ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಿಂದ ಬಂದವರಿಗೆ ಸುಬ್ರಹ್ಮಣ್ಯದಲ್ಲಿ ಹೋಂ ಕ್ವಾರಂಟೈನ್‌, ಸ್ಥಳೀಯರ ಅಸಮಾಧಾನ 

Last Updated 1 ಏಪ್ರಿಲ್ 2020, 13:07 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕೇರಳದಿಂದ ಕರ್ನಾಟಕಕ್ಕೆ ಬಂದ ಗದಗ ಹಾಗೂ ಕೊಪ್ಪಳ ಮೂಲದ ಕಾರ್ಮಿಕರಿಗೆ ಸುಬ್ರಹ್ಮಣ್ಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಕೊರೊನಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕೇರಳದ ಪಾನತ್ತೂರಿನಲ್ಲಿದ್ದು, ಬಳಿಕ ಸುಳ್ಯ ತಾಲ್ಲೂಕು ಕಲ್ಲಪಲ್ಲಿ ಬಡ್ಡಡ್ಕ ಮಾರ್ಗವಾಗಿ ಅಲೆಟ್ಟಿ ಹಾಗೂ ಮಂಡೆಕೋಲು ಗ್ರಾಮಕ್ಕೆ ಬಂದ ಗದಗ ಹಾಗೂ ಕೊಪ್ಪಳ ಮೂಲದ 13 ಮಂದಿಯನ್ನು ಆರೋಗ್ಯ ತಪಾಸಣೆ ನಡೆಸಿ ಒಂದು ದಿನದ ಮಟ್ಟಿಗೆ ವ್ಯಾಸ್ತವ್ಯ ಮಾಡಿಸಿ, ಬಳಿಕ ಪುತ್ತೂರು ಎಸಿ ಅವರ ಆದೇಶದಂತೆ ತಹಶೀಲ್ದಾರರ ಸೂಚನೆಯಂತೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇವರನ್ನು ಸುಬ್ರಹ್ಮಣ್ಯದಲ್ಲಿ 14 ದಿನ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ.

ಸ್ಥಳೀಯರ ಅಸಮಾಧಾನ; ಈ ಮೊದಲೇ ಕೇರಳದಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದ್ದು, ಇದೀಗ ಅಲ್ಲಿದ್ದ ಕಾರ್ಮಿಕರನ್ನು ಸುಬ್ರಹ್ಮಣ್ಯದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿಡಲು ವ್ಯವಸ್ಥೆ ಕಲ್ಪಿಸಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಇದು ಬೇಜವಬ್ದಾರಿಯ ವರ್ತನೆ. ಈ ಭಾಗದಲ್ಲಿ ಜನ ಸ್ವಯಂ ಮುಂಜಾಗ್ರತೆ ವಹಿಸಿದ್ದು, ಅಲ್ಲದೇ ಹೆಚ್ಚು ಜನರು ಇರುವ ಸುಬ್ರಹ್ಮಣ್ಯ ಪೇಟೆಯಲ್ಲಿಯೇ ಇದೀಗ ಹೊರಗಿನವರಿಗೆ ಇಲಾಖೆಯವರೇ ವಾಸ್ತವ್ಯ ಇರಲು ವ್ಯವಸ್ಥೆ ಮಾಡಿರುವುದು ಸಮಂಜಸವಲ್ಲ ಎಂದು ಸ್ಥಳೀಯರು ಆಗ್ರಹಿಸಿದ್ದು, ಸಂಬಂಧಪಟ್ಟವರು ತಕ್ಷಣ ಬದಲಿ ವ್ಯವಸ್ಥೆ ಮಾಡಿಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT