ಗುರುವಾರ , ಏಪ್ರಿಲ್ 15, 2021
26 °C

ಕೆಫೆ ಕಾಫಿ ಡೇ: ಸಿದ್ದಾರ್ಥ ಧೃತಿಗೆಡಬಾರದಿತ್ತು–ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ದಾರ್ಥ ನಾಪತ್ತೆ ಪ್ರಕರಣ ಒಂದು ದುರಂತ, ಅವರು ಧೃತಿಗೆಡಬಾರದಿತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೂ ಅವರಿಗೂ 35 ವರ್ಷಗಳಿಂದ ಪರಿಚಯ ಇತ್ತು, ಸಿದ್ದಾರ್ಥ ತುಂಬಾ ಒಳ್ಳೆಯ ಹುಡುಗನಾಗಿದ್ದು ಅವರಿಗೆ ಸಾಕಷ್ಟು ಆಸ್ತಿಯೂ ಇತ್ತು ೆಂದು ಹೇಳಿದರು. ಎಸ್.ಎಂ.ಕೃಷ್ಣ ನನಗಿಂತ‌ ಒಂದು ವರ್ಷ ಹಿರಿಯರು.‌ ಈಗ ಅವರು ಇದನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿ ಬಂದಿದ್ದೇನೆ ಎಂದು ದೇವೇಗೌಡ ಹೇಳಿದರು.

ಐಟಿ ಅಧಿಕಾರಿಗಳು ತೊಂದರೆ ಕೊಟ್ಟಿದ್ದರು ಎಂಬ ಸಿದ್ಧಾರ್ಥ ಪತ್ರದ ಬಗ್ಗೆ ಮಾತನಾಡಿದ ಅವರು ಐಟಿ ದಾಳಿ ಆಗುತ್ತಿರುವ ರೀತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ನೀವೇ ಇದನ್ನು ವಿಶ್ಲೇಷಣೆ ಮಾಡಿ. ಈ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಅವರು ಹೇಳಿದರು. 

ಸಿದ್ಧಾರ್ಥ ತುಂಬಾ ಮುಂದೆ ಹೋಗ್ತಾ ಇದ್ರು, ಉದಯೋನ್ಮುಖ ಉದ್ಯಮಿಯಾಗಿದ್ದರು. ಷೇರು ಕುಸಿದು ಏನು ತೊಂದರೆ ಆಯ್ತೋ ಗೊತ್ತಿಲ್ಲ ಎಂದರು. ಸಿದ್ದಾರ್ಥ ಹೆದರಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಯಾಕೆ ಆ ಕೆಟ್ಟ ಗಳಿಗೆ ಬಂತೊ ಗೊತ್ತಿಲ್ಲ ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು