ಬುಧವಾರ, ಏಪ್ರಿಲ್ 1, 2020
19 °C

ಪರಿಷತ್ ಚುನಾವಣೆಯಲ್ಲಿ ಜಿ.ಟಿ ದೇವೇಗೌಡರಿಂದ ಮಾತ್ರ ಮತದಾನ: ಎಚ್‌ಡಿಕೆ ಏನಂತಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕಾಂಗ್ರೆಸ್‌ನವರು ಮತದಾನದಲ್ಲಿ ಭಾಗವಹಿಸಲ್ಲ ಅಂತ ಸಂದೇಶ ಕೊಟ್ಟಿದ್ದರು. ಇದು ಉಪಯೋಗಕ್ಕೆ ಬರಲ್ಲ ಅಂತ ನಾವೂ ಕೂಡ ಭಾಗಿಯಾಗಿಲ್ಲ. ಜಿ.ಟಿ ದೇವೇಗೌಡ ಮತದಾನ ಮಾಡಿದ್ದು ನನಗೆ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈಗ ಅವರು ನಮ್ಮಲ್ಲಿ ಇದ್ದಾರಾ. ಅವರು ಹಲವಾರು ಹೇಳಿಕೆಗಳನ್ನು ಕೊಟ್ಟುಕೊಂಡಿದ್ದಾರೆ. ಇಲ್ಲಿರ್ತಾರೋ, ಎಲ್ಲಿರ್ತಾರೋ ಎಂದು ಕಾದು ನೋಡೋಣ. ಮತದಾನದಲ್ಲಿ ಭಾಗವಹಿಸೋದು ಬೇಡ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಶಾಸಕಾಂಗ ಪಕ್ಷಕ್ಕೆ ಅಗೌರವ ತೋರುವುದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು. 

ಜೆಡಿಎಸ್‌ನ ಜಿ.ಟಿ‌. ದೇವೇಗೌಡರಿಂದ ಮಾತ್ರ ಮತದಾನ

ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಹೊರತುಪಡಿಸಿ ಇತರ ಯಾವ ಶಾಸಕರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಸೋಮವಾರ ಬೆಳಗ್ಗೆ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಲಾಗಿತ್ತು. ಆದರೆ ಶಾಸಕಾಂಗ ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ಜಿ.ಟಿ.ದೇವೇಗೌಡರು ಮತ ಚಲಾಯಿಸಿದರು. ಈ ಮಧ್ಯೆ ಉಮೇಶ್ ಕತ್ತಿ, ಬಸನಗೌಡ ಯತ್ನಾಳ ಸಹಿತ ಬಿಜೆಪಿಯ ಬಹುತೇಕ ಎಲ್ಲ ಶಾಸಕರು ಮತ ಚಲಾಯಿಸಿದರು. 

ಅನಾರೋಗ್ಯದ ಕಾರಣ ರಾಮದಾಸ್, ಎನ್ ವೈ ಗೋಪಾಲಕೃಷ್ಣ ಹೊರತುಪಡಿಸಿ, ಇದುವರೆಗೆ 119 ಮಂದಿ ಪರಿಷತ್ ಉಪಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು