ಬುಧವಾರ, ಏಪ್ರಿಲ್ 14, 2021
24 °C
ಐಎನ್ಎಸ್ ವಿಕ್ರಮಾದಿತ್ಯ, ಐಎನ್ಎಸ್ ಸುವರ್ಣ ವೀಕ್ಷಣೆಗೆ ಲಭ್ಯ

‘ಕಾರ್ಗಿಲ್ ವಿಜಯ ದಿವಸ್’ ನೌಕೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಕಾರ್ಗಿಲ್ ವಿಜಯ ದಿವಸ್’ ಅಂಗವಾಗಿ ಜುಲೈ 20ರಂದು ಸಾರ್ವಜನಿಕರು, ದೇಶದ ಏಕೈಕ ಯುದ್ಧ ವಿಮಾನ ವಾಹಕ ನೌಕೆ ‘ವಿಕ್ರಮಾದಿತ್ಯ’ಕ್ಕೆ ಭೇಟಿ ನೀಡಿ ವೀಕ್ಷಿಸಲು ನೌಕಾಪಡೆ ಅವಕಾಶ ಕಲ್ಪಿಸಿದೆ. 

ನಗರ ಸಮೀಪದ ಸೀಬರ್ಡ್ ನೌಕಾನೆಲೆಗೆ ಅಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು (ಐದನೇ ತರಗತಿ ಮತ್ತು ಮೇಲಿನವರು ಮಾತ್ರ) ಭೇಟಿ ನೀಡಬಹುದು. ‘ಐಎನ್ಎಸ್ ವಿಕ್ರಮಾದಿತ್ಯ’ ಮತ್ತು ‘ಐಎನ್ಎಸ್ ಸುವರ್ಣ’ ನೌಕೆಗಳು ನಾಗರಿಕರ ಪ್ರವೇಶಕ್ಕೆ ಅಂದು ಮುಕ್ತವಾಗಿರುತ್ತವೆ. ಭದ್ರತೆಯ ಕಾರಣದಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ.

ಭೇಟಿ ನೀಡುವ ಸಾರ್ವಜನಿಕರಿಗೆ ಅರಗಾದ ಮುಖ್ಯ ಗೇಟ್‌ನಿಂದ ಮಾತ್ರ ಪ್ರವೇಶವಿರುತ್ತದೆ. ತಮ್ಮೊಂದಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಲಾಗಿರುವ ಯಾವುದೇ ಫೋಟೊ ಗುರುತಿನ ಚೀಟಿ ಹೊಂದಿರಬೇಕು. ಸಾರ್ವಜನಿಕರ ವಾಹನಗಳನ್ನು ನೌಕಾನೆಲೆಯ ಹೊರಗೆ ನಿಗದಿ ಮಾಡಲಾದ ಜಾಗದಲ್ಲೇ ನಿಲ್ಲಿಸಬೇಕು. ಅಲ್ಲಿಂದ ನೌಕೆಗಳಿರುವ ಜೆಟ್ಟಿಗೆ ನೌಕಾಪಡೆಯ ಬಸ್‌ಗಳಲ್ಲಿ ಕರೆದುಕೊಂಡು ಹೋಗಿ ನಂತರ ಮುಖ್ಯ ಗೇಟ್‌ಗೆ ಕರೆತರಲಾಗುತ್ತದೆ.

ಸಾರ್ವಜನಿಕರಿಗೆ ಪ್ರವೇಶದ ಪಾಸ್‌ಗಳನ್ನು ಮುಖ್ಯ ಗೇಟ್‌ನಲ್ಲೇ ನೀಡಲಾಗುತ್ತದೆ. ನೌಕಾನೆಲೆಯಿಂದ ವಾಪಸ್ ಬಂದಾಗ ಅವುಗಳನ್ನು ಪುನಃ ಭದ್ರತಾ ಸಿಬ್ಬಂದಿಗೆ ಕೊಡಬೇಕು. ಮೊಬೈಲ್ ಫೋನ್ ಹೊರತುಪಡಿಸಿ ದೃಶ್ಯ, ಧ್ವನಿ ಮುದ್ರಣ ಮಾಡಿಕೊಳ್ಳುವ ಕ್ಯಾಮೆರಾ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೌಕಾನೆಲೆಯ ಒಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜುಲೈ 26ರಂದು 20ನೇ ‘ಕಾರ್ಗಿಲ್ ವಿಜಯ ದಿವಸ್’ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೌಕಾನೆಲೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು