ಸೋಮವಾರ, ಜನವರಿ 27, 2020
28 °C

ರಂಗನತಿಟ್ಟು ಪಕ್ಷಿಧಾಮ ‘ಅತಿಥಿ’ಗಳ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಚಳಿ ಆರಂಭವಾಗುತ್ತಿದ್ದಂತೆಯೇ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ವಿವಿಧ ಜಾತಿಯ ಪಕ್ಷಿಗಳು ಬರಲಾರಂಭಿಸಿವೆ.

ಮೂರು ದಿನಗಳಿಂದ‌ ಮಂಡಗದ್ದೆ, ಭರತ್‌ಪುರ ಪಕ್ಷಿಧಾಮ ಸೇರಿದಂತೆ ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. 40 ಜತೆಗೂ ಹೆಚ್ಚು ಓಪನ್‌ ಬಿಲ್‌ (ಬಾಯ್ಕಳಕ), 10 ಜತೆ ಸ್ಪೂನ್‌ ಬಿಲ್‌, 5 ಜತೆ ಗ್ರೇ ಹೆರೋನ್‌, 4 ಜತೆ ಸ್ಟೋನ್‌ ಫ್ಲವರ್‌, 3 ಜತೆ ಪೇಂಟೆಡ್‌ ಸ್ಟಾರ್ಕ್‌ ಪಕ್ಷಿಗಳು ಬಂದಿವೆ.

ಒಂದು ಜತೆ ರಿವರ್‌ ಟರ್ನ್‌ ಕೂಡ ರಂಗನತಿಟ್ಟಿಗೆ ಬಂದಿದ್ದು, ಮೊಟ್ಟೆ ಇಡಲು ಬಂಡೆಯ ಮೇಲೆ ಜಾಗ ಹುಡುಕುತ್ತಿವೆ.

ಪಕ್ಷಿಧಾಮದಲ್ಲಿ ಸದ್ಯ ಪೆಲಿಕಾನ್‌ (ಹೆಜ್ಜಾರ್ಲೆ) ಹಾಗೂ ಐಬಿಸ್‌ ಜಾತಿಯ ಪಕ್ಷಿಗಳು ಹೆಚ್ಚು ಕಂಡು ಬರುತ್ತಿವೆ. ಈಗಾಗಲೇ ಇವು ಮರಿ ಮಾಡಿದ್ದು ಗುಟುಕು ನೀಡುತ್ತಿವೆ. ಪೈಡ್‌ ಮತ್ತು ವೈಟ್‌ ರಾಂಟ್‌ ಕಿಂಗ್‌ ಫಿಷರ್‌, ನೈಟ್‌ ಹೆರೋನ್‌ ಪಕ್ಷಿಗಳು ಕೂಡ ಮೂರು ದಿನಗಳಿಂದ ಪಕ್ಷಿಧಾಮದಲ್ಲಿ ಕಾಣಿಸಿಕೊಳ್ಳುತ್ತಿವೆ.

‘ರಂಗನತಿಟ್ಟಿಗೆ ವಲಸೆ ಪಕ್ಷಿಗಳ ಆಗಮನ ಈಗಷ್ಟೇ ಶುರುವಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಹೆಚ್ಚು ಪಕ್ಷಿಗಳು ಇಲ್ಲಿಗೆ ಬರಲಿವೆ. ಜನವರಿ ಕೊನೆ ಹೊತ್ತಿಗೆ 5 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿ ಸೇರುತ್ತವೆ’ ಎಂದು ಪಕ್ಷಿಧಾಮದ ಉಪವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು