ಗುರುವಾರ , ನವೆಂಬರ್ 14, 2019
19 °C

ಪರಮೇಶ್ವರ ಆಪ್ತ ರಮೇಶ್ ಡೈರಿಗಳು ಪತ್ತೆ?

Published:
Updated:

ಬೆಂಗಳೂರು: ನಿಗೂಢವಾಗಿ ಮೃತಪಟ್ಟಿರುವ ರಮೇಶ್ ಅವರು ಬರೆದಿದ್ದಾರೆ ಎನ್ನಲಾದ ಡೈರಿಗಳು ಪೊಲೀಸರಿಗೆ ಸಿಕ್ಕಿರುವುದಾಗಿ ಗೊತ್ತಾಗಿದೆ. ಅವುಗಳ ಪರಿಶೀಲನೆ ನಡೆಯುತ್ತಿದೆ.

‘ರಮೇಶ್ ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ ಕೆಲ ಡೈರಿಗಳು ಸಿಕ್ಕಿವೆ. ಹಲವು ವರ್ಷಗಳಿಂದ ರಮೇಶ್ ಅವರು ಡೈರಿ ನಿರ್ವಹಣೆ ಮಾಡುತ್ತಿದ್ದರು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ವ್ಯವಹಾರ ಹಾಗೂ ಕೆಲಸಗಳ ಮಾಹಿತಿ ಡೈರಿಯಲ್ಲಿರುವ ಅನುಮಾನವಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪರಮೇಶ್ವರ ಅವರು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಆಗಿದ್ದಾಗ ಪಾಲ್ಗೊಂಡಿದ್ದ ಕಾರ್ಯಕ್ರಮಗಳ ಮಾಹಿತಿ ಡೈರಿಯಲ್ಲಿದೆ. ಪರಿಶೀಲನೆ ಬಳಿಕವೇ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ಮೂಲಗಳು ಹೇಳಿವೆ.

ಇನ್ನಷ್ಟು...

ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು

‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’

ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

ಪ್ರತಿಕ್ರಿಯಿಸಿ (+)