ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2020ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಅಕ್ಟೋಬರ್ 4ರಂದು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗಳು ನಡೆಯಲಿದೆ. 2021ರ ಜನವರಿ 8ರಂದು ಮುಖ್ಯ ಪರೀಕ್ಷೆ ನಡೆಯಲಿದೆ.

ಇದಕ್ಕೂ ಮುನ್ನ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಮೇ 20ಕ್ಕೆ ನಿಗದಿಯಾಗಿತ್ತು. ಕೋವಿಡ್ -19 ಪರಿಣಾಮ ಪರೀಕ್ಷೆಯನ್ನು ಆಯೋಗ ಮುಂದೂಡಿತ್ತು.

2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್ಡಿಎ ಮತ್ತು ಎನ್ಎ ಪರೀಕ್ಷೆಗಳು ಸೆಪ್ಟೆಂಬರ್ 6ರಂದು ನಿಗದಿಯಾಗಿದೆ. ಐಇಎಸ್/ಐಎಸ್ಎಸ್ 2020 ಪರೀಕ್ಷೆ ಅಕ್ಟೋಬರ್ 16ರಂದು ಹಾಗೂ ಎಂಜಿನಿಯರಿಂಗ್ ಸರ್ವೀಸಸ್ ಮುಖ್ಯ ಪರೀಕ್ಷೆ ಆಗಸ್ಟ್ 9ರಂದು ನಡೆಯಲಿವೆ.

ಹೆಚ್ಚಿನ ಮಾಹಿತಿಗೆ www.upsc.gov.in ವೆಬ್ಸೈಟ್ ವೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.