ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Relief work

ADVERTISEMENT

ಭಾರತದಿಂದ ಪರಿಹಾರ ಸಾಮಗ್ರಿ ಒಳಗೊಂಡ ನಾಲ್ಕು ವಿಮಾನ ಟರ್ಕಿಗೆ ರವಾನೆ

ಭೂಕಂಪ ಪೀಡಿತ ಟರ್ಕಿಗೆ ನೆರವಿನ ಹಸ್ತ ಚಾಚಿರುವ ಭಾರತ, ಅಗತ್ಯ ವೈದ್ಯಕೀಯ, ಪರಿಹಾರ ಸಾಮಗ್ರಿ ಸೇರಿದಂತೆ ಭಾರತೀಯ ವಾಯುಪಡೆಯ ಬೃಹತ್ ಗಾತ್ರದ ನಾಲ್ಕು ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸರಕು ಸಾಗಾಟದ ವಿಮಾನ ಟರ್ಕಿಗೆ ರವಾನಿಸಿದೆ.
Last Updated 8 ಫೆಬ್ರುವರಿ 2023, 2:22 IST
ಭಾರತದಿಂದ ಪರಿಹಾರ ಸಾಮಗ್ರಿ ಒಳಗೊಂಡ ನಾಲ್ಕು ವಿಮಾನ ಟರ್ಕಿಗೆ ರವಾನೆ

ವಾಚಕರ ವಾಣಿ| ಪರಿಹಾರ ಕಾರ್ಯ ವಿಳಂಬ ಸಲ್ಲ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯು ಗೌರಿ ಗಣೇಶ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಮಳೆಯಿಂದ ಆಗಿರುವ ಹಾನಿಯ ಕುರಿತು ಸರ್ಕಾರ ಲೆಕ್ಕ ಕೊಟ್ಟಿದೆಯಾದರೂ ಲೆಕ್ಕಕ್ಕೆ ಸಿಗದಿರುವ ಸಾವು-ನೋವು ಮತ್ತು ನಷ್ಟದ ಪ್ರಮಾಣ ಹಲವು ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ಸರ್ಕಾರದ ಅಂದಾಜಿನಂತೆ, 2019ರಿಂದ 2021ರವರೆಗೆ ಮಳೆಯಿಂದ ಆಗಿರುವ ಒಟ್ಟಾರೆ ನಷ್ಟ ₹ 2 ಲಕ್ಷ ಕೋಟಿ. ಆದರೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ಪರಿಹಾರದ ಹಣ ಸುಮಾರು ₹ 4,200 ಕೋಟಿ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಕಷ್ಟಕ್ಕೆ ಹೆಗಲು ಕೊಟ್ಟು ಆಸರೆಯಾಗಬೇಕಾದ ಕೇಂದ್ರ ಸರ್ಕಾರವು ಇದರಿಂದ ನುಣುಚಿಕೊಳ್ಳುತ್ತಲೇ ಇದೆ. ಅದು ಹಾಗೆ ಮಾಡಬಾರದು.
Last Updated 4 ಸೆಪ್ಟೆಂಬರ್ 2022, 19:31 IST
fallback

ನೆರೆ ಪರಿಹಾರ ಕಾರ್ಯಕ್ಕೆ ₹500 ಕೋಟಿ: ಸಿಎಂ ಬೊಮ್ಮಾಯಿ

‘ರಾಜ್ಯದಾದ್ಯಂತ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ₹ 500 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 3 ಆಗಸ್ಟ್ 2022, 21:00 IST
ನೆರೆ ಪರಿಹಾರ ಕಾರ್ಯಕ್ಕೆ ₹500 ಕೋಟಿ: ಸಿಎಂ ಬೊಮ್ಮಾಯಿ

ರೈತನಿಗೆ ಪರಿಹಾರ ವಿಳಂಬ: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ

ರೈತರೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರ ನೀಡಲು ವಿಫಲವಾದ ಜಿಲ್ಲಾಡಳಿತದ ಕ್ರಮಕ್ಕೆ ಬೇಸರಗೊಂಡ ಇಲ್ಲಿನ ಒಂದನೇ ಹೆಚ್ಚುವರಿ ‌ನ್ಯಾಯಾಲಯವು, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರು ಜಪ್ತಿಗೆ ಆದೇಶ ನೀಡಿದೆ.
Last Updated 15 ಫೆಬ್ರುವರಿ 2022, 10:06 IST
ರೈತನಿಗೆ ಪರಿಹಾರ ವಿಳಂಬ: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ

ಕೋವಿಡ್ ನಿರ್ವಹಣೆ ಮತ್ತು ನೆರೆ ಪರಿಹಾರ ಕೆಲಸ ಪರಿಶೀಲನೆಗೆ ನೂತನ ಸಚಿವರ ನೇಮಕ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು 29 ನೂತನ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಲಾಗಿದೆ.
Last Updated 4 ಆಗಸ್ಟ್ 2021, 15:16 IST
ಕೋವಿಡ್ ನಿರ್ವಹಣೆ ಮತ್ತು ನೆರೆ ಪರಿಹಾರ ಕೆಲಸ ಪರಿಶೀಲನೆಗೆ ನೂತನ ಸಚಿವರ ನೇಮಕ

ಪ್ರವಾಹ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ; ಸಿದ್ದರಾಮಯ್ಯ ಭರವಸೆ

‘ಕದ್ರಾ, ಮಲ್ಲಾಪುರ ಭಾಗದಲ್ಲಿ ಜಲಾಶಯದ ನೀರಿನಿಂದ ಉಂಟಾದ ಪ್ರವಾಹದಲ್ಲಿ ಸಂತ್ರಸ್ತರಾದವರನ್ನು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರದ ಮೇಲೆ ಸದನದಲ್ಲಿ ಒತ್ತಡ ಹೇರಲಾಗುವುದು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 2 ಆಗಸ್ಟ್ 2021, 14:16 IST
ಪ್ರವಾಹ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ; ಸಿದ್ದರಾಮಯ್ಯ ಭರವಸೆ

ಬಿಎಸ್​ವೈ ಸರ್ಕಾರದ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ: ಬೊಮ್ಮಾಯಿ

ಪ್ರವಾಹದಿಂದ ಸಂತ್ರಸ್ತರಾದವರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಮಾದರಿಯಲ್ಲಿಯೇ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 1 ಆಗಸ್ಟ್ 2021, 10:48 IST
ಬಿಎಸ್​ವೈ ಸರ್ಕಾರದ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ: ಬೊಮ್ಮಾಯಿ
ADVERTISEMENT

ಮಳೆಯ ಆರ್ಭಟಕ್ಕೆ ತತ್ತರಿಸಿದ ಬದುಕು- ವಿಳಂಬ ಮಾಡದೆ ಜನರ ಕಣ್ಣೀರು ಒರೆಸಿ

ರಾಜ್ಯದಲ್ಲಿ ನೈಋತ್ಯ ಮುಂಗಾರಿನ ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದೆ. ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಮಳೆಯ ಅಟಾಟೋಪದಿಂದ ನಲುಗಿ ಹೋಗಿವೆ. ಮಹಾರಾಷ್ಟ್ರದಲ್ಲೂ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕೃಷ್ಣಾ ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 25 ಜುಲೈ 2021, 21:43 IST
ಮಳೆಯ ಆರ್ಭಟಕ್ಕೆ ತತ್ತರಿಸಿದ ಬದುಕು- ವಿಳಂಬ ಮಾಡದೆ ಜನರ ಕಣ್ಣೀರು ಒರೆಸಿ

ಪರಿಹಾರ ಕಾರ್ಯ‌ಕ್ಕಾಗಿ ಡಿಎಚ್–ಪಿವಿ ಟ್ರಸ್ಟ್‌ನಿಂದ 11 ಸಂಸ್ಥೆಗಳಿಗೆ ನೆರವು

ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಪರಿಹಾರ ಟ್ರಸ್ಟ್‌ನಿಂದ 11 ಸಂಸ್ಥೆಗಳು ತಲಾ ₹ 5 ಲಕ್ಷ ನೆರವನ್ನು ಎರಡನೇ ಹಂತದಲ್ಲಿ ಕೋವಿಡ್‌ ಪರಿಹಾರ ಕಾರ್ಯಗಳಿಗೆ ಪಡೆಯಲಿವೆ. ಈ ಸಂಸ್ಥೆಗಳ ಚಟುವಟಿಕೆಗಳ ಮಾಹಿತಿ ಇಲ್ಲಿದೆ. ನಿಸರ್ಗ ಫೌಂಡೇಷನ್‌ ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ದೇಶಿಯ ಸಮುದಾಯಗಳ ಅಭಿವೃದ್ಧಿಗಾಗಿ ನಿಸರ್ಗ ಫೌಂಡೇಷನ್‌ ಕಾರ್ಯನಿರ್ವಹಿಸುತ್ತಿದೆ. ಜೀವ ವೈವಿಧ್ಯಗಳ ಸಂರಕ್ಷಣೆ ಮತ್ತು ಜನ ಕಲ್ಯಾಣದ ಆಶಯದೊಂದಿಗೆ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌–19 ಅರಣ್ಯ ವಾಸಿಗಳಿಗೆ ಹೊಸ ಸಮಸ್ಯೆಗಳು ಮತ್ತು ಸವಾಲುಗಳನ್ನು ಸೃಷ್ಟಿಸಿದೆ. ಹಲವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿಸರ್ಗ ಫೌಂಡೇಷನ್‌ ಅರಣ್ಯ ವಾಸಿಗಳಿಗೆ ರೇಷನ್‌ ಕಿಟ್‌ಗಳು, ಮಾಸ್ಕ್‌ಗಳು ಮತ್ತು ಫೇಸ್‌ ಶೀಲ್ಡ್‌ಗಳನ್ನು ನೀಡುವುದರ ಜತೆಗೆ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಮಕ್ಕಳಿಗೆ ಬಟ್ಟೆ, ಪುಸ್ತಕ, ಪೌಷ್ಟಿಕಾಂಶವುಳ್ಳ ಬಿಸ್ಕತ್‌ಗಳು ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಈ ಸಂಸ್ಥೆ ಒದಗಿದೆ. ಈ ಜನರು ಎದುರಿಸುತ್ತಿರುವ ಸಾಮಾಜಿಕ–ಆರ್ಥಿಕ ಸಮಸ್ಯೆಗಳು ಹಾಗೂ ಪೌಷ್ಟಿಕಾಂಶದ ಸವಾಲುಗಳನ್ನು ನಿವಾರಿಸಿ ಸಾಮಾನ್ಯ ಜನಜೀವನದತ್ತ ಸಾಗುವಂತೆ ಮಾಡುವ ಕಾರ್ಯದಲ್ಲಿ ನಿಸರ್ಗ ಫೌಂಡೇಷನ್‌ ತೊಡಗಿದೆ. ಬೆಳಗಾವಿ ಡಯಾಸೀಜನ್ ಸೋಷಿಯಲ್ ಸರ್ವಿಸ್ ಸೊಸೈಟಿ ಕೋವಿಡ್‌–19 ರೋಗಿಗಳಿಗೆ ಮತ್ತು ಕಾಯಿಲೆಯಿಂದ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬೆಳಗಾವಿ ಡಿಯೋಸಿಸನ್‌ ಸೋಷಿಯಲ್‌ ಸರ್ವಿಸ್‌ ಸೊಸೈಟಿಯು (ಬಿಡಿಎಸ್‌ಎಸ್‌ಎಸ್‌) ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಲವು ಚಟುವಟಿಕೆಗಳನ್ನು ಕೈಗೊಂಡಿದೆ. ಆರೋಗ್ಯ ಸೌಲಭ್ಯಗಳ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ಈ ಸಂಸ್ಥೆ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬೆಳಗಾವಿಯ ಮೋದಗೆ ಗ್ರಾಮದಲ್ಲಿ ಕಾರ್ಡಿನಲ್‌ ಗ್ರೇಸಿಯಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಆರೈಕೆ ಘಟಕದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಿದೆ. ಇದರಿಂದ ಸುತ್ತಮುತ್ತ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಮಾನವ ಹಕ್ಕುಗಳ ರಕ್ಷಣೆಯ ಕಾರ್ಯದಲ್ಲಿಯೂ ಬಿಡಿಎಸ್‌ಎಸ್‌ಎಸ್‌ ತೊಡಗಿಸಿಕೊಂಡಿದೆ. ವಿಶೇಷವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ಗಮನಹರಿಸಿದೆ. ರಿಫಾರೆಸ್ಟ್‌ ಇಂಡಿಯಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ‘ರಿಫಾರೆಸ್ಟ್‌ ಇಂಡಿಯಾ’, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದಾನಿಗಳನ್ನು ಸಂಪರ್ಕಿಸಿ ಸಂಕಷ್ಟದಲ್ಲಿರುವವರಿಗೆ ನೆರವು ದೊರಕಿಸಿಕೊಡುವ ಕಾರ್ಯ ಕೈಗೊಂಡಿದೆ. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸಿ ರೇಷನ್‌ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ತೃತೀಯ ಲಿಂಗಿಗಳಿಗೆ, ವಲಸೆ ಕಾರ್ಮಿಕರಿಗೆ, ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ, ಅರಣ್ಯ ಸಿಬ್ಬಂದಿಗೆ, ಕ್ಯಾನ್ಸರ್‌ ರೋಗಿಗಳಿಗೆ, ಪೌರಕಾರ್ಮಿಕರಿಗೆ ಮತ್ತಿತರರಿಗೆ ನೀಡಿದೆ. ಜತೆಗೆ, ಜಾಗೃತಿ ಶಿಬಿರಗಳನ್ನು ಆಯೋಜಿಸಿದೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಮಾನಸಿಕ ಪುನರ್ವಸತಿ ಕೇಂದ್ರ, ವೃದ್ಧಾಶ್ರಮಗಳಿಗೆ ಮತ್ತು ಅಂಧ ಸಂಗೀತಗಾರರಿಗೆ, ಕ್ಯಾನ್ಸರ್‌ ರೋಗಿಗಳಿಗೆ ಹಾಗೂ ಮನೆ ಕೆಲಸಗಾರರಿಗೆ ರೇಷನ್‌ ಕಿಟ್‌ಗಳನ್ನು ಒದಗಿಸಿದೆ. ಈಗ, ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಗ್ರಾಮೀಣ ಪ್ರದೇಶದ ಜನರಿಗೆ ನೆರವು ನೀಡಲು ಈ ಸಂಸ್ಥೆ ಉದ್ದೇಶಿಸಿದೆ. ತೋಟಗಾರಿಕೆಯಂಥ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಹಸ್ತ ಚಾಚುವ ಮೂಲಕ ಮತ್ತೆ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ಮಾಡುವ ಯೋಜನೆ ಇದೆ. ಆಶಾ ಕಿರಣ ಸೇವಾ ಟ್ರಸ್ಟ್‌ ಬೆಂಗಳೂರಿನಲ್ಲಿ ಆರೋಗ್ಯ, ಶಿಕ್ಷಣ, ಅಂಗವಿಕಲರ ಕಲ್ಯಾಣ ಮತ್ತು ಮಹಿಳೆಯರ ಸಬಲೀಕರಣ ಕಾರ್ಯದಲ್ಲಿ ಆಶಾ ಕಿರಣ ಸೇವಾ ಟ್ರಸ್ಟ್‌ ತೊಡಗಿಸಿಕೊಂಡಿದೆ. ರೇಷನ್‌ ಕಿಟ್‌ಗಳು, ಮಾಸ್ಕ್‌ಗಳು, ತರಕಾರಿ ಮತ್ತಿತರ ವಸ್ತುಗಳನ್ನು ಈ ಸಂಸ್ಥೆ ಸಂಕಷ್ಟದಲ್ಲಿರುವವರಿಗೆ ನೀಡಿದೆ. ಈ ಸಂಸ್ಥೆಯ ಕಾರ್ಯಕರ್ತರು ಕೊಳೆಗೇರಿ ಪ್ರದೇಶಕ್ಕೆ ತೆರಳಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ಉದ್ಯೋಗ ಕಳೆದುಕೊಂಡವರಿಗೂ ಈ ಸಂಸ್ಥೆ ನೆರವಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಗಾರ್ಮೆಂಟ್‌ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ರೇಷನ್‌ ಕಿಟ್‌ಗಳನ್ನು ಒದಗಿಸುವುದು ಸೇರಿದಂತೆ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಈ ಸಂಸ್ಥೆ ಉದ್ದೇಶಿಸಿದೆ. ಜತೆಗೆ, ಮಕ್ಕಳಿಗೆ ಅಗತ್ಯ ಇರುವ ಪೌಷ್ಟಿಕಾಂಶ ಆಹಾರವನ್ನು ಒದಗಿಸುವ ಯೋಜನೆ ರೂಪಿಸಲು ನಿರ್ಧರಿಸಿದೆ. ಹೆಡ್‌ಸ್ಟ್ರೀಮ್ಸ್‌ ಕಳೆದ 12 ವರ್ಷಗಳಿಂದ ರಾಜ್ಯದಲ್ಲಿ ‘ಹೆಡ್‌ಸ್ಟ್ರೀಮ್ಸ್‌’ ಸಂಸ್ಥೆ ಜೀವನೋಪಾಯದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ 87 ಹಳ್ಳಿಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸುಮಾರು 5,000 ಜನರಿಗೆ ಈ ಸಂಸ್ಥೆ ನೆರವಾಗಿದೆ. ಸುಮಾರು 3,000 ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಇತರ ಮಕ್ಕಳಿಗೆ ಕಲಿಕೆ ಮತ್ತು ಆಟದ ಸಾಮಗ್ರಿಗಳನ್ನು ಈ ಸಂಸ್ಥೆ ನೀಡಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಮುದಾಯ ಶಿಕ್ಷಣ ಸ್ವಯಂ ಸೇವಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಿದೆ. ಸಾಂಕ್ರಾಮಿಕ ರೋಗದಿಂದ ಗಾರ್ಮೆಂಟ್‌ ಕಾರ್ಖಾನೆಗಳು, ಕಲ್ಲು ಗಣಿಗಾರಿಕೆ, ಇಟ್ಟಿಗೆ ತಯಾರಿಸುವ ಘಟಕಗಳು ಮತ್ತು ನೀಲಗಿರಿ ಪ್ಲಾಂಟೇಷನ್‌ಗಳಲ್ಲಿ ಕೆಲಸ ಕಳೆದುಕೊಂಡ ಮಹಿಳೆಯರಿಗೆ ನೆರವಾಗಲು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರವನ್ನು ‘ಹೆಡ್‌ಸ್ಟ್ರೀಮ್ಸ್‌ ಸ್ಥಾಪಿಸಲಿದೆ. ಜೇಡಿಮಣ್ಣು ಸೇರಿದಂತೆ ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಉನ್ನತ ಮಟ್ಟದ ಕರಕುಶಲ ವಸ್ತುಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಮಹಿಳೆಯರಿಗೆ ತರಬೇತಿ ನೀಡಲು ಈ ಸಂಸ್ಥೆ ಉದ್ದೇಶಿಸಿದೆ. ಗ್ರಾಮ ಪಂಚಾಯಿತಿಗಳ ನೆರವಿನಿಂದ ಇದೇ ರೀತಿಯ ತರಬೇತಿ ಕೇಂದ್ರಗಳನ್ನು ಇತರ ಗ್ರಾಮಗಳಲ್ಲಿಯೂ ತೆರೆಯಲು ಉದ್ದೇಶಿಸಿದೆ. ಲೆಟ್ಸ್‌ ಬಿ ದಿ ಚೇಂಜ್‌ ಯುವ ಸ್ವಯಂ ಸೇವಕರನ್ನು ಒಳಗೊಂಡಿರುವ ‘ಲೆಟ್ಸ್‌ ಬಿ ದಿ ಚೇಂಜ್‌’ ಸಂಸ್ಥೆಯು ‘ಕ್ಲೀನ್‌ ಬೆಂಗಳೂರು’ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಕೋವಿಡ್‌ ಪರಿಹಾರ ಯೋಜನೆಯ ಭಾಗವಾಗಿ ಸುಮಾರು 500 ಕುಟುಂಬಗಳಿಗೆ ಈ ಸಂಸ್ಥೆ ನೆರವಾಗಿತ್ತು. ಈ ವರ್ಷ ಮೇ ತಿಂಗಳಲ್ಲಿ ದಕ್ಷಿಣ ಬೆಂಗಳೂರಿನಲ್ಲಿನ ಸುಮಾರು 10,000 ಕುಟುಂಬಗಳಲ್ಲಿನ ರೋಗಿಗಳು ಗುಣಮುಖರಾಗುವವರೆಗೂ ಈ ಸಂಸ್ಥೆ ನೆರವು ನೀಡಿದೆ. ಜತೆಗೆ, ಕುಟುಂಬಗಳ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸಮೀಕ್ಷೆಯನ್ನು ಸಹ ನಡೆಸಿದೆ. ಉಚಿತವಾಗಿ ಕೋವಿಡ್‌ ಪರೀಕ್ಷೆ ಮತ್ತು ಲಸಿಕಾ ಅಭಿಯಾನವನ್ನು ಸಹ ಈ ಸಂಸ್ಥೆ ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾನವ ಸಂಪನ್ಮೂಲಗಳು ಮತ್ತು ಅಗತ್ಯ ಇರುವ ವಸ್ತುಗಳನ್ನು ಈ ಸಂಸ್ಥೆ ಒದಗಿಸಿದೆ. ಮುಂದಿನ ಒಂದು ವರ್ಷ ‘ವಿ ಸ್ಟ್ಯಾಂಡ್‌ ಟುಗೆದರ್‌’ ಎನ್ನುವ ಅಭಿಯಾನ ಆರಂಭಿಸಿರುವ ಈ ಸಂಸ್ಥೆಯು, ಸಹಾಯವಾಣಿ ಮೂಲಕ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಆಮ್ಲಜನಕ ಒದಗಿಸಲು ಮತ್ತು ಇತರ ವೈದ್ಯಕೀಯ ನೆರವು ನೀಡಲು (ಬೆಡ್‌ ಕಾಯ್ದಿರಿಸುವುದು, ವೈದ್ಯರ ಸಮಾಲೋಚನೆ ಇತ್ಯಾದಿ) ಉದ್ದೇಶಿಸಿದೆ. ಭವಿಷ್ಯದಲ್ಲಿಯೂ, ದಕ್ಷಿಣ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಆಮ್ಲಜನಕ ಮರುಭರ್ತಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಸ್ನೇಹಾ(ಎಸ್‌ಎನ್‌ಇಎಚ್‌ಎ)– ಸೊಸೈಟಿ ಫಾರ್‌ ಇಂಟೆಗ್ರೇಟೆಡ್‌ ಕಮ್ಯೂನಿಟಿ ಡೆವಲಪ್‌ಮೆಂಟ್‌ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಮೂಲದ ಸೊಸೈಟಿ ಫಾರ್‌ ಇಂಟೆಗ್ರೇಟೆಡ್‌ ಕಮ್ಯೂನಿಟಿ ಡೆವಲಪ್‌ಮೆಂಟ್‌– ‘ಸ್ನೇಹಾ’(ಎಸ್‌ಎನ್‌ಇಎಚ್‌ಎ) ಸಂಸ್ಥೆಯು 1994ರಿಂದ ದೇವದಾಸಿ ಕುಟುಂಬಗಳ ಸಬಲೀಕರಣ ಕಾರ್ಯದಲ್ಲಿ ತೊಡಗಿದೆ. ಗ್ರಾಮೀಣ ಸಮುದಾಯಗಳ ಸಾಮರ್ಥ್ಯ ವೃದ್ಧಿಗೆ ಶ್ರಮಿಸುತ್ತಿರುವ ಈ ಸಂಸ್ಥೆಯು, ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೋವಿಡ್‌ ಹಬ್ಬಿದ ಬಳಿಕ, ವಿವಿಧ ರೀತಿಯಲ್ಲಿ ದೇವದಾಸಿ ಕುಟುಂಬಗಳಿಗೆ ಈ ಸಂಸ್ಥೆ ನೆರವಾಗುತ್ತಿದೆ. ಕೋವಿಡ್‌–19 ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದು, 1,000 ಕುಟುಂಬಗಳಿಗೆ ರೇಷನ್‌ ಕಿಟ್‌ಗಳನ್ನು ಒದಗಿಸಿದೆ. ಎರಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕೋವಿಡ್‌ ಆರೈಕೆ ಕೇಂದ್ರಗಳಿಗೆ ನೆರವಾಗಿದೆ. ಜತೆಗೆ, ದಾವಣಗೆರೆ ಜಿಲ್ಲೆಯ ಕೋವಿಡ್‌ ಆರೈಕೆ ಕೇಂದ್ರಕ್ಕೂ ನೆರವು ನೀಡಿದೆ. ಸಾಮಾನ್ಯವಾಗಿ ದೇವದಾಸಿ ಮಹಿಳೆಯರೇ ಕುಟುಂಬದಲ್ಲಿ ಏಕೈಕ ಆದಾಯ ಗಳಿಸುವ ಸದಸ್ಯರಾಗಿರುತ್ತಾರೆ. ಹೀಗಾಗಿ, ಈ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕೋವಿಡ್‌ ಪರಿಹಾರ ಚಟುವಟಿಕೆಗಳ ಮೂಲಕ ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕಿನ 17 ಗ್ರಾಮಗಳಲ್ಲಿನ 1,051 ಕುಟುಂಬಗಳಿಗೆ ನೆರವು ನೀಡಲು ‘ಸ್ನೇಹಾ’ ಉದ್ದೇಶಿಸಿದೆ. ಅಲ್ಲಮಾ ಇಕ್ಬಾಲ್ ಎಜುಕೇಷನ್ ಸೊಸೈಟಿ ಬೀದರ್‌ನ ಅಲ್ಲಮಾ ಇಕ್ಬಾಲ್‌ ಏಜುಕೇಷನ್‌ ಸೊಸೈಟಿಯ ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹವು 2020ರಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವಿವಿಧ ರೀತಿಯಲ್ಲಿ ಪಾಲ್ಗೊಂಡಿದೆ. ಮೊದಲ ಅಲೆಯ ಸಂದರ್ಭದಲ್ಲಿ ಸಂಸ್ಥೆಯ ಕಟ್ಟಡವನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಜಿಲ್ಲಾಡಳಿತಕ್ಕೆ ನೀಡಿತ್ತು. ಜತೆಗೆ 10 ವಾಹನಗಳನ್ನು ಕೋವಿಡ್‌ ಕುರಿತು ಜಾಗೃತಿ ಮೂಡಿಸಲು ನೀಡಿತ್ತು. ಮೊದಲನೇ ಅಲೆಯ ಸಂದರ್ಭದಲ್ಲಿ ಸುಮಾರು 6,000 ಕುಟುಂಬಗಳಿಗೆ ರೇಷನ್‌ ಕಿಟ್‌ಗಳನ್ನು ನೀಡಲಾಗಿತ್ತು. ಎರಡನೇ ಅಲೆಯ ಸಂದರ್ಭದಲ್ಲಿ ಪ್ರತಿದಿನ 1,000 ಬಡಜನರಿಗೆ ಮತ್ತು ಹೋಮ್‌ ಕ್ವಾರಂಟೈನ್‌ಗೆ ಒಳಗಾದವರಿಗೆ ಆಹಾರ ವಿತರಿಸಿತ್ತು. ಉಚಿತ ಆಂಬುಲೆನ್ಸ್‌ ಸೇವೆ ಮತ್ತು ಅಂತ್ಯಕ್ರಿಯೆಗೆ ನೆರವು ನೀಡುವ ಜತೆಗೆ, ಆಮ್ಲಜನಕ ವ್ಯವಸ್ಥೆ ಹೊಂದಿರುವ 30 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಿದೆ. ರೋಗಿಗಳಿಗೆ ಆನ್‌ಲೈನ್‌ ಮೂಲಕ ವೈದ್ಯಕೀಯ ಸಲಹೆ ನೀಡಲು 30 ವೈದ್ಯರ ತಂಡವನ್ನು ಸಂಸ್ಥೆ ರಚಿಸಿದೆ. ಬೀದರ್‌ನಲ್ಲಿ ಎರಡು 300 ಹಾಸಿಗೆಗಳ ಕೋವಿಡ್‌ ಆರೈಕೆ ಕೇಂದ್ರಗಳನ್ನು ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸಂಸ್ಥೆ ನೆರವಾಗಿದೆ. ಜತೆಗೆ ಸಹಾಯವಾಣಿಯನ್ನು ನಿರ್ವಹಿಸುತ್ತಿದೆ. ಯುವಲೋಕ ಫೌಂಡೇಷನ್‌ ಬೆಂಗಳೂರಿನ ಯುವಲೋಕ ಫೌಂಡೇಷನ್‌ ಕೋವಿಡ್‌–19 ಹಬ್ಬಿದ ದಿನದಿಂದಲೂ ಆರೋಗ್ಯ ರಕ್ಷಣೆ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಆಟೊ ಚಾಲಕರು, ವಲಸೆ ಕಾರ್ಮಿಕರು, ರೈತರು, ತೃತೀಯ ಲಿಂಗಿಗಳು, ಶಿಕ್ಷಕರು, ಸ್ಮಶಾನದಲ್ಲಿ ಶವ ಹೂಳುವವರು, ಅಂಗವಿಕಲರು, ದಿನಗೂಲಿ ಕಾರ್ಮಿಕರು ಮತ್ತಿತರರಿಗೆ ನೆರವು ನೀಡುತ್ತಿದೆ. 10,000 ರೇಷನ್‌ ಕಿಟ್‌ಗಳನ್ನು ಈ ಸಂಸ್ಥೆ ವಿತರಿಸಿದೆ. ಮೂರು ತಿಂಗಳ ಕಾಲ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಊಟ ವಿತರಿಸಿದೆ. ಶುಲ್ಕ ಪಾವತಿಸಲು ಸಾಧ್ಯವಾಗದ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಹೊಲಿಗೆ ಯಂತ್ರವನ್ನು ನೀಡಿದೆ. ಬಡವರಿಗೆ ವೈದ್ಯಕೀಯ ನೆರವು ನೀಡಲು ಸಹಾಯಹಸ್ತ ಚಾಚಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಯುವಲೋಕ ಸಂಸ್ಥೆಯು ಸಂಕಷ್ಟದಲ್ಲಿರುವ ಬೀದಿ ವ್ಯಾಪಾರಿಗಳಿಗೆ ಪರಿಹಾರ ಒದಗಿಸುವ ಕೈಂಕರ್ಯದಲ್ಲಿ ತೊಡಗಿದೆ. ಜತೆಗೆ, ಕೋವಿಡ್‌ ರೋಗಿಗಳಿಂದ ಬರುವ ಕರೆಗಳನ್ನು ಸ್ವೀಕರಿಸಿ ಅಗತ್ಯ ನೆರವು ನೀಡುತ್ತಿದೆ. ದುರ್ಬಲ ವರ್ಗದ ಕುಟುಂಬಗಳಿಗೆ, ನಿರುದ್ಯೋಗಿ ಬಡವರು, ವಲಸೆ ಕಾರ್ಮಿಕರಿಗೆ ನೀಡಲು ಸಂಸ್ಥೆ ಉದ್ದೇಶಿಸಿದೆ. ಜತೆಗೆ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪೂರೈಸಲು ಉದ್ದೇಶಿಸಿದೆ. ಗ್ರಾಮ ವಿಕಾಸ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗ್ರಾಮ ವಿಕಾಸ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಕೋವಿಡ್‌–19 ಮೊದಲ ಅಲೆಯಲ್ಲಿ ಆಹಾರ ಕಿಟ್‌ಗಳು ಹಾಗೂ ಚಿಕಿತ್ಸೆಗಾಗಿ ಹಳ್ಳಿಗಳಿಂದ ಹೊರಗೆ ಹೋಗಲು ಸಾಧ್ಯವಾಗದ ‌ಕೋವಿಡ್‌ಯೇತರ ರೋಗಿಗಳಿಗೆ ಔಷಧವನ್ನು ಪೂರೈಸಿತ್ತು. ಈಗ, ದೇವರಾಯಸಮುದ್ರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಮುಳಬಾಗಿಲಿನ ಕೋವಿಡ್‌ ಆರೈಕೆ ಕೇಂದ್ರಕ್ಕೆ ನೆರವು ನೀಡಲು ಸಂಸ್ಥೆ ಉದ್ದೇಶಿಸಿದೆ. ಆಕ್ಸಿಮೀಟರ್‌, ಥರ್ಮಾಮೀಟರ್‌, ಗಾಲಿ ಕುರ್ಚಿಗಳು ಮುಂತಾದ ಅಗತ್ಯ ಇರುವ ಉಪಕರಣಗಳನ್ನು ಈ ಕೇಂದ್ರಗಳಿಗೆ ನೀಡಲು ಉದ್ದೇಶಿಸಿದೆ. ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಕೋವಿಡ್‌–19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಯೂಥ್‌ ಕ್ಲಬ್‌ನ ಸದಸ್ಯರಿಗೆ ಪಿಪಿಇ ಕಿಟ್‌ಗಳು, ಫೇಸ್‌ಶೀಲ್ಡ್‌ಗಳು, ಮಾಸ್ಕ್‌ಗಳು, ಸ್ಯಾನಿಟೈಸರ್‌ ಮತ್ತಿತರ ವಸ್ತುಗಳನ್ನು ನೀಡುವುದಾಗಿ ಸಂಸ್ಥೆ ತಿಳಿಸಿದೆ. ಜತೆಗೆ, ಅತ್ಯಂತ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ನೀಡಲು ಉದ್ದೇಶಿಸಿದೆ. ಕೃತಜ್ಞತಾ ಟ್ರಸ್ಟ್‌ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಕೋವಿಡ್ ಸಮಯದಲ್ಲಿ ಹಲವರಿಗೆ ನೆರವು ನೀಡಿದೆ. ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡ ಬಡವರಿಗೆ ಮತ್ತು ಆಹಾರದಿಂದ ವಂಚಿತರಾದವರಿಗೆ ಐಸೋಲೇಷನ್‌ ಕಿಟ್ ಮತ್ತು ದಿನಸಿ ಕಿಟ್‌ಗಳನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸಂಪನ್ಮೂಲಗಳ ಕೊರತೆಯಿರುವ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ (ಕೊಡಗು ಮತ್ತು ಮೈಸೂರು ಜಿಲ್ಲೆಗಳು) ಸೇವೆ ಸಲ್ಲಿಸುತ್ತಿರುವ ಕೃತಜ್ಞತಾ ಟ್ರಸ್ಟ್ 1,500 ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ವೈದ್ಯಕೀಯ ಕಿಟ್‌ ಮತ್ತು 400 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದೆ. ಇದರ ಜೊತೆಗೆ ತೃತೀಯ ಲಿಂಗಿಗಳಿಗೆ ಲಸಿಕಾ ಅಭಿಯಾನವನ್ನು ಆಯೋಜಿಸಿದೆ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಿದೆ. ದಿನಗೂಲಿ ಕಾರ್ಮಿಕರಿಗೆ ನೆರವು ನೀಡುವ ಜೊತೆಗೆ ಜಾಗೃತಿ ಅಭಿಯಾನವನ್ನು ಆಯೋಜಿಸಲು ಸಂಸ್ಥೆ ಯೋಜನೆ ಸಿದ್ಧಪಡಿಸಿದೆ. ಕಟ್ಟಡ ಕಾರ್ಮಿಕರು ಮತ್ತು ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವವರಿಗೆ ದಿನಸಿ ಸಾಮಗ್ರಿ ಒದಗಿಸಲು ಮುಂದಾಗಿದೆ. ಆರ್ಥಿಕ ನಷ್ಟದಿಂದಾಗಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅವರು ವಿದ್ಯಾರ್ಥಿ ವೇತನವನ್ನು ಸಹ ನೀಡುತ್ತಿದ್ದಾರೆ.
Last Updated 28 ಜೂನ್ 2021, 0:44 IST
ಪರಿಹಾರ ಕಾರ್ಯ‌ಕ್ಕಾಗಿ ಡಿಎಚ್–ಪಿವಿ ಟ್ರಸ್ಟ್‌ನಿಂದ 11 ಸಂಸ್ಥೆಗಳಿಗೆ ನೆರವು

ಮಕ್ಕಳ ಆಸರೆ ಕಸಿದ ಕೊರೊನಾ: ಹೆತ್ತವರ ಕಳೆದುಕೊಂಡ ಬಾಲಕಿಗೆ ಚಿಕ್ಕಮ್ಮನ ಆಸರೆ

‘ದೇವರ ಬಳಿ ಹೋದವರಿಗೆ’ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುವ ಕಂದಮ್ಮ
Last Updated 18 ಜೂನ್ 2021, 19:31 IST
ಮಕ್ಕಳ ಆಸರೆ ಕಸಿದ ಕೊರೊನಾ: ಹೆತ್ತವರ ಕಳೆದುಕೊಂಡ ಬಾಲಕಿಗೆ ಚಿಕ್ಕಮ್ಮನ ಆಸರೆ
ADVERTISEMENT
ADVERTISEMENT
ADVERTISEMENT