ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್ ಚೆಕ್ | 100 ಡಿಗ್ರಿ ಜ್ವರ ಇದ್ದವರು ಇನ್ನು ಮುಂದೆ ಕ್ವಾರಂಟೈನ್ ಆಗಬೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರನ್ನು ಕ್ವಾರಂಟೈನ್‌ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಹಲವರು ಈ ಸುದ್ದಿಯ ಲಿಂಕ್‌ ಮತ್ತು ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ತಾಣದ ಎಲ್ಲ ಪ್ರಕಾರಗಳಲ್ಲಿ ಹಂಚಿಕೊಂಡಿದ್ದಾರೆ.  

ವೈರಲ್‌ ಆಗಿರುವ ಸುದ್ದಿಯಲ್ಲಿ ಏನಿದೆ? 

‘ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರಿಗೂ ಕ್ವಾರಂಟೈನ್‌ ಮಾಡುವ ಹಾಗೂ ಅವರ ಗಂಟಲು ದ್ರವವನ್ನು ಪರಿಶೀಲನೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿ.16ರಂದು ವೆಬ್‌ಸೈಟ್‌ವೊಂದರಲ್ಲಿ ಈ ವರದಿ ಪ್ರಕಟವಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಸರ್ಕಾರದಿಂದ ಸ್ಪಷ್ಟನೆ

ಆದರೆ, ಈ ವರದಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ.  ‘ಇಂಥ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಇದು ಸುಳ್ಳು ಸುದ್ದಿ,’ ಎಂದು ಸರ್ಕಾರ ತಿಳಿಸಿದೆ.  

ಈ ಬಗ್ಗೆ ಸರ್ಕಾರ ಟ್ವೀಟ್‌ ಮಾಡಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು