ಬುಧವಾರ, ಆಗಸ್ಟ್ 12, 2020
27 °C

ಈಶಾನ್ಯ ಚೀನಾದಲ್ಲಿ 5.1 ತೀವ್ರತೆಯ ಭೂಕಂಪನ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ಚೀನಾದ ಈಶಾನ್ಯ ಭಾಗದಲ್ಲಿರುವ ಟ್ಯಾಂಗ್ಯನ್‌ನಲ್ಲಿ ಭಾನುವಾರ ಬೆಳಿಗ್ಗೆ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ತೀವ್ರತೆಯ ಪ್ರಮಾಣ 5.1ರಷ್ಟು ದಾಖಲಾಗಿದೆ. ಪ್ರಾಣ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.

ಬೆಳಿಗ್ಗೆ 6.38ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ. ಬೆಳಿಗ್ಗೆ 7.02ರ ಸುಮಾರಿಗೆ ಮತ್ತೊಮ್ಮೆ 2.2ರಷ್ಟು ತೀವ್ರತೆಯಲ್ಲಿ ಭೂ ಕಂಪಿಸಿದೆ ಎಂದು ಚೀನಾದ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ. 

ಇದರಿಂದಾಗಿ ರೈಲು ಹಳಿಗಳು ಹಾನಿಗೊಳಗಾಗಿರಬಹುದು ಎಂದು ಶಂಕಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಂಗ್ಯನ್‌ಗೆ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು