ಕಾರು ಡಿಕ್ಕಿ: ಒಂದು ಜಿಂಕೆ ಮೃತಪಟ್ಟಿದ್ದನ್ನು ಕಂಡು ಮತ್ತೊಂದಕ್ಕೆ ಹೃದಯಾಘಾತ

ಕಾರವಾರ: ದಾಂಡೇಲಿಯ ಅಂಬೇವಾಡಿ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆನ್ನತ್ತಿ ಬಂದ ನಾಯಿಗಳಿಂದ ತಪ್ಪಿಸಿಕೊಂಡ ಎರಡು ಜಿಂಕೆಗಳು ಕಾರು ಡಿಕ್ಕಿಯಾಗಿ ಮೃತಪಟ್ಟಿವೆ.
ಒಂದು ಜಿಂಕೆ ಕಾರಿನ ಕೆಳಗೆ ಬಿದ್ದು ಸತ್ತರೆ, ಮತ್ತೊಂದು ಅದನ್ನು ನೋಡಿ ಹೃದಯಾಘಾತವಾಗಿ ಪ್ರಾಣಬಿಟ್ಟಿತು. ಈ ಸಂಬಂಧ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಪ್ರಯಾಣಿಸುತ್ತಿದ್ದ ಬಾಡಿಗೆ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
‘ಅಂಬೇವಾಡಿ ಸಮೀಪ ಇಳಿಜಾರಿನಲ್ಲಿ ಜಿಂಕೆಗಳನ್ನು ನಾಯಿಗಳ ಹಿಂಡು ಅಟ್ಟಿಸಿಕೊಂಡು ಬಂದಿತ್ತು. ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜಿಂಕೆಗಳು ಏಕಾಏಕಿ ರಸ್ತೆಗೆ ಧಾವಿಸಿದವು. ಆಗ ಒಂದು ಜಿಂಕೆಗೆ ಕಾರು ಡಿಕ್ಕಿಯಾಯಿತು. ಜಿಂಕೆಯ ಹೃದಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ತನ್ನ ಜೊತೆಗಿದ್ದ ಜಿಂಕೆ ಮೃತಪಟ್ಟಿದ್ದನ್ನು ನೋಡಿದ ಮತ್ತೊಂದಕ್ಕೆ ಹೃದಯಾಘಾತವಾಯಿತು’ ಎಂದು ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಜಿಂಕೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕಾರು ಚಾಲಕ ಸಂಜೀವಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದೂ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.