ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಗೆ ವೈಟಿಪಿಎಸ್‌ ನಿರ್ವಹಣೆ

Last Updated 13 ಮೇ 2020, 20:15 IST
ಅಕ್ಷರ ಗಾತ್ರ

ರಾಯಚೂರು: ಯರಮರಸ್‌ ಸೂಪರ್‌ ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌)ದ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ವಿದ್ಯುತ್‌ ನಿಗಮವು 30 ತಿಂಗಳ ಅವಧಿಗೆಹೈದರಾಬಾದ್‌ನ ‘ಪವರ್‌ ಮೇಕ್‌’ ಖಾಸಗಿ ಕಂಪನಿಗೆ ವಹಿಸಿದೆ.

ಒಪ್ಪಂದದ ಪ್ರಕಾರ, ಪವರ್‌ ಮೇಕ್‌ ಕಂಪನಿಯೇ ಕಾರ್ಮಿಕರು–ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ವಿದ್ಯುತ್‌ ಉತ್ಪಾದನೆಯ ಸಂಪೂರ್ಣ ಹೊಣೆ ಈ ಕಂಪನಿಯದ್ದಾಗಿದೆ. ಕಲ್ಲಿದ್ದಲು ಖರೀದಿ, ಮೇಲುಸ್ತುವಾರಿ ಹಾಗೂ ವಿದ್ಯುತ್‌ ಮಾರಾಟದ ಜವಾಬ್ದಾರಿಯನ್ನು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ನೋಡಿಕೊಳ್ಳಲಿದೆ.ಮೇ 8 ರಂದು ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ.

2,500 ಎಕರೆ ಭೂಮಿಯಲ್ಲಿ ₹ 1,300 ಕೋಟಿ ವೆಚ್ಚದಲ್ಲಿ ಈ ಸ್ಥಾವರ ಸ್ಥಾಪಿಸಿದ್ದು,2017 ರಿಂದ ಕಾರ್ಯಾರಂಭ ಮಾಡಿದೆ. ತಲಾ 800 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಎರಡು ಘಟಕಗಳು ಇವೆ.

ವಿದ್ಯುತ್‌ ಸ್ಥಾವರದ ನಿರ್ವಹಣೆಯನ್ನು ಹೊರಗುತ್ತಿಗೆ ವಹಿಸಲು 2018 ರಲ್ಲಿಯೇ ಕರ್ನಾಟಕ ವಿದ್ಯುತ್‌ ನಿಗಮ ನಿರ್ಧರಿಸಿತ್ತು. ಆದರೆ, ಕಾರ್ಮಿಕ ಸಂಘಟನೆಗಳು ಮತ್ತು ವೈಟಿಪಿಎಸ್‌ಗೆ ಭೂಮಿ ನೀಡಿರುವ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದಒಪ್ಪಂದ ನನೆಗುದಿಗೆ ಬಿದ್ದಿತ್ತು.

ಗುತ್ತಿಗೆ ಆಧಾರದಲ್ಲಿ ನೇಮಕ ವಾಗಿದ್ದ 300 ಕಾರ್ಮಿಕರನ್ನು ಈ ಹಿಂದೆಯೇ ತೆಗೆದು ಹಾಕಲಾಗಿದೆ. ರಾಯಚೂರುಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್)ದ ಕೆಲ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜಿಸಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು 2019 ರ ಆರಂಭದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಬಂದಾಗ ಕೆಲಸ ಕಳೆದುಕೊಂಡಿದ್ದ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿ, ಸಂಚಾರಕ್ಕೆ ಅಡ್ಡಿಪಡಿಸಿದ್ದು ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT