ಸೋಮವಾರ, ಡಿಸೆಂಬರ್ 9, 2019
21 °C

ನನ್ನ ಪರಮಾಪ್ತ ಅನಂತ್‌ಕುಮಾರ್: ಭಾವುಕ ಟ್ವೀಟ್ ಮಾಡಿದ ಯಡಿಯೂರಪ್ಪ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ಪರಮಾಪ್ತ ಅನಂತ್‌ಕುಮಾರ್‌ ನಮ್ಮನ್ನಗಲಿದೆ ದಿನ ನೆನೆದರೆ ಮನಸ್ಸು ಭಾರವಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮುಂಜಾನೆ ಬಿಜೆಪಿಯ ದಿವಂಗತ ನಾಯಕ ಎಚ್‌.ಎನ್‌.ಅನಂತ್‌ಕುಮಾರ್ ಅವರನ್ನು ಭಾವುಕವಾಗಿ ನೆನಪಿಸಿಕೊಂಡಿದ್ದಾರೆ.

ಅನಂತ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಗೆಳೆಯನನ್ನು ನೆನಪಿಸಿಕೊಂಡಿರುವ ಬಿಎಸ್‌ವೈ, ‘ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕೆ ಕೊಂಡಿಯಂತಿದ್ದ ಅದ್ವಿತೀಯ ನಾಯಕ’ ಅಂದು ನುಡಿಗೌರವ ಅರ್ಪಿಸಿದ್ದಾರೆ.

ಇದನ್ನೂ ಓದಿ: ನಿಧನ ವಾರ್ತೆ | ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್‌ಕುಮಾರ್ ಇನ್ನಿಲ್ಲ

‘ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಯಡಿಯೂರಪ್ಪ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌ ಅವರ ಒಡನಾಟ, ಗೆಳೆತನ ಮತ್ತು ಮುನಿಸುಗಳ ಬಗ್ಗೆ ಬಿಜೆಪಿ ವಲಯಯದಲ್ಲಿ ಸಾಕಷ್ಟು ಕಥೆಗಳಿವೆ. ಯಡಿಯೂರಪ್ಪ ಅವರು ತಮ್ಮ ರಾಜಕೀಯ ಬದುಕಿನ ಆರಂಭದ ದಿನಗಳಲ್ಲಿ ಅನಂತ್‌ಕುಮಾರ್‌ ಮತ್ತು ಅವರ ಪತ್ನಿ ತೇಜಸ್ವಿನಿ ಅವರಿದ್ದ ಕೊಠಡಿಯಲ್ಲಿಯೇ ವಾಸವಿದ್ದರು.

ಹುಬ್ಬಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ

ಅನಂತ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಲವು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ ಎಂದು ದಿವಂಗತ ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಮಾಹಿತಿಗೆ ಮೊ– 93420 16419, 9880 164456 ಸಂಪರ್ಕಿಸಿ. ಸ್ಥಳ– ಗೋಕುಲ ಗಾರ್ಡನ್, ಗೋಕುಲ ರಸ್ತೆ, ಹುಬ್ಬಳ್ಳಿ.

 

 

 

ಇವನ್ನೂ ಓದಿ...

ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್‌ಕುಮಾರ್ ಇನ್ನಿಲ್ಲ

ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

*  ಅನಂತಕುಮಾರ್‌ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೊಂಡಿಯಂತೆ ಇದ್ದರು: ಯಡಿಯೂರಪ್ಪ

‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

* ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ

* ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ: ಸುರೇಶ್‌ಕುಮಾರ್

ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ: ಅಂತಿಮ ಗೌರವಕ್ಕೆ ಬಂದ ಗಣ್ಯರ ದಂಡು

ಅನಂತಕುಮಾರ್ ನಿಧನ: ಬಿಜೆಪಿಯಲ್ಲಿ ಆವರಿಸಿದ ಶೂನ್ಯ

* ‘ಸುಮೇರು’ ಆವರಿಸಿದ ಅನಂತ ದುಃಖ

ಅನಂತ ಜೀವನಯಾನ

ಅನಂತಕುಮಾರ್ ನೆನಪು: ವಕೀಲನನ್ನು ರಾಜಕೀಯಕ್ಕೆ ಕರೆದವರು

ಅನಂತಕುಮಾರ್ ನೆನಪು: ರೈಲ್ವೆ ಕ್ವಾಟ್ರರ್ಸ್‌ನಿಂದ ಕೇಂದ್ರ ಮಂತ್ರಿಯ ತನಕ...

ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು