ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮಾರುಕಟ್ಟೆಗೆ ಐವಾ ಪ್ರೀಮಿಯಂ ಹೈ-ಫೈ ಸ್ಪೀಕರ್ಸ್ ಬಿಡುಗಡೆ

Last Updated 6 ಅಕ್ಟೋಬರ್ 2021, 6:16 IST
ಅಕ್ಷರ ಗಾತ್ರ

ಬೆಂಗಳೂರು: ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬ್ರ್ಯಾಂಡ್ ಐವಾ, ದೇಶದ ಮಾರುಕಟ್ಟೆಗೆ ನೂತನ ಮಾದರಿಯ ಹೈ-ಫೈ ಪ್ರೀಮಿಯಂ ಸ್ಪೀಕರ್ ಪರಿಚಯಿಸಿದೆ.

ಎಂಐ-ಎಕ್ಸ್ ಮತ್ತು ಎಸ್‌ಬಿ-ಎಕ್ಸ್ ಎನ್ನುವ ಎರಡು ಸರಣಿಗಳಲ್ಲಿ ಆಕರ್ಷಕ ವಿನ್ಯಾಸದ ಸ್ಪೀಕರ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಸಂಗೀತ ಪ್ರೇಮಿಗಳಿಗೆ ಮತ್ತು ದಿನನಿತ್ಯದ ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕಂಪನಿ ಹೇಳಿದೆ.

ಮನೆಯಲ್ಲಿ ಮತ್ತು ಹೊರಾಂಗಣ ಬಳಕೆಗೆ ಐವಾ ಹೈ-ಫೈ ಸ್ಪೀಕರ್ಸ್ ಸೂಕ್ತವಾಗಿದ್ದು, ರಿಚಾರ್ಚ್ ಮಾಡಬಲ್ಲ ಬ್ಯಾಟರಿ ಹೊಂದಿವೆ, ಅಲ್ಲದೆ ಪ್ರವಾಸ ಹೋಗುವ ಸಂದರ್ಭದಲ್ಲಿ, ಸಣ್ಣ ಸಮಾರಂಭಗಳಲ್ಲಿ ಮತ್ತು ಟಿವಿ, ಸ್ಮಾರ್ಟ್‌ಫೋನ್ ಜತೆ ಬಳಸಲು ಕೂಡ ಉತ್ತಮ ಆಯ್ಕೆ ಎಂದು ಐವಾ ಹೇಳಿದೆ.

ದರ ಮತ್ತು ಲಭ್ಯತೆ

ಎಂಐ-ಎಕ್ಸ್‌450 ಪ್ರೊ ಎನಿಗ್ಮಾ ಬೆಲೆ ₹59,990 ಮತ್ತು ಎಂಐ-ಎಕ್ಸ್ 150 ರೆಟ್ರೊ ಪ್ಲಸ್ ಎಕ್ಸ್ ದರ ₹24,990 ಇದೆ.

ಎಸ್‌ಬಿ-ಎಕ್ಸ್350ಎ ಮಾದರಿಗೆ ₹19,990 ಮತ್ತು ಎಸ್‌ಬಿ-ಎಕ್ಸ್‌350J ₹17,990 ಹಾಗೂ ಎಸ್‌ಬಿ-ಎಕ್ಸ್‌30 ದರ ₹2,799 ಇದೆ.

ಅಮೆಜಾನ್ ಆನ್‌ಲೈನ್, ರಿಲಯನ್ಸ್ ಡಿಜಿಟಲ್ ಮತ್ತು ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಐವಾ ಸ್ಪೀಕರ್ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT