ಶುಕ್ರವಾರ, ಜೂನ್ 5, 2020
27 °C

ಹೋಮಿಯೋಪಥಿ ಔಷಧಿ ವಿತರಣೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಔಷಧಿಗಳ ವಿತರಣೆಗೆ ಸರ್ಕಾರ ಅವಕಾಶ ನೀಡಿದೆ. 

ಬೋರ್ಡ್‌ ಆಫ್ ಹೋಮಿಯೋಪಥಿ ಸಿಸ್ಟಮ್ ಆಫ್ ಮೆಡಿಸಿನ್‌ನ (ಬಿಎಚ್‌ಎಸ್‌ಎಮ್‌) ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ನೇತೃತ್ವದ ವೈದ್ಯರ ತಂಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಹೋಮಿಯೋಪಥಿ ಔಷಧಿ ಹೇಗೆ ನೆರವಾಗಲಿದೆ ಎಂಬುದನ್ನು ವಿವರಿಸಿತು. ಇದೇ ವೇಳೆ ಬಿ.ಟಿ. ರುದ್ರೇಶ್ ಅವರು ಯಡಿಯೂರಪ್ಪ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಮಾತ್ರೆಗಳನ್ನು ವಿತರಿಸಿದರು. 

‘ಕೊರೊನಾ ಸೋಂಕು ಬರದಂತೆ ತಡೆಯಲು ಹೋಮಿಯೋಪಥಿ ಮಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಈಗ ಮುಖ್ಯಮಂತ್ರಿಯೇ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯದಾದ್ಯಂತ ಈ ಉಪಕ್ರಮವನ್ನು ಮುಂದುವರೆಸಲು ಸೂಚಿಸಿದ್ದಾರೆ. ಈ ಕಾರ್ಯಕ್ಕೆ ಹೋಮಿಯೋ‍ಪಥಿ ವೈದ್ಯರು ಕೈಜೋಡಿಸಬೇಕು’ ಎಂದು ರುದ್ರೇಶ್ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು