ಭಾನುವಾರ, ಜುಲೈ 25, 2021
27 °C

Covid-19 World Update | 1.42 ಕೋಟಿ ಕೊರೊನಾ ಸೋಂಕಿತರು, 6.05 ಲಕ್ಷ ಜನ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

prajavani

ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 14,448,751 ಗೆ ಏರಿದ್ದು, 6,05,116 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ 81,23,358 ಸೋಂಕಿತರು ಗುಣಮುಖರಾಗಿದ್ದಾರೆ.

ಎಂದಿನಂತೆ ಅಮೆರಿಕ 37,68,055 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,40,500 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 11,31,121 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 20,98,389 ಪ್ರಕರಣಗಳು ಪತ್ತೆಯಾಗಿವೆ. 14,59,072 ಸೋಂಕಿತರು ಗುಣಮುಖರಾಗಿದ್ದು, 79,488 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 10,77,781 ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 6,77,423 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 26,816 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: 

ರಷ್ಯಾದಲ್ಲಿ 7,70,311, ದಕ್ಷಿಣ ಆಫ್ರಿಕಾದಲ್ಲಿ 3,64,328, ಪೆರುವಿನಲ್ಲಿ 3,53,590, ಚಿಲಿಯಲ್ಲಿ 3,30,930, ಇಂಗ್ಲೆಂಡ್‌ನಲ್ಲಿ 2,96,358, ಸ್ಪೇನ್‌ನಲ್ಲಿ 2,60,255 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 45,385, ಇಟಲಿಯಲ್ಲಿ 35,045, ಮೆಕ್ಸಿಕೊದಲ್ಲಿ 39,184, ಪ್ರಾನ್ಸ್‌ನಲ್ಲಿ 30,155, ಸ್ಪೇನ್‌ನಲ್ಲಿ 28,420, ಪೆರುವಿನಲ್ಲಿ 13,187, ರಷ್ಯಾದಲ್ಲಿ 12,323, ಚಿಲಿಯಲ್ಲಿ 8,503, ದಕ್ಷಿಣ ಆಫ್ರಿಕಾದಲ್ಲಿ 5,033 ಮತ್ತು ಪಾಕಿಸ್ತಾನದಲ್ಲಿ 5,568 ಜನರು ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು