ಶನಿವಾರ, ಜುಲೈ 31, 2021
28 °C

ಡಿ.ಕೆ.ಶಿವಕುಮಾರ್ ಪುತ್ರಿ, ಕಾಫಿಡೇ ಸಂಸ್ಥಾಪಕ ಸಿದ್ಧಾರ್ಥ ಪುತ್ರ ವಿವಾಹ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ವಿವಾಹ ಕುರಿತಂತೆ ಮಾತುಕತೆ ನಡೆದಿದೆ.

ಕಳೆದ ಭಾನುವಾರ ಎಸ್.ಎಂ.ಕೃಷ್ಣ ಮತ್ತು ಅವರ ಪುತ್ರಿ ಮಾಳವಿಕಾ ಅವರು ಡಿ.ಕೆ.ಶಿವಕುಮಾರ್ ಮನೆಗೆ ಬಂದು ವಿವಾಹ ಸಂಬಂಧದ ಬಗ್ಗೆ ಮಾತುಕತೆ ನಡೆಸಿದರು ಎಂದು ಶಿವಕುಮಾರ್ ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದ ಯಜಮಾನನ ಸಾವು ಸಂಭವಿಸಿ ವರ್ಷ ತುಂಬುವ ಮೊದಲು ಶುಭ ಕಾರ್ಯ ನಡೆಸುವಂತಿಲ್ಲ ಎಂಬ ಪದ್ಧತಿ ಇರುವುದರಿಂದ ಅಗಸ್ಟ್ ನಂತರವೇ ನಿಶ್ಚಿತಾರ್ಥ ನಡೆಯಬಹುದು ಎಂದು ಹೇಳಲಾಗುತ್ತಿದೆ. 

ಎಸ್ಎಂ.ಕೃಷ್ಣ, ಸಿದ್ಧಾರ್ಥ ಕುಟುಂಬದ ಜತೆಗೆ ಶಿವಕುಮಾರ್ ಅವರು ಸುದೀರ್ಘ ಸ್ನೇಹ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ಜುಲೈ 31ರಂದು ಸಿದ್ಧಾರ್ಥ ಅವರು ಮಂಗಳೂರು ಸಮೀಪದ ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪುವುದಕ್ಕೆ ಮೊದಲೇ ಈ ವಿವಾಹ ಸಂಬಂಧದ ಬಗ್ಗೆ ಮಾತುಕತೆ ನಡೆದಿತ್ತು ಎಂದು ಹೇಳಲಾಗುತ್ತಿದೆ.

ಅಮರ್ತ್ಯ ಹೆಗ್ಡೆ ಅವರು ಸದ್ಯ ತಾಯಿ ಮಾಳವಿಕಾ ಜತೆಗೆ ಕೆಫೆ ಕಾಫಿಡೇ ವ್ಯವಹಾರ ನೋಡಿಕೊಂಡಿದ್ದರೆ, ಐಶ್ವರ್ಯಾ ಅವರು ತಮ್ಮ ತಂದೆಯ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು