ಬುಧವಾರ, ಅಕ್ಟೋಬರ್ 16, 2019
27 °C

ನೆರೆ ನಷ್ಟದ ವರದಿಗೆ ಕೇಂದ್ರದ ತಿರಸ್ಕಾರ: ಕಾಂಗ್ರೆಸ್ ಖಂಡನೆ

Published:
Updated:
ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯಿಂದ ಆಗಿರುವ ಅಂದಾಜು ನಷ್ಟದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.

‘ವರದಿ ಸಲ್ಲಿಕೆಗೆ ಮೊದಲೇ ಪರಿಹಾರ ನೀಡಬೇಕಿತ್ತು. ಆದರೆ ವರದಿ ಸಲ್ಲಿಸಿದ ನಂತರವೂ ಪರಿಹಾರ ಬಿಡುಗಡೆ ಮಾಡಲು ಮುಂದಾಗದಿರುವುದು ವಿಷಾದನೀಯ’ ಎಂದು ಹೇಳಿದೆ.

‘ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದು ಹೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು?’ ಎಂದು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರನ್ನು ಲೇವಡಿ ಮಾಡಿದೆ.

‘ಯಡಿಯೂರಪ್ಪ ಅವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ’ ಎಂದು ಆಗ್ರಹಿಸಿದೆ.

 

Post Comments (+)