ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತ್ರಿಕಾರಿ ಬದಲಾವಣೆಯತ್ತ ರಾಜ್ಯದ ಕೈಗಾರಿಕಾ ಕ್ಷೇತ್ರ: ಜಗದೀಶ್ ಶೆಟ್ಟರ್

Last Updated 1 ಜುಲೈ 2020, 15:52 IST
ಅಕ್ಷರ ಗಾತ್ರ

ಶಿವಮೊಗ್ಗ: ಕೈಗಾರಿಕಾಅಭಿವೃದ್ಧಿಯಲ್ಲಿಕರ್ನಾಟಕ ನಾಲ್ಕನೇಸ್ಥಾನದಲ್ಲಿದೆ. ರಾಜ್ಯದಲ್ಲಿಕಾಂತ್ರಿಕಾರಿ ಬದಲಾವಣೆಯ ಅಲೆಸೃಷ್ಟಿಯಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದ್ಯಮಿಗಳು ಕೈಗಾರಿಕೆ ಆರಂಭಿಸಲು ಇರುವ ನಿರ್ಬಂಧಗಳಿಗೆ ವಿನಾಯಿತಿ ನೀಡಲಾಗಿದೆ.ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಯಾವುದೇ ಅಡತಡೆಗಳಿಲ್ಲದೆ ಹೊಸ ಕೈಗಾರಿಕೆಗಳ ಆರಂಭ ಸರಳವೂ, ಸುಲಭವೂ ಆಗಿದೆ ಎಂದರು.

ಬಿಜೆಪಿಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಯೋಜನೆಗಳು ಜಾರಿಗೆ ಬಂದಿವೆ. ಕೈಗಾರಿಕಾ ಕ್ಷೇತ್ರದಅಭಿವೃದ್ಧಿಯಲ್ಲಿಮೊದಲ ಸ್ಥಾನಕ್ಕೆ ತರಲು‌ ಪ್ರಯತ್ನಿಸಲಾಗುತ್ತದೆ.ಕ್ಷೇತ್ರ ಬದಲಾವಣೆ ದಿಕ್ಕಿನಲ್ಲಿ ಸಾಗಿದೆಎಂದರು.

ಕೈಗಾರಿಕಾ ಸಮಸ್ಯೆ ಪರಿಹಾರಕ್ಕೆ ಅದಾಲತ್‌:

ರಾಜ್ಯದಲ್ಲಿ ಕೈಗಾರಿಕಾ ಸಮಸ್ಯೆಗಳು ಸಾಕಷ್ಟಿವೆ. ಕೆಲವು ಸಣ್ಣ ಸಮಸ್ಯೆಗಳಿಗೂ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ. ಕೈಗಾರಿಕೆಗಳನ್ನು ಆರಂಭಿಸಲು ಸ್ಥಳೀಯವಾಗಿ ಎದುರಾಗಬಹುದಾದ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಕೈಗಾರಿಕಾ ಅದಾಲತ್‍ ನಡೆಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕಾನೂನು ಸಮಸ್ಯೆಗಳ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎಂದರು.

ಕೈಗಾರಿಕೆಗಳಿಗೆ ಬೆಂಗಳೂರು ಕೇಂದ್ರವಾಗಿದೆ. ಇದರಿಂದ ಹೊರತರಲು, ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿಈಗಾಗಲೇ ವಿಮಾನ ನಿಲ್ದಾಣ ಕಾರ್ಯ ಆರಂಭವಾಗಿದೆ. ಜಿಲ್ಲೆ ಕೈಗಾರಿಕಾ ಕ್ಷೇತ್ರವಾಗಿ ಸಾಕಷ್ಟು ಅಭಿವೃದ್ದಿ ಕಾಣಲಿದೆ ಎಂದು ಭರವಸೆ ನೀಡಿದರು.

ಎಂಪಿಎಂ ಪುನರಾರಂಭ:

ಸಾಕಷ್ಟು ನೌಕರರಿಗೆ ಆಶ್ರಯದಾಯವಾಗಿದ್ದ ಎಂಪಿಎಂ ಹಾಗೂ ವಿಐಎಸ್‌ಎಲ್‌ ಕಾರ್ಖಾನೆಗೆ ಪುನರಾರಂಭ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವ ರಾಜ್ಯ ಸರ್ಕಾರ ಹೆಚ್ಚಿನ ಶ್ರಮ ಹಾಕಿದೆ.ಈ ಎರಡು ಕಾರ್ಖಾನೆ ಪುನರಾರಂಭ ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ಕಾರದಿಂದ ಜಿಲ್ಲೆಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿಸುವಲ್ಲಿ ಪಕ್ಷತೀತವಾಗಿ ಕೆಲಸ ಮಾಡಲಾಗುತ್ತಿದೆ. ಇದರ ಫಲವಾಗಿ ಹಲವು ಅಭಿವೃದ್ದಿ ಕಾಮಗಾರಿಗಳು ಆರಂಭಗೊಂಡಿವೆ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಆರ್‌.ಪ್ರಸನ್ನಕುಮಾರ್‌, ಎಸ್‌.ರುದ್ರೇಗೌಡ, ಆರ್ಯವೈಶ್ಯ ಸಮಾಜ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್‌.ಅರುಣ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್‌.ವಾಸುದೇವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT