ಶನಿವಾರ, ಮೇ 30, 2020
27 °C

ನಿಜಾಮುದ್ದೀನ್ ಮಸೀದಿ ಪ್ರಕರಣ: ಕೋಲಾರದಲ್ಲಿ 18 ಮಂದಿ ಪತ್ತೆ ಮಾಡಿದ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಜಿಲ್ಲೆಗೆ ಬಂದಿರುವ 18 ಮಂದಿಯನ್ನು ಜಿಲ್ಲಾಡಳಿತ ಮಂಗಳವಾರ ರಾತ್ರಿ ಪತ್ತೆ ಮಾಡಿದೆ.

ಮಾರ್ಚ್ 20ರಂದು‌‌ ಜಿಲ್ಲೆಗೆ ಬಂದಿದ್ದ ಇವರು ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಮತ್ತು ಗೊಲ್ಲಹಳ್ಳಿಯಲ್ಲಿ‌ ಉಳಿದುಕೊಂಡಿದ್ದರು‌. ಇವರಲ್ಲಿ  10 ಮಂದಿ ಮೂಲತಃ ಮಹಾರಾಷ್ಟ್ರದ ಮುಂಬೈನವರು ಮತ್ತು 8 ಮಂದಿ ದೆಹಲಿಯವರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ 18 ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಕೇಂದ್ರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ‌ ಇರಿಸಲಾಗಿದೆ. ಇವರೆಲ್ಲರ ಕಫಾ ಮತ್ತು‌ ರಕ್ತ‌ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ‌ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ.

ಈ 18 ಮಂದಿಯೂ ಧರ್ಮ ಪ್ರಚಾರಕ್ಕಾಗಿ ಫೆ.20ರಿಂದ ದೇಶದ ವಿವಿಧೆಡೆ ಸಂಚಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನಷ್ಟು... 

ನಿಜಾಮುದ್ದೀನ್ ಮಸೀದಿ ಪ್ರಕರಣ: ಮೌಲಾನಾ ಸಾದ್ ವಿರುದ್ಧ ಎಫ್ಐಆರ್

ನಿಜಾಮುದ್ದೀನ್ ಮಸೀದಿಯಲ್ಲಿದ್ದರು ಕರ್ನಾಟಕದ 45 ಜನ: ಈಗಾಗಲೇ ಶಿರಾದ ವ್ಯಕ್ತಿ ಸಾವು

ನಿಜಾಮುದ್ದೀನ್‌ ಮಸೀದಿ ಸಭೆಯಲ್ಲಿ ಭಾಗವಹಿಸಿದ್ದ 8 ಮಂದಿ ಬಿಜ್‌ನೋರ್‌ನಲ್ಲಿ ಪತ್ತೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು