Covid-19 World Update | ಮೆಕ್ಸಿಕೊದಲ್ಲಿ 25 ಸಾವಿರ ದಾಟಿದ ಸಾವು

ಮೆಕ್ಸಿಕೊ ಸಿಟಿ/ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನ ಪರಿಣಾಮ ಸಂಭವಿಸಿದ ಸಾವಿನ ಸಂಖ್ಯೆ ಮೆಕ್ಸಿಕೊದಲ್ಲಿ 25 ಸಾವಿರ ದಾಟಿದೆ. 2 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ನಾಲ್ಕು ತಿಂಗಳ ಹಿಂದೆ ಮೊದಲ ಪ್ರಕರಣ ಕಂಡುಬಂದಿದ್ದ ಈ ದೇಶದಲ್ಲೀಗ 202,951 ಸೋಂಕಿತರಿದ್ದು, 25,060 ಜನ ಸಾವಿಗೀಡಾಗಿದ್ದಾರೆ. ಫೆಬ್ರುವರಿ 28ರಂದು ಮೊದಲ ಮೂರು ಕೊರೊನಾ ಪ್ರಕರಣ ಪತ್ತೆಯಾಗಿದ್ದವು. ಮಾರ್ಚ್ ಅಂತ್ಯದ ವೇಳೆ ಮೆಕ್ಸಿಕೊದಾದ್ಯಂತ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ವಿಶ್ವಾದ್ಯಂತ ಈವರೆಗೆ 96.09 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 4.89 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2.42 ಲಕ್ಷ ದಾಟಿದ್ದು, 124,410 ಜನ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 12.28 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 54,971 ಸಾವು, ರಷ್ಯಾದಲ್ಲಿ 6.13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 8,594 ಸಾವು ಸಂಭವಿಸಿದೆ. ಕೋವಿಡ್‌ನಿಂದಾಗಿ ಈವರೆಗೆ ಬ್ರಿಟನ್‌ನಲ್ಲಿ 43,314, ಪೆರುವಿನಲ್ಲಿ 8,761, ಚಿಲೆಯಲ್ಲಿ 4,903, ಸ್ಪೇನ್‌ನಲ್ಲಿ 28,330, ಇಟಲಿಯಲ್ಲಿ 34,678 ಮಂದಿ ಮೃತಪಟ್ಟಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಒಂದೇ ದಿನ 17,296 ಜನರಿಗೆ ಸೋಂಕು ತಗುಲಿದ್ದು, 407 ಮಂದಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: Covid-19 India Update | 17,236 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 5 ಲಕ್ಷದ ಸನಿಹ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.