ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಮಂಡಲ ಅಧಿವೇಶನ: ಉಭಯ ಸದನಗಳನ್ನುದ್ದೇಶಿಸಿ ವಜುಭಾಯಿ ವಾಲಾ ಭಾಷಣ

Last Updated 17 ಫೆಬ್ರುವರಿ 2020, 6:19 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಿದರು.

ಅಧಿವೇಶನದ ಮೊದಲ ಮೂರು ದಿನಗಳನ್ನು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ನಿಗದಿಪಡಿಸಲಾಗಿದೆ.

ಇಂದು ಆರಂಭಗೊಂಡಿರುವ ಅಧಿವೇಶನ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. ಮಾರ್ಚ್‌ 5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ.

ಅಧಿವೇಶನ ಮೊದಲ ದಿನವಾದ ಸೋಮವಾರ ಬೆಳಿಗ್ಗೆ 10 ಗಂಟೆಯಿಂದಲೇ ಶಾಸಕರು, ಸಚಿವರು ವಿಧಾನಸೌಧಕ್ಕೆ ಬರಲಾರಂಭಿಸಿದ್ದು, ವಿಧಾನಸೌಧದಲ್ಲಿ ಹಬ್ಬದ ಕಳೆ ಕಟ್ಟಿತ್ತು. ವಿಧಾನಸೌಧದ ಪೂರ್ವ ದಿಕ್ಕಿನಿಂದ ಬಹುತೇಕ ವಿರೋಧ ಪಕ್ಷದ ಸದಸ್ಯರು ಬಂದಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬಂದುದು ಗಮನ ಸೆಳೆಯಿತು.

ಸಿದ್ದರಾಮಯ್ಯ ಜತೆಯಲ್ಲಿ ಬಂದ ಸಚಿವ ರಮೇಶ ಜಾರಕಿಹೊಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT