ಗುರುವಾರ , ಆಗಸ್ಟ್ 13, 2020
21 °C

ಬೆಳಗಾವಿ | ಪಿಪಿಇ ಕಿಟ್ ಧರಿಸದೆ ಕೋವಿಡ್–19 ಸೋಂಕಿತನ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ): ಇಲ್ಲಿ ಬುಧವಾರ ಕೋವಿಡ್–19ನಿಂದ ಮೃತರಾದ ವ್ಯಕ್ತಿಯ ಶವದ ಅಂತ್ಯಸಂಸ್ಕಾರ ನಡೆಸುವಾಗ ಸಂಬಂಧಿಕರು ಪಿಪಿಇ ಕಿಟ್‌ ಧರಿಸದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಗ್ಯ ಇಲಾಖೆಯ ಇಬ್ಬರು ಮಾತ್ರವೇ ಪಿಪಿಇ ಕಿಟ್‌ ಹಾಕಿರುವುದು ವಿಡಿಯೊದಲ್ಲಿದೆ. ಅವರು ಶವವನ್ನು ರಗ್ಗಿನಲ್ಲಿಟ್ಟುಕೊಂಡು ತಂದ ನಂತರ, ಪಿಪಿಇ ಕಿಟ್‌ ಧರಿಸಿಲ್ಲದ ನಾಲ್ವರು ಸಹಾಯ ಮಾಡಿದ್ದಾರೆ. ಅವರು ಮಾಸ್ಕ್‌ ಮಾತ್ರವೇ ಹಾಕಿರುವುದು 5.10 ನಿಮಿಷದ ವಿಡಿಯೊದಲ್ಲಿದೆ.

ಗುಂಡಿಗೆ ಪ್ಲಾಸ್ಟಿಕ್‌ ಹಾಕಿ ನಂತರ ಅದನ್ನು ಶವಕ್ಕೆ ಹೊದಿಸಿ ಅಂತ್ಯಸಂಸ್ಕಾರ ನೆರವೇರಿಸುವುದು ವಿಡಿಯೊದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು