ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್‌ ಹೇಳಿದ್ದು ಸರಿಯಾಗಿದೆ: ಶಾಮನೂರು ಶಿವಶಂಕರಪ್ಪ

Last Updated 19 ಅಕ್ಟೋಬರ್ 2018, 9:12 IST
ಅಕ್ಷರ ಗಾತ್ರ

ದಾವಣಗೆರೆ: ‘ಲಿಂಗಾಯತ ವೀರಶೈವ ಧರ್ಮ ಒಡೆಯಬಾರದು ಎಂದುಡಿ.ಕೆ. ಶಿವಕುಮಾರ್ ಹೇಳಿರುವುದು ಸರಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿಮಾಜಿ ಸಚಿವ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ ಸುಮ್ಮನಿರಬೇಕು. ಇಲ್ಲದಿದ್ದರೆ ನಾವೇ ಹೈಕಮಾಂಡ್‌ಗೆ ದೂರು ನೀಡುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂ.ಬಿ. ಪಾಟೀಲ್ ಬಳಿ ಹಣ ಇದೆ ಎಂದು ಅಹಂನಿಂದ ವರ್ತಿಸುವುದು ಸರಿಯಲ್ಲ. ಸಮಾಜ ಒಡೆಯುವ ಕೆಲಸ ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಮಾಡಬಾರದು’ ಎಂದು ಹೇಳಿದರು.

ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಲಿಂಗಾಯತ ಧರ್ಮ ವಿಚಾರವನ್ನುಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಮಾತು ಕೇಳಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದರು.

ಈ ವಿಚಾರದ ಬಗ್ಗೆ ಸಚಿವ ಡಿ. ಕೆ. ಶಿವಕುಮಾರ್ ಸರಿಯಾಗಿ ಹೇಳಿದ್ದಾರೆ. ಅವರ ವಿರುದ್ದ ಎಂ.ಬಿ. ಪಾಟೀಲ್ ಹಾಗೂ ಕುಲಕರ್ಣಿ ಹೇಳಿಕೆ ನೀಡುತ್ತಿದ್ದಾರೆ‌.

ಇವರೇನು ಕಾಂಗ್ರೆಸ್ ಹೈಕಮಾಂಡ್‌ ಅಲ್ಲ. ಇಬ್ಬರು ಸಮಾಜ ಒಡೆಯುವಕೆಲಸ ಬಿಡಬೇಕು ಎಂದು ಕಿಡಿಕಾರಿದರು.

ವೀರಶೈವ ಲಿಂಗಾಯತ ಒಳಪಂಗಡಗಳ ನಡುವೆ ಲಗ್ನ ನಡೆಯಬೇಕು. ಇದು ಸಮಾಜದ ಸ್ವಾಮೀಜಿಗಳ ಸಲಹೆಯೂ ಹೌದು. ಇಂಥದ್ದನ್ನು ಮಾಡಬೇಕು. ಬಸವಣ್ಣ ಹೇಳಿದ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT