ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಿಂದಲೇ ಬೆಂಗಳೂರಿಗೆ ಮತ್ತೊಂದು ವಿಮಾನ ಹಾರಾಟ

Last Updated 11 ಡಿಸೆಂಬರ್ 2019, 10:02 IST
ಅಕ್ಷರ ಗಾತ್ರ

‌ಕಲಬುರ್ಗಿ: ಕಲಬುರ್ಗಿ– ಬೆಂಗಳೂರು ಮಧ್ಯೆ ಅಲಯನ್ಸ್‌ ಏರ್‌ ಸಂಸ್ಥೆಯ ವಿಮಾನ ಡಿ. 14 ಅಥವಾ 15ರಿಂದ ಹಾರಾಟ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್‌ನ 72 ಸೀಟುಗಳ ವಿಮಾನವು ವಾರದ ಏಳೂ ದಿನ ಹಾರಾಟ ನಡೆಸಲಿದೆ. ಪ್ರತಿ ದಿನ ಬೆಳಿಗ್ಗೆ 11.15ಕ್ಕೆ ಕಲಬುರ್ಗಿಯಿಂದ ಹೊರಟು ಮಧ್ಯಾಹ್ನ 12.05ಕ್ಕೆ ಬೆಂಗಳೂರು ಏರ್‌ಪೋರ್ಟ್‌ ತಲುಪಲಿದೆ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಖಚಿತಪಡಿಸಿದ್ದಾರೆ.

‘ಬೆಂಗಳೂರಿಗೆ ಇನ್ನೊಂದು ವಿಮಾನ ಹಾರಾಟಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಮುಗಿದಿವೆ. ತಾಂತ್ರಿಕ ತಯಾರಿಗಳೂ ಪೂರ್ಣಗೊಂಡಿವೆ. ಇನ್ನೆರಡು ದಿನಗಳಲ್ಲಿ ಅಂದರೆ; ಬುಧವಾರ (ಡಿ. 11)ದಿಂದ ಟಿಕೆಟ್‌ ಖರೀದಿ ಆರಂಭಿಸಬಹುದು’ ಎಂದೂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಸ್ಟಾರ್‌ ಏರ್‌ನ ಒಂದು ವಿಮಾನ ವಾರದ ಮೂರು (ಶುಕ್ರವಾರ, ಭಾನುವಾರ, ಸೋಮವಾರ) ದಿನ ಹಾರಾಟ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT