಲಿ ಶಿವಸೇನಾ ನೂತನ ಯೋಜನೆ

Last Updated 21 ಡಿಸೆಂಬರ್ 2019, 1:26 IST
ಅಕ್ಷರ ಗಾತ್ರ

ಮುಂಬೈ : ನಗರದ ಜನತೆಗೆ ಬೃಹತ್ ಮುಂಬೈ ನಗರಪಾಲಿಕೆ ವತಿಯಿಂದ₹10ಗೆ ಊಟ ನೀಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿ ಮಾಡಲಾಗುವುದು ಎಂದು ಮೇಯರ್ ಕಿಶೋರಿ ಪೆಡ್ನೆಕರ್ತಿಳಿಸಿದ್ದಾರೆ.

ಈಗಾಗಲೇ ಮುಂಬೈ ನಗರಪಾಲಿಕೆಯ ನೌಕರರಿಗೆ₹10ಗೆ ಊಟ ನೀಡುವ ವ್ಯವಸ್ಥೆಯನ್ನು ಡಿಸೆಂಬರ್ 19 ರಿಂದ ಜಾರಿ ಮಾಡಲಾಗಿದೆ. ಇದನ್ನು ನಗರದ ನಾಗರಿಕರಿಗೆ ನೀಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಊಟದಲ್ಲಿ 2 ಚಪಾತಿ, ಅನ್ನ, ದಾಲ್ ಮತ್ತು ತರಕಾರಿಗಳು ಇರಲಿವೆ ಎಂದು ಮೇಯರ್ ತಿಳಿಸಿದ್ದಾರೆ. ಶಿವಸೇನಾದ ಪ್ರಣಾಳಿಕೆಯಲ್ಲಿ ಈ ಕಾರ್ಯಕ್ರಮವನ್ನು ಸೇರಿಸಲಾಗಿತ್ತು. ಈಗ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಮೇಯರ್ ತಿಳಿಸಿದ್ದಾರೆ.

ಈ ಕ್ಯಾಂಟೀನ್‌‌ಗಳಿಗೆ ಯಾವ ಹೆಸರಿಡಬೇಕೆಂಬುದು ಇನ್ನೂ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT