ಗುರುವಾರ , ಜುಲೈ 16, 2020
23 °C

ವಿಶ್ವ ಮಹಿಳಾ ದಿನ: ಬನ್ನಿ ಕೈ ಹಿಡಿಯೋಣ, ಬೆನ್ನು ತಟ್ಟೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿಶ್ವದಲ್ಲಿಂದು ಮಹಿಳಾ ದಿನದ ಸಂಭ್ರಮ. ನಾಡಿನಾದ್ಯಂತ ಇರುವ ಮಹಿಳೆಯರ ವಿಶೇಷ ಸಾಧನೆಗಳನ್ನು ಕೊಂಡಾಡುವ, ಹಿಂದುಳಿದ ಮಹಿಳೆಯರಿಗೆ ಸ್ಫೂರ್ತಿಯಾಗಿ ನಿಲ್ಲುವ ದಿನ. ಇಂತಹ ದಿನದಂದು ಟ್ವಿಟರ್‌ನಲ್ಲಿ ಕಂಡುಬಂದ ಸಾಧಕಿಯರ ಯಶೋಗಾಥೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. 

ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿಯೇ ಇರುವ ವಿಶ್ವ ಸಂಸ್ಥೆಯ ಘಟಕವೇ ಯುಎನ್‌ ವುಮೆನ್. ಮಹಿಳೆಯರಿಗೆ ಸ್ಫೂರ್ತಿಯಾಗಬಲ್ಲ ಸಂದೇಶಗಳನ್ನು ಯುಎನ್‌ ವುಮನ್‌ ಟ್ವಿಟರ್ ಖಾತೆಯಲ್ಲಿ ಕಟ್ಟಿಕೊಡಲಾಗಿದೆ. ಈ ಮೂಲಕ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಮಾಡುತ್ತಿರುವ ಪ್ರಯತ್ನಗಳ ದ್ಯೋತಕವಾಗಿ ರೂಪುಗೊಂಡಿದೆ. 

ನಾವು ಒಬ್ಬರನ್ನೊಬ್ಬರು ಬೆಂಬಲಿಸೋಣ, ಒಬ್ಬರನ್ನೊಬ್ಬರು ನಂಬೋಣ, ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟುಕೊಡದಂತೆ ಪ್ರೋತ್ಸಾಹಿಸೋಣ ಮತ್ತು ಒಬ್ಬರನ್ನೊಬ್ಬರು ಮೇಲಕ್ಕೆತ್ತುವ ಕೈಗಳಾಗೋಣ #ಹ್ಯಾಪಿವುಮೆನ್ಸ್‌ಡೇ 2020 ಎಂದು ಟ್ವೀಟ್ ಮಾಡಿದೆ.

ಕೇರಳದ ಕೊಚ್ಚಿಯ ಅಂಜು ರಾಣಿ ರಾಯ್ ಅವರು ವ್ಹೀಲ್‌ಚೇರ್‌ನಲ್ಲಿದ್ದುಕೊಂಡೇ ಜಾರ್ ಲಿಫ್ಟಿಂಗ್‌ನಲ್ಲಿ ವಿಶ್ವ ದಾಖಲೆ ಮಾಡಿದವರು. ಹೊಂದಿರುವ ಅಂಜು ರಾಣಿ ಜಾಯ್: ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿರುವ ಅವರು, ಎಲ್ಲರಿಗಿಂತ ನಾನು ವಿಭಿನ್ನವಾಗಿದ್ದೇನೆ ಎಂದು ನನಗೆ ಬೇಸರವಾಯಿತು. ಆದರೆ ನಂತರ ನನ್ನ ಭವಿಷ್ಯದ ಬಗ್ಗೆ ಯೋಚಿಸಿದೆ ಮತ್ತು ಆಗ ಅದು ದಿನದಿಂದ ದಿನಕ್ಕೆ ಬದಲಾಗಲು ಆರಂಭವಾಯಿತು. ಜಾರ್ ಲಿಫ್ಟಿಂಗ್ ಅದರ ಮೊದಲ ಹೆಜ್ಜೆಯಾಗಿತ್ತು. ಈ ಮೂಲಕ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಾನು ಸಾಬೀತುಪಡಿಸಿದ್ದೇನೆ ಎನ್ನುತ್ತಾರೆ.

ಇನ್ನು ಸಂಗೀತ ಕುಮಾರಿ ಮತ್ತು ಸುಶ್ಮಿತಾ ಕುಮಾರಿ ಇಬ್ಬರು ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ದಿನದ ಈ ವೇಳೆ, ಒಬ್ಬರ ಸಮಸ್ಯೆಗಳನ್ನು ಪರಿಹರಿಸಲು ಮತ್ತೊಬ್ಬರು ಶ್ರಮಿಸಬೇಕು. ಜೀವನ ನಡೆಸಲು ನಮಗಾಗಿ ನಾವು ಸಂಪಾದಿಸುತ್ತಿರುವುದಕ್ಕೆ ಹೆಮ್ಮೆ ಹೆಮ್ಮೆಪಡುತ್ತೇವೆ. ಈ ಮೂಲಕ ಮಹಿಳೆಯರು ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಅದಕ್ಕಾಗಿ ಅವರಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವಂತೆ ನಾವು ಪ್ರಧಾನಮಂತ್ರಿ ಅವರಿಗೆ ಮನವಿ ಮಾಡುತ್ತೇವೆ ಎನ್ನುತ್ತಾರೆ.

'ನೀವು ಯಾರಿಗೂ ಕಡಿಮೆಯಿಲ್ಲ'. ಎಂದು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ನಿನ್ನೆ ಉತ್ತೀರ್ಣರಾಗಿರುವ ಲೆಫ್ಟಿನೆಂಟ್ ಇಪುಪು ಮೆನಾ ಅವರು ಮಹಿಳಾ ದಿನಕ್ಕಾಗಿ ನೀಡಿರುವ ಸಂದೇಶ. ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾದ ಅರುಣಾಚಲ ಪ್ರದೇಶದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಮಹಿಳಾ ದಿನದ ಅಂಗವಾಗಿ ಭಾರತದ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಚೆನ್ನೈನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಪುಪು ಅವರ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. 

ಯುನಿಸೆಫ್‌ ಕೂಡ ಟ್ವೀಟ್ ಮಾಡಿದ್ದು, ಮಹಿಳಾ ದಿನದ ಶುಭಾಶಯಗಳನ್ನು ಕೋರುವುದರೊಂದಿಗೆ ಸ್ಫೂರ್ತಿಯ ಮಾತುಗಳು ತುಂಬಿರುವ ವಿಡಿಯೊವೊಂದನ್ನು ಹಂಚಿಕೊಂಡಿದೆ. ಪ್ರತಿ ಹುಡುಗಿಯೂ ತಮ್ಮ ಕನಸುಗಳನ್ನು ಬೆನ್ನಟ್ಟುವ ಮತ್ತು ಎಲ್ಲೆಡೆ ಯಶಸ್ವಿಯಾಗಲು ಲಭ್ಯವಿರುವ ಎಲ್ಲ ಕೌಶಲ್ಯವನ್ನು ಪಡೆದುಕೊಳ್ಳುವ ಹಕ್ಕಿದೆ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು