ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ರಕ್ಷಣೆ ನಿಯಮ ಉಲ್ಲಂಘಿಸಿದರೆ ಕ್ರಮ

ಸಿಆರ್‌ಜೆಡ್ ಮಾರ್ಗಸೂಚಿ * ಸುಪ್ರೀಂ ಕೋರ್ಟ್‌ ಆದೇಶ ಜಾರಿ * ಕೇಂದ್ರ ಸರ್ಕಾರದಿಂದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ
Last Updated 11 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ದೇಶದ ಕಡಲತೀರಗಳಲ್ಲಿನ ಜೀವವೈವಿಧ್ಯವನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 1991ರಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್‌ಝಡ್‌) ನಿಯಮಗಳನ್ನು ರೂಪಿಸಿತ್ತು. ಆದರೆ, ಈ ನಿಯಮಗಳು ಅತ್ಯಂತ ಕಠಿಣವಾಗಿದ್ದ ಕಾರಣ ರಾಜ್ಯಗಳು ಇವನ್ನು ಜಾರಿಗೆ ತರಲು ನಿರಾಕರಿಸಿದ್ದವು. ಹೀಗಾಗಿ 2011ರಲ್ಲಿ ಮತ್ತು 2018ರಲ್ಲಿ ಈ ನಿಯಮಗಳಿಗೆ ತಿದ್ದುಪಡಿ ತರಲಾಯಿತು.

ಈ ನಿಯಮಗಳ ಪ್ರಕಾರ ಕಡಲತೀರದಿಂದ ನಿಗದಿತ ಅಂತರದಲ್ಲಿ (ಅಭಿವೃದ್ಧಿ ನಿಷೇಧ ವಲಯ) ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಬಾರದು. ಈ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು, ಆಯಾ ರಾಜ್ಯಗಳ ಕಡಲತೀರ ನಿರ್ವಹಣಾ ಪ್ರಾಧಿಕಾರಗಳ ಹೊಣೆ. ಈ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ತಡೆಯುವ ಮತ್ತು ತೆರವು ಮಾಡುವ ಅಧಿಕಾರ ಈ ಪ್ರಾಧಿಕಾರಕ್ಕೆ ಇದೆ

ಕಡಲತೀರ ವರ್ಗೀಕರಣ ಮತ್ತು ನಿಯಮಗಳು

ಸಿಆರ್‌ಜೆಡ್‌–1: ಪರಿಸರ ಸೂಕ್ಷ್ಮ ವಲಯ

ಕಡಲತೀರ, ರಾಷ್ಟ್ರೀಯ ಉದ್ಯಾನ, ಅರಣ್ಯ ಪ್ರದೇಶ, ಅಳಿವೆ ಪ್ರದೇಶ, ಮ್ಯಾಂಗ್ರೋವ್ ಅರಣ್ಯ ಪ್ರದೇಶ, ಅಭಯಾರಣ್ಯ ಹಾಗೂ ಕಡಲಜೀವಿಗಳ ಸಂತಾನೋತ್ಪತಿ ಪ್ರದೇಶಗಳು ಈ ವಲಯದಲ್ಲಿ ಬರುತ್ತವೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ, ಚಟುವಟಿಕೆ ನಡೆಸುವಂತಿಲ್ಲ

* ಈ ಪ್ರದೇಶಕ್ಕೂ ಈ ನಿಯಮ ಅನ್ವಯವಾಗುತ್ತದೆ

ಸಿಆರ್‌ಜೆಡ್‌–2: ಕಡಲತೀರದ ನಗರ ಪ್ರದೇಶ

ಕಡಲತೀರದವರೆಗೂ ಅಭಿವೃದ್ಧಿಯಾಗಿರುವ ನಗರ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿಈಗಾಗಲೇ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯಾಗಿರಬೇಕು ಮತ್ತು ಮೂಲಸೌಕರ್ಯಗಳು ಲಭ್ಯವಿರಬೇಕು

* ಕಡಲತೀರ ನಿರ್ವಹಣಾ ಪ್ರಾಧಿಕಾರವು ರೂಪಿಸುವ ನಿಯಮಗಳ ಅನುಸಾರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದು

* ಹೊಸದಾಗಿ ನಿರ್ಮಿಸುವ ಕಟ್ಟಡಗಳು, ಸ್ಥಳೀಯ ವಿನ್ಯಾಸಕ್ಕೆ ಅನುಗುಣವಾಗಿ ಇರಬೇಕು

ಸಿಆರ್‌ಜೆಡ್‌–3: ಗ್ರಾಮೀಣ ಮತ್ತು ಪಟ್ಟಣ ಪ್ರದೇಶ

ಹೆಚ್ಚು ಅಭಿವೃದ್ಧಿ ಚಟುವಟಿಕೆಗಳು ನಡೆಯದ ಪಟ್ಟಣ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಜನಸಾಂದ್ರತೆಯ ಆಧಾರದಲ್ಲಿ ಇದನ್ನು ಮತ್ತೆ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ

ಸಿಆರ್‌ಜೆಡ್‌–3ಎ

ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ.ಉಬ್ಬರದ ಅಲೆಗಳ ಲೇನ್‌ನಿಂದ 50 ಮೀಟರ್‌ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ

ಸಿಆರ್‌ಜೆಡ್‌–3ಬಿ

ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ. ಉಬ್ಬರದ ಅಲೆಗಳ ಲೇನ್‌ನಿಂದ 200 ಮೀಟರ್‌ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ

