ಮನೆಗೆ ಸ್ನೇಹಿತರು ಬಂದಿದ್ದಾರೆ. ‘ನಾಳೆ ಎಲ್ಲೋ ಹೋಗೋಣ ಬಾ’ ಎಂದು ನಿಮ್ಮ ಸ್ನೇಹಿತರು ಕರೆಯುತ್ತಾರೆ. ಆಗ ನಿಮಗೆ ನಾಳೆ 10 ಗಂಟೆಗೆ ಒಂದು ಮೀಟಿಂಗ್ ಇರುವುದು ನೆನಪಾಗುತ್ತದೆ. ‘ಇಲ್ಲ ಮಾರಾಯ... ನಾಳೆ 10 ಗಂಟೆಗೆ ಒಂದು ಮೀಟಿಂಗ್ ಇದೆ. ನಾನು ಬರೋಕಾಗಲ್ಲ’ ಎಂದು ಹೇಳುತ್ತೀರಿ. ಅಷ್ಟೇ... ನಾಳೆ 9.30ಕ್ಕೆ ಸರಿಯಾಗಿ ನಿಮಗೆ ನಿಮ್ಮ ಮನೆಯಲ್ಲಿರುವ ಯಾವುದೋ ಒಂದು ಡಿಜಿಟಲ್ ಸಾಧನ ‘ಮನುಷ್ಯನೇ... ಇನ್ನರ್ಧ ಗಂಟೆಗೆ ಒಂದು ಮೀಟಿಂಗ್ ಇದೆ. ರೆಡಿಯಾಗಿರು!’ ಎಂದು ಹೇಳುತ್ತದೆ! ನೀವು ಆ ಡಿಜಿಟಲ್ ಸಾಧನಕ್ಕೆ ‘ನಾಳೆ ಮೀಟಿಂಗ್ ಇದೆ. ನೆನಪಿಸು’ ಎಂದು ಹೇಳಿರುವುದಿಲ್ಲ. ಆದರೆ, ಅದು ನಿಮ್ಮ ಮೇಲೆ ಒಂದು ಕಣ್ಣು ಮತ್ತು ಕಿವಿ ಇಟ್ಟಿರುತ್ತದೆ. ನಿಮ್ಮ ಮಾತನ್ನು ಕೇಳಿಸಿಕೊಂಡು ಸೈಲೆಂಟ್ ಆಗಿಯೇ ಒಂದು ಅಲರ್ಟ್ ಕ್ರಿಯೇಟ್ ಮಾಡಿರುತ್ತದೆ. ಅದನ್ನು ಕ್ಯಾಲೆಂಡರ್ನಲ್ಲೂ ಹಾಕಿಟ್ಟಿರುತ್ತದೆ. ಒಂದು ರೀತಿಯಲ್ಲಿ, ನಿಮ್ಮ ಜೀವಂತ ಪರ್ಸನಲ್ ಅಸಿಸ್ಟೆಂಟ್ ಇದ್ದ ಹಾಗೆ. ಆತ ಹೇಗೆ ನೀವು ಫೋನ್ನಲ್ಲಿದ್ದಾಗ ಮೀಟಿಂಗ್ಗೆ ಒಪ್ಪಿಕೊಂಡಿದ್ದರೂ, ಡೈರಿಯಲ್ಲಿ ಬರೆದುಕೊಂಡು ನಿಮ್ಮನ್ನು ಆ ಕ್ಯಾಲೆಂಡರ್ಗೆ ತಕ್ಕಂತೆ ಮುಂದಡಿ ಇಡುವ ಹಾಗೆ ಮಾಡುವ ರೀತಿ ಇದು!

ಇಂಥದ್ದೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದೇ ರೋಮಾಂಚನಕಾರಿ ಅನ್ನಿಸುತ್ತದೆ. ಇದನ್ನು ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಈ ಹಂತಕ್ಕೆ ಕಾಲಿಡುವ ಸನಿಹದಲ್ಲಿ ನಾವಿದ್ದೇವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಾಧನಗಳು ಈ ತಂತ್ರಜ್ಞಾನಕ್ಕೆ ಇನ್ನಷ್ಟು ನೂಕುಬಲವನ್ನು ನೀಡಿವೆ. ಈಗಾಗಲೇ ಇಂಥ ಕೆಲಸ ಮಾಡುವ ಸಾಮರ್ಥ್ಯ ಇರುವ ಸಾಧನಗಳು ನಮ್ಮ ಸುತ್ತಮುತ್ತ ಇವೆ. ಉದಾಹರಣೆಗೆ, ಅಲೆಕ್ಸಾ ಬಹುತೇಕ ಇದೇ ಕೆಲಸವನ್ನು ಮಾಡುತ್ತದೆ. ಆದರೆ, ಅದಕ್ಕೆ ನಾವು ಸ್ಪಷ್ಟವಾಗಿ ಕಮಾಂಡ್ ಕೊಡಬೇಕು. ಅಲೆಕ್ಸಾ ಎಂದು ಕರೆದು ಅದಕ್ಕೆ ನಾವು ಆದೇಶ ಕೊಡದಿದ್ದರೆ ನಮ್ಮ ಮಾತನ್ನು ಅದು ಕೇಳಿಸಿಕೊಳ್ಳುವುದಿಲ್ಲ. ‘ನೀ ಯಾರೋ ನಾ ಯಾರೋ’ ಎಂಬಂತಿರುತ್ತದೆ. ಈಗ ಅಲೆಕ್ಸಾದ ಹೊಸ ಆವೃತ್ತಿ ಬಿಡುಗಡೆಯಾಗಿದ್ದು, ಅದು ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಅನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿದೆ