ಭಾನುವಾರ, ಜೂಲೈ 5, 2020
22 °C

ಚೀನಾದ ಅಪ್ರಚೋದಿತ ಆಕ್ರಮಣ ಸಹಿಸಲಾಗದು: ಅಮೆರಿಕ ಸಂಸದ ಟೆಡ್‌ ಯೊಹೊ‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಭಾರತ–ಚೀನಾ ಗಡಿ, ಪೂರ್ವ ಲಡಾಖ್‌ನಲ್ಲಿ ಉಭಯ ಸೇನೆಗಳ ಮಧ್ಯೆ ಈಚೆಗೆ ನಡೆದ ಸಂಘರ್ಷವು ನೆರೆ ರಾಷ್ಟ್ರಗಳನ್ನು ಸೈನ್ಯದ ಮೂಲಕ ಪ್ರಚೋದಿಸುವ ಚೀನಾದ ಸಂಚಿನ ಭಾಗವಾಗಿದೆ. ಇಂಥ ಕ್ರಮವನ್ನು ಅಮೆರಿಕವು ಸಹಿಸುವುದಿಲ್ಲ’ ಎಂದು ಪ್ರಭಾವಿ ಸಂಸದ ಟೆಡ್‌ ಯೊಹೊ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಇಡೀ ಜಗತ್ತೇ ಒಂದಾಗಿ, ‘ಇನ್ನು ಸಾಕು’ ಎಂದು ಚೀನಾಗೆ ಸ್ಪಷ್ಟ ಸಂದೇಶ ನೀಡಬೇಕಾದ ಕಾಲ ಬಂದಿದೆ’ ಎಂದಿದ್ದಾರೆ.

‘ಕೋವಿಡ್‌–19ನಿಂದ ಉಂಟಾಗಿರುವ ಗೊಂದಲವನ್ನು ಮುಚ್ಚಿಹಾಕಲು ಚೀನಾದ ಕಮ್ಯುನಿಸ್ಟ್‌ ಪಕ್ಷ (ಸಿಪಿಸಿ) ಸಂಚು ರೂಪಿಸುತ್ತಿದೆ. ಅದರ ಭಾಗವಾಗಿ, ಹಾಂಗ್‌ಕಾಂಗ್‌, ತೈವಾನ್‌, ವಿಯೆಟ್ನಾಂ ಮುಂತಾದ ನೆರೆ ರಾಷ್ಟ್ರಗಳ ವಿರುದ್ಧ ದೊಡ್ಡ ಪ್ರಮಾಣದ ಸೇನಾ ಪ್ರಚೋದನೆಗಳನ್ನು ಚೀನಾ ನಡೆಸುತ್ತಿದೆ. ಶಾಂತಿಯುತ ರಾಷ್ಟ್ರಗಳನ್ನು ಬೆದರಿಸುವ ಇಂಥ ಅಪ್ರಚೋದಿತ ಮತ್ತು ಪೂರ್ವನಿಯೋಜಿತ ಪ್ರಚೋದನೆಗಳಿಗೆ ಅಮೆರಿಕ ಬೆಂಬಲ ನೀಡುವುದಿಲ್ಲ’ ಎಂದು ಯೊಹೊ ಹೇಳಿದ್ದಾರೆ.

ದೀರ್ಘ ಕಾಲದವರೆಗೆ ಹೌಸ್‌ಆಫ್‌ ರೆಪ್ರೆಸೆಂಟಿಟಿವ್ಸ್‌ ಸದಸ್ಯರಾಗಿದ್ದ, ಭಾರತ ಮೂಲದ ಡಾ. ಅಮಿ ಬೆರಾ ಅವರು ಸಹ ಭಾರತ–ಚೀನಾ ಗಡಿ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿ, ‘ದೀರ್ಘ ಕಾಲದಿಂದ ಪಾಲಿಸಿಕೊಂಡು ಬಂದಂಥ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುವ ಮೂಲಕ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಚೀನಾ ಪ್ರಯತ್ನಿಸಬೇಕೇ ವಿನಾ ಗಡಿ ಸಮಸ್ಯೆ ಇತ್ಯರ್ಥಕ್ಕೆ ಭಾರತದ ಮೇಲೆ ಈ ರೀತಿಯ ಒತ್ತಡ ಹೇರಬಾರದು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು