ಬುಧವಾರ, ಮೇ 27, 2020
27 °C

ರಾಯಚೂರಿನಲ್ಲಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಾದ್ಯಂತ ವಿವಿಧ ಬ್ಯಾಂಕ್ ಶಾಖೆಗಳ ಎದುರು ಖಾತೆದಾರರು ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು, ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬಹುತೇಕರು ಜನಧನ್ ಖಾತೆಗೆ ಜಮಾ ಮಾಡಿರುವ ₹500 ಹಣ ಪಡೆದುಕೊಳ್ಳಲು ಬಂದಿದ್ದಾರೆ. ವೃದ್ಧರು, ಅಂಗವಿಕಲರು ಸೇರಿದಂತೆ ಮಾಸಾಶನ ಪಡೆಯುವವರು ಸಹ ಬ್ಯಾಂಕ್ ಗಳತ್ತ ಧಾವಿಸುತ್ತಿದ್ದಾರೆ.

ಪಡಿತರ ಅಂಗಡಿಯಲ್ಲೂ ದಟ್ಟಣೆ: ಜಿಲ್ಲೆಯಲ್ಲಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳ‌ ಎದುರು ಕೂಡಾ ಕಡುಬಡವರು ನೆರೆದಿದ್ದಾರೆ.
ಕೆಲವು ಕಡೆಗಳಲ್ಲಿ ಮಾತ್ರ ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಲಾಗಿದೆ. ಅದರಾಚೆ ನಿಂತಿರುವವರಲ್ಲಿ ಯಾವುದೇ ಅಂತರವಿಲ್ಲ. 'ಗುರುತು ಹಾಕಲು ರಂಗೋಲಿ ಸಿಗುತ್ತಿಲ್ಲ. ಬಣ್ಣದ ಪೌಡರ್ ಕೂಡಾ ಇಲ್ಲ' ನ್ಯಾಯಬೆಲೆ ಅಂಗಡಿ ನಡೆಸುವವರು ಹೇಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು