ಆರ್‌.ಪೂರ್ಣಿಮಾ, ಕೋಟೆ, ನಂದೀಶ್‌ಗೆ ಸೀತಾಸುತ ಸ್ಮಾರಕ ಪ್ರಶಸ್ತಿ

ಶನಿವಾರ, ಜೂಲೈ 20, 2019
24 °C

ಆರ್‌.ಪೂರ್ಣಿಮಾ, ಕೋಟೆ, ನಂದೀಶ್‌ಗೆ ಸೀತಾಸುತ ಸ್ಮಾರಕ ಪ್ರಶಸ್ತಿ

Published:
Updated:
Prajavani

ಮಂಡ್ಯ: ಸಾಹಿತಿ ಸೀತಾಸುತ ಅವರ 121ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಟ್ರಸ್ಟ್‌ ಕೊಡಮಾಡುವ ಸಾಹಿತ್ಯ ಸೇವಾ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ, ಸಾಹಿತಿ ಡಾ.ಆರ್‌.ಪೂರ್ಣಿಮಾ, ದೇಶ ಸೇವಾ ಪ್ರಶಸ್ತಿಗೆ (ಮರಣೋತ್ತರ) ಹುತಾತ್ಮ ಯೋಧ ಶಂಕರಪ್ಪ ಕೋಟೆ, ಡಾ.ವಿ.ಟಿ.ಸುಶೀಲಾ ಜಯರಾಂ ವೈದ್ಯಕೀಯ ಸೇವಾ ಪ್ರಶಸ್ತಿಗೆ ಡಾ.ವಿ.ಎಲ್‌.ನಂದೀಶ್‌ ಆಯ್ಕೆಯಾಗಿದ್ದಾರೆ.

ಬಿ.ಇ.ವ್ಯಾಸಂಗ ಮಾಡುತ್ತಿರುವ ಮದ್ದೂರು ತಾಲ್ಲೂಕು, ಮಲ್ಲನಾಯಕನಹಳ್ಳಿ ಗ್ರಾಮದ ಎಂ.ಎಸ್‌.ಭವ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ. ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ತಲಾ ₹ 20 ಸಾವಿರ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಜುಲೈ 13ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸೀತಾಸುತ ಅವರ ಪುತ್ರರಾದ ಕೆ.ಎಸ್‌.ದೊರೆಸ್ವಾಮಿ, ಡಾ.ಕೆ.ಎಸ್‌.ಜಯರಾಂ, ಡಾ.ಕೆ.ಎಸ್‌.ಕೃಷ್ಣಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು. ಭಾರತೀಯ ವಾಯು ಸೇನೆ ನಿವೃತ್ತ ಏರ್‌ ಮಾರ್ಷಲ್‌ ಆರ್‌.ಜಿ.ಬರ್ಲಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !