ಭಾನುವಾರ, ಮಾರ್ಚ್ 7, 2021
20 °C

ಹೊಟೆಲ್‌ಗಳಲ್ಲಿ ಕ್ವಾರಂಟೈನ್: ದರ ಪರಿಷ್ಕರಿಸಿದ ರಾಜ್ಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಬೆಂಗಳೂರು: ಹೊಟೆಲ್‌ಗಳಲ್ಲಿ ಕೊರೊನಾ ಸೋಂಕಿತರನ್ನು ಇರಿಸಲು ಈ ಹಿಂದೆ ನಿಗದಿಪಡಿಸಿದ್ದ ದರವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಒಂದು ದಿನಕ್ಕೆ ಊಟವೂ ಸೇರಿದಂತೆ ಕೊಠಡಿ ಬಾಡಿಗೆಯ ವಿವರ ಇಂತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 1200, ನಗರಸಭೆ ವ್ಯಾಪ್ತಿಯಲ್ಲಿ ₹ 900 ಮತ್ತು ಪುರಸಭೆ ಸೇರಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿ ₹ 750.

ಈ ಹಿಂದೆ ಸರ್ಕಾರ ನಿಗದಿಪಡಿಸಿದ್ದ ದರದಲ್ಲಿ ಹೋಟೆಲ್‌ನ ಸ್ವಚ್ಛತೆ, ನಿರ್ವಹಣೆ ಮತ್ತು ಊಟದ ವ್ಯವಸ್ಥೆ ಮಾಡಲು ಕಷ್ಟವಾಗುತ್ತದೆ. ದರ ಪರಿಷ್ಕರಿಸಬೇಕು ಎಂದು ಹೋಟೆಲ್ ಮಾಲೀಕರು ವಿನಂತಿಸಿದ್ದರು. ಅದರಂತೆ ಸರ್ಕಾರವು ದರಗಳನ್ನು ಪರಿಷ್ಕರಿಸಿದೆ.

ಸೋಂಕಿತರ ಸಂಖ್ಯೆ ಹೆಚ್ಚಾದರೆ ಸರ್ಕಾರಿ ಕಟ್ಟಡಗಳಲ್ಲಿ ವ್ಯವಸ್ಥೆ ಲಭ್ಯವಿಲ್ಲದಿದ್ದರೆ ಮಾತ್ರ ಸಾಮೂಹಿಕ ಕ್ವಾರಂಟೈನ್‌ಗಳಿಗೆ ಹೋಟೆಲ್‌ಗಳ ಸೇವೆ ಪಡೆಯಬೇಕು ಎಂದು ಆದೇಶ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು