ಬುಧವಾರ, ಜೂನ್ 3, 2020
27 °C

ಉಕ್ರೇನ್‌ನಲ್ಲಿ ಸಿಲುಕಿದ ರಾಜ್ಯದ 220 ಮೆಡಿಕಲ್‌ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮೆಡಿಕಲ್‌ ಓದಲೆಂದು ಉಕ್ರೇನ್‌ಗೆ ತೆರಳಿರುವ ಜಿಲ್ಲೆಯ ಇಬ್ಬರು ಸೇರಿ ರಾಜ್ಯದ ಸುಮಾರು 220 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ವಿಮಾನ ಹಾರಾಟ ರದ್ದು ಪಡಿಸಿರುವುದರಿಂದ ದೇಶಕ್ಕೆ ಮರಳಲದಂತಾಗಿದೆ.

ದಾವಣಗೆರೆಯ ವಿನಯ್‌ ಕಲ್ಲಿಹಾಳ್‌ ಮತ್ತು ಸಂಜಯ್‌, ರಾಣೆಬೆನ್ನೂರಿನ ಅಮಿತ್‌ ಮತ್ತು ಸುಮನ್‌, ಮೈಸೂರಿನ ಶ್ರೀಕಾಂತ್‌, ಬೆಂಗಳೂರಿನ ಭಾವನಾ ಸೇರಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇದ್ದಾರೆ.

‘ಉಕ್ರೇನ್‌ನಲ್ಲಿ ಕೂಡ 300 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆಯಂತೆ. ಅವರು ಏನೋ ಮನೆಯಲ್ಲಿ ಚೆನ್ನಾಗಿ ಇದ್ದೇವೆ ಎಂದು ದಿನಾ ವಿಡಿಯೊ ಕರೆ ಮಾಡಿ ತಿಳಿಸುತ್ತಿದ್ದಾರೆ. ನಮ್ಮ ಮಕ್ಕಳು ನಮ್ಮ ಜತೆಗೆ ಇಲ್ಲ ಎಂಬುದು ಚಿಂತೆ ಹುಟ್ಟಿಸಿದೆ’ ಎಂದು ವಿನಯ್‌ನ ಹೆತ್ತವರಾದ ಎಲ್‌ಐಸಿ ಕಾಲೊನಿಯ ಪ್ರೊ. ರುದ್ರೇಶ್‌ ಮತ್ತು ಸುಮಾ ‘ಪ್ರಜಾವಾಣಿ’ ಜತೆ ಸಂಕಟ ತೋಡಿಕೊಂಡರು.

‘ಅಲ್ಲಿನ ಪ್ರಜೆಗಳಂತೆಯೇ ನೋಡಿಕೊಳ್ಳುವುದಾಗಿ ಉಕ್ರೇನ್‌ ಸರ್ಕಾರ ಹೇಳಿದೆ. ಅಲ್ಲಿಯೂ ಏಪ್ರಿಲ್‌ ಮೂರರವರೆಗೆ ಲಾಕ್‌ಡೌನ್‌ ಮಾಡಲಾಗಿತ್ತು. ಅದನ್ನು ಏಪ್ರಿಲ್‌ 24ರ ವರೆಗೆ ವಿಸ್ತರಿಸಿದೆ. ಸರ್ಕಾರ ಇಲ್ಲಿನ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು