ಸೋಮವಾರ, ಜೂನ್ 21, 2021
30 °C
ಕಾಫಿ–ಟೀ ಕುಡಿಯುವವರಿಗೂ ಬೀಳಲಿದೆ ಬರೆ?

ಹಾಲು, ಮೊಸರು ₹2 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಬೆನ್ನಲ್ಲೇ, ಫೆಬ್ರುವರಿ 1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯ ಬರೆಯೂ ಬೀಳಲಿದೆ.

ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ, ಹೋಟೆಲ್ ಮಾಲೀಕರು ಕಾಫಿ ಮತ್ತು ಟೀ ದರ ಪರಿಷ್ಕರಿಸಲು ಮುಂದಾಗಿದ್ದಾರೆ.

ಹೆಚ್ಚಳವಾದ ₹2ರಲ್ಲಿ 40 ಪೈಸೆಯನ್ನು ಇಡುಗಂಟನ್ನಾಗಿ ಮಾಡಿ, ರೈತರ ಮನೆಗಳಲ್ಲಿರುವ ಉತ್ತಮ ತಳಿಯ 12 ಲಕ್ಷ ಹಸುಗಳು ಮತ್ತು ಎಮ್ಮೆಗಳಿಗೆ ತಲಾ ₹50 ಸಾವಿರ ಮೊತ್ತದ ವಿಮೆ ಮಾಡಿಸಲಾಗುವುದು. ವಿಮಾ ಕಂತಿನ ಶೇ 75ರಷ್ಟು ಪಾಲನ್ನು ಈ ಹಣದಲ್ಲಿ ಭರಿಸಲಾಗುವುದು ಎಂದು ಕೆಎಂಎಫ್‌ ತಿಳಿಸಿದೆ.

‘ಹಾಲು ಮಾರಾಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಲೀಟರ್‌ಗೆ 40 ಪೈಸೆ ಕಮಿಷನ್ ಹೆಚ್ಚಿಸಲಾಗುವುದು. ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡುತ್ತಿರುವ ಪ್ರೊತ್ಸಾಹಧನವನ್ನು ಲೀಟರ್‌ಗೆ 20 ಪೈಸೆ ಹೆಚ್ಚಿಸಲಾಗುವುದು‌. ಉಳಿದ ₹1 ಅನ್ನು ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕತೆಗೆ ಅನುಗುಣವಾಗಿ ಹಾಲು ಉತ್ಪಾದಕರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ  ತಿಳಿಸಿದ್ದಾರೆ.

‘ಹಳೆಯ ದರದ ಹಾಲಿನ ಪ್ಯಾಕೇಟುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ಇವು ಖಾಲಿಯಾಗುವ ತನ ಪ್ಯಾಕೇಟ್‌ ಮೇಲೆ ಹಳೆಯ ದರ ಇರುತ್ತದೆ. ಗ್ರಾಹಕರು ಹೊಸ ದರದಲ್ಲಿ ಖರೀದಿಸಬೇಕು. ಕೇರಳ, ದೆಹಲಿ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿಗೆ ಹೋಲಿಸಿದರೆ ರಾಜ್ಯದಲ್ಲಿ ದರ ಕಡಿಮೆ ಇದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು