ಬೆಂಗಳೂರು: ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಯೋಜನೆ, ಒಂದೊಂದು ಕ್ಯಾಂಟೀನ್ ಕಟ್ಟಡಕ್ಕೆ ₹ 1 ಕೋಟಿ ವೆಚ್ಚ ಮಾಡಲಾಗಿದೆ, ಇಲ್ಲೇ ದೊಡ್ಡ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ನಡೆಯಲಿದ್ದು, ಎಲ್ಲರ ಬಣ್ಣ ಬಯಲಿಗೆ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಇಂದಿರಾ ಕ್ಯಾಂಟೀನಿಗೆ ಕಾಂಗ್ರೆಸ್ ದುಡ್ಡು ಕೊಡುವುದಾದರೆ ಅದಕ್ಕೆ ನೆಹರೂ ಹೆಸರು ಇಡಲಿ, ರಾಜೀವ್ ಹೆಸರು ಇಡಲಿ ಅಥವಾ ಮಾಂಸಾಹಾರ ಆರಂಭಿಸಿ ಸೋನಿಯಾ ಹೆಸರನ್ನೂ ಇಡಲಿ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಹಣ ಈ ಮೂಲಕ ಬಡವರ ಹೊಟ್ಟೆ ತುಂಬಿಸುವ ಮೂಲಕ ಪಾಪ ಒಂದಿಷ್ಟು ಕಡಿಮೆಯಾಗಲಿ, ಆದರೆ ಸರ್ಕಾರದ ದುಡ್ಡಿನಲ್ಲಿ ಇನ್ನು ಮುಂದೆ ಹಣ ನುಂಗುವ ಯೋಜನೆಯನ್ನು ಅದೇ ಹೆಸರಲ್ಲಿ ಮುಂದುದುವರಿಸುವುದು ಸರಿಯಲ್ಲ, ಈ ಯೋಜನೆಗೆ ಅನ್ನಪೂರ್ಣೇಶ್ವರಿಯ ಹೆಸರು ಇಡಬಹುದು ಎಂದರು.

ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರು ಇಡುವ ನಿರ್ಧಾರಕ್ಕೆ ಬಂದಿಲ್ಲ, ಇಂತಹ ಸಲಹೆಯೊಂದು ಕಂದಾಯ ಸಚಿವರಿಗೆ ಬಂದಿದೆಯಷ್ಟೇ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.