ಸಿಆರ್‌ಜೆಡ್‌–4: ದ್ವೀಪ ಪ್ರದೇಶಗಳು

ದ್ವೀಪಗಳು ಮತ್ತು ಒಳನಾಡು ದ್ವೀಪ ಪ್ರದೇಶಗಳಿಗೆ ಇದು ಅನ್ವಯವಾಗುತ್ತದೆ.ಉಬ್ಬರದ ಅಲೆಗಳ ಲೇನ್‌ನಿಂದ 20 ಮೀಟರ್‌ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ

ಪ್ರವಾಸೋದ್ಯಮ

ಕಡಲತೀರದಅಭಿವೃದ್ಧಿ ನಿಷೇಧ ವಲಯದಲ್ಲೂ ಪ್ರವಾಸೋದ್ಯಮ ಚಟುವಟಿಕೆ ನಡೆಸಲು 2018ರ ತಿದ್ದುಪಡಿ ನಿಯಮಗಳು ಅವಕಾಶ ಕೊಟ್ಟಿವೆ. ಈ ಪ್ರಕಾರ ಕಡಲಿನ ಉಬ್ಬರದ ಅಲೆಗಳ ಲೇನ್‌ನಿಂದ 10 ಮೀಟರ್‌ ಅಂತರದ ನಂತರದ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬಹುದು

* ಯಾವುದೇ ಶಾಶ್ವತ ನಿರ್ಮಾಣ ನಡೆಸಬಾರದು

* ಶೌಚಾಲಯಗಳು, ಬಟ್ಟೆ ಬದಲಿಸುವ ಘಟಕ, ಕಿರು ಹೋಟೆಲ್‌ಗಳ ಕಟ್ಟಡಗಳು ತಾತ್ಕಾಲಿಕ ನಿರ್ಮಾಣವಾಗಿರಬೇಕು

ನಿಷೇಧಗಳು

* ನೂತನ ಕೈಗಾರಿಕೆಗಳ ನಿರ್ಮಾಣ

* ಈಗಾಗಲೇ ಇರುವ ಕೈಗಾರಿಕೆಗಳ ವಿಸ್ತರಣೆ

* ತಂತ್ರಜ್ಞಾನ ಆಧರಿತ ಅತ್ಯಾಧುನಿಕ ಮೀನು ಸಂಸ್ಕರಣ ಘಟಕ

* ತ್ಯಾಜ್ಯ ಸಂಸ್ಕರಣ ಘಟಕ

* ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ

* ಮರಳಿನ ದಿಬ್ಬಗಳ ವಿನ್ಯಾಸ ಬದಲಿಸುವಿಕೆ

* ಕೊಳವೆಬಾವಿ ಕೊರೆಯುವುದು

ಕರ್ನಾಟಕದಲ್ಲೂ ಇದೆ ಪ್ರಾಧಿಕಾರ
ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್‌ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.

2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ

70 ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು

40 ದಕ್ಷಿಣ ಕನ್ನಡಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು

60 ಉಡುಪಿಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು

ನೆಲಕಚ್ಚಿದ ಕಟ್ಟಡಗಳು
ತಿರುವನಂತಪುರ:
ಕೇರಳದ ಕೊಚ್ಚಿಯಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್‌ಜೆಡ್‌) ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಮೂರು ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ಶನಿವಾರ ಧ್ವಂಸ ಮಾಡಲಾಗಿದೆ. ಇನ್ನೂ ಎರಡು ಕಟ್ಟಡಗಳು ಭಾನುವಾರ ಧ್ವಂಸಗೊಳ್ಳಲಿವೆ.

ಕೊಚ್ಚಿ ನಗರದಿಂದ ಐದು ಕಿ.ಮೀ. ದೂರದ ಮರಡು ಪ್ರದೇಶದಲ್ಲಿ ಸಿಆರ್‌ಜೆಡ್‌ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಐದು ಬಹುಮಹಡಿ ಕಟ್ಟಡಗಳನ್ನು ಉರುಳಿಸುವಂತೆ ಸುಪ್ರೀಂ ಕೋರ್ಟ್‌ 2019ರ ಮೇ ತಿಂಗಳಲ್ಲಿ ಆದೇಶಿಸಿತ್ತು.

ಈ ಸಮುಚ್ಚಯವನ್ನು ಕಡಲತೀರದ ಅಭಿವೃದ್ಧಿ ನಿಷೇಧ ವಲಯದಲ್ಲಿ ನಿರ್ಮಿಸಲಾಗಿತ್ತು. ಈ ಕಟ್ಟಡಗಳಲ್ಲಿ ವಾಸವಿದ್ದ 240 ಕುಟುಂಬಗಳನ್ನು ತಿಂಗಳ ಹಿಂದೆಯೇ ತೆರವು ಮಾಡಲಾಗಿತ್ತು. ಆ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರತಿ ಕುಟುಂಬಕ್ಕೂ ₹ 25 ಲಕ್ಷ ಪರಿಹಾರ ನೀಡಲಾಗಿದೆ.

ಕರ್ನಾಟಕದಲ್ಲೂ ಪ್ರಾಧಿಕಾರ
ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್‌ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.

2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ

ಆಧಾರ: ಕೇಂದ್ರೀಯ ಕಡಲತೀರ ನಿಯಂತ್ರಣ ವಲಯ ನಿಯಮಗಳು, ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT