ಶುಕ್ರವಾರ, ಮಾರ್ಚ್ 31, 2023
22 °C

ಎಂಬಿಬಿಎಸ್ ಪ್ರವೇಶ: ವಿದ್ಯಾರ್ಥಿನಿಯರೇ ಅಧಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಶೈಕ್ಷಣಿಕ ವರ್ಷದ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶಾತಿ ಪ್ರಗತಿಯಲ್ಲಿದ್ದು, ಕಳೆದ ನಾಲ್ಕು ವರ್ಷಗಳನ್ನು ಗಮನಿಸಿದರೆ ವಿದ್ಯಾರ್ಥಿನಿಯರೇ ಅಧಿಕ ಪ್ರವೇಶಾತಿ ಪಡೆದಿದ್ದಾರೆ.

2015–16ರಲ್ಲಿ 2,544 ವಿದ್ಯಾರ್ಥಿಗಳು ಹಾಗೂ 2,524 ವಿದ್ಯಾರ್ಥಿನಿಯರು ಎಂಬಿಬಿಎಸ್‌ ಪ್ರವೇಶ ಪಡೆದಿದ್ದರು. 2016–17ರಲ್ಲಿ 3,282 ವಿದ್ಯಾರ್ಥಿಗಳು, 3,329 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಅಲ್ಲಿಂದಲೇ ವಿದ್ಯಾರ್ಥಿನಿಯರು ಅಧಿಕ ಪ್ರಮಾಣದಲ್ಲಿ ಕಾಲೇಜು ಸೇರುವುದು ಆರಂಭವಾಗಿತ್ತು. 2017–18ರಲ್ಲಿ 3,397 ವಿದ್ಯಾರ್ಥಿಗಳು, 3,669 ವಿದ್ಯಾರ್ಥಿನಿಯರು, 2018–19ರಲ್ಲಿ 3,029 ವಿದ್ಯಾರ್ಥಿಗಳು, 3,164 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು