ಸೋಮವಾರ, ಜನವರಿ 27, 2020
26 °C

ಸಂಸತ್ತಿನಲ್ಲಿ ಅನಾವರಣಗೊಳ್ಳಲಿದೆ ಅನುಭವ ಮಂಟಪ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 12ನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ್ದ ಅನುಭವ ಮಂಟಪದ ಪ್ರತಿಕೃತಿಯನ್ನು ದೆಹಲಿಯ ಸಂಸತ್‌ ಭವನದಲ್ಲಿ ಅಳವಡಿಸಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಅನುಮತಿ ನೀಡಿದ್ದಾರೆ. 

7ಅಡಿ 9 ಇಂಚು ಎತ್ತರದ ಈ ಕಲಾಕೃತಿಯನ್ನು ಇಲ್ಲಿನ ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್‌ ರಚಿಸಿದ್ದಾರೆ. 

‘ಅನುಭವ ಮಂಟಪದ ಮಾದರಿಯಲ್ಲಿಯೇ ಸಂಸತ್ತು ರಚನೆಯಾಗಿದೆ. ಹೀಗಾಗಿ, ಸಂಸದರು ಹಾಗೂ ಸಂಸತ್ತಿನ ಭೇಟಿ ನೀಡುವ ಗಣ್ಯರು ಅನುಭವ ಮಂಟಪ ಹೇಗಿತ್ತು ಎಂಬುದನ್ನು ಅರಿತುಕೊಳ್ಳಲು ಈ ಕಲಾಕೃತಿಯನ್ನು ಅಳವಡಿಸಲಾಗುತ್ತಿದೆ. ಬಜೆಟ್‌ ಅಧಿವೇಶನಕ್ಕೂ ಮೊದಲು ಅಥವಾ ಅಧಿವೇಶನದ ಸಂದರ್ಭ
ದಲ್ಲಿ ಈ ಕಲಾಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸುವ ನಿರೀಕ್ಷೆ ಇದೆ’ ಎಂಬುದು ಮೂಲಗಳ ವಿವರಣೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು