ಶುಕ್ರವಾರ, ಏಪ್ರಿಲ್ 23, 2021
22 °C

ಪಂಪ್‌ಸೆಟ್‌ಗಳಿಗೆ 10 ಗಂಟೆ ವಿದ್ಯುತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನೀರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 10ರಿಂದ 11 ಗಂಟೆ 3 ಫೇಸ್ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿ.ಎಸ್‌.ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕೊಳವೆಬಾವಿಗಳ ನೀರನ್ನು ಬಳಸಿ ಜನರು ಕೃಷಿ ಮಾಡಲು ಅನುವು ಮಾಡಿಕೊಡಿ’ ಎಂದು ಮನವಿ ಮಾಡಿದರು.

ಕುಮಾರಸ್ವಾಮಿ, ‘ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಿದ್ಧರಿದ್ದೇವೆ. ನಿರಂತರ ವಿದ್ಯುತ್‌ ಕೊಡಬೇಡಿ ಎಂದು ಜನರೇ ಮನವಿ ಮಾಡಿದ್ದಾರೆ. ನಾಲ್ಕೈದು ಗಂಟೆಯಂತೆ ದಿನಕ್ಕೆ ಎರಡು ಸಲ ಪೂರೈಕೆ ಮಾಡಿದರೆ ಕೊಳವೆಬಾವಿಗಳು ಬತ್ತಿ ಹೋಗಲ್ಲ ಎಂದು ಹೇಳಿದ್ದಾರೆ’ ಎಂದರು.

ಯು.ಟಿ.ಖಾದರ್ ಸಿಎಂ ಕಚೇರಿ ಹುಡುಕಲು ಪ್ರಯಾಸ...

ಬೆಳಗಾವಿ: ಇಲ್ಲಿ ಸುವರ್ಣ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಚೇರಿಯನ್ನು ಹುಡುಕಲು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪ್ರಯಾಸಪಟ್ಟರು.

ಮೂರನೇ ಮಹಡಿಯಲ್ಲಿರುವ 346 ಸಂಖ್ಯೆಯ ಈ ಕೊಠಡಿಯನ್ನು ಪತ್ತೆ ಹಚ್ಚಲು ಸುಮಾರು 15 ನಿಮಿಷ ತಿರುಗಾಡಿದರು. ‘ಮುಖ್ಯಮಂತ್ರಿ ಕಚೇರಿ ಎಲ್ಲಿ’ ಎಂದು ಹಲವರಲ್ಲಿ ಪ್ರಶ್ನಿಸಿದರು. ‘ಈ ಕಟ್ಟಡದ ವಿನ್ಯಾಸ ದಿಕ್ಕು ತಪ್ಪಿಸುವಂತಿದೆ’ ಎಂದು ಗೊಣಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು