ಶುಕ್ರವಾರ, ಸೆಪ್ಟೆಂಬರ್ 17, 2021
31 °C

Covid-19 World Update | ಅಮೆರಿಕದಲ್ಲಿ ಒಂದೇ ದಿನ 43,742 ಪ್ರಕರಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಶನಿವಾರ ಜಾಗತಿಕವಾಗಿ 2,12,326 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದು ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕ, ಬ್ರೆಜಿಲ್‌ ಹಾಗೂ ಭಾರತದಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಜೂನ್‌ 28ರಂದು ಜಾಗತಿಕವಾಗಿ ಅತಿ ಹೆಚ್ಚು 1,89,077 ಪ್ರಕರಣಗಳು ದಾಖಲಾಗಿದ್ದವು. ಸೋಂಕಿನಿಂದ ಸಾವಿಗೀಡಾಗುತ್ತಿರುವವರು ನಿತ್ಯ ಸುಮಾರು 5,000 ಜನ. ಕಳೆದ 7 ತಿಂಗಳಲ್ಲಿ 1.10 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಈವರೆಗೂ ಕೋವಿಡ್‌–19ನಿಂದ 5.25 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿ ಪ್ರಕಾರ, ಅಮೆರಿಕದಲ್ಲಿ 24 ಗಂಟೆಗಳಲ್ಲಿ (ಅಮೆರಿಕ ಕಾಲಮಾನ ಶನಿವಾರ ರಾತ್ರಿ 8:30ರ ವರೆಗೂ), 43,742 ಹೊಸ ಪ್ರಕರಣಗಳು ಹಾಗೂ 252 ಮಂದಿ ಸಾವಿಗೀಡಾಗಿರುವುದು ದಾಖಲಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 28,36,764 ತಲುಪಿದ್ದು, 1,29,657 ಮಂದಿ ಸಾವಿಗೀಡಾಗಿದ್ದಾರೆ. ಶುಕ್ರವಾರ 57,683 ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿತ್ತು. ವಿಶ್ವದಲ್ಲಿ ಕೋವಿಡ್‌–19ನಿಂದ ಅತಿ ಹೆಚ್ಚು ಹೊಡೆತಕ್ಕೆ ಒಳಗಾಗಿರುವುದು  ಅಮೆರಿಕ.

ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಮೆಕ್ಸಿಕೊದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಶನಿವಾರ ಸಾವಿನ ಸಂಖ್ಯೆ 30,366 ತಲುಪಿದ್ದು, ಸಾವಿನ ಲೆಕ್ಕದಲ್ಲಿ ಫ್ರಾನ್ಸ್‌ ಹಿಂದಿಟ್ಟು ಐದನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನ 9,064 ಪ್ರಕರಣಗಳು ದಾಖಲಾಗಿದ್ದು, ಈವರೆಗೂ 2,900 ಹೆಚ್ಚು ಜನ ಸಾವಿಗೀಡಾಗಿದ್ದಾರೆ.

15,78,376 ಕೋವಿಡ್‌ ಪ್ರಕರಣಗಳು ಬ್ರೆಜಿಲ್‌ನಲ್ಲಿ ದಾಖಲಾಗಿದ್ದು, ಸೋಂಕಿನಿಂದ 64,365 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ ಜಾಗತಿ ಕೋವಿಡ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಷ್ಯಾದಲ್ಲಿ  6,74,515 ಪ್ರಕರಣಗಳು ಹಾಗೂ 10,027 ಮಂದಿ ಸಾವಿಗೀಡಾಗಿದ್ದಾರೆ. 6.7 ಲಕ್ಷಕ್ಕೂ ಅಧಿಕ ಪ್ರಕರಣಗಳು ಹಾಗೂ 20 ಸಾವಿರದ ಸಮೀಪದ ಸಾವಿನ ಸಂಖ್ಯೆ ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು