ಕೊಂಡಜ್ಜಿ ಬಿ.ಲಿಂಗರಾಜ್ ನಿಧನ

7

ಕೊಂಡಜ್ಜಿ ಬಿ.ಲಿಂಗರಾಜ್ ನಿಧನ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ಮಾಜಿ ಸಚಿವ ದಿವಂಗತ ಕೊಂಡಜ್ಜಿ ಬಸಪ್ಪ ಅವರ ಪುತ್ರ ಕೆ.ಬಿ.ಲಿಂಗರಾಜ್(68) ಅವರು ಬೆಂಗಳೂರಿನ ಮಹಲಕ್ಷ್ಮಿಪುರಂನ ಅವರ ನಿವಾಸದಲ್ಲಿ ಶನಿವಾರ ಬೆಳಗಿನಜಾವ 2.30ಕ್ಕೆ ನಿಧನರಾದರು.

ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದವರಾದ ಲಿಂಗರಾಜ್, ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. 

ಅವಿವಾಹಿತರಾಗಿದ್ದ ಅವರು ಸ್ವ ಇಚ್ಛೆಯಿಂದ ದೇಹದಾನ ಮಾಡಿದ್ದರು. ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಾದ ಕೊಂಡಜ್ಜಿಯಲ್ಲಿ ನೆರವೇರಿಸದೆ ಅವರ ಆಶಯದಂತೆ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ನೀಡಲಾಯಿತು. ಮಧ್ಯಾಹ್ನ 3ರ ವರೆಗೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಅವರ ನಿರ್ಧಾರಕ್ಕೆ, ಆಪ್ತರು, ಬಂಧುಗಳು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಲಿಂಗರಾಜ್ ಅವರು ಕೆಲಕಾಲ ರಾಜಕೀಯದಲ್ಲು, ಬಳಿಕ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಚಲನಚಿತ್ರ ವಿತರಕರಾಗಿದ್ದರು.

ಮೃತರಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷರಾದ ಕೊಂಡಜ್ಜಿ ಬ. ಷಣ್ಮುಖಪ್ಪ, ಡಾ.ಗುರುಮೂರ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ದಿವಂಗತ ರಾಜಶೇಖರ್ ಸೆರಿದಂತೆ ಏಳು ಜನ ಸಹೋದರರು. ಒಬ್ಬ ಸಹೋದರಿ ಇದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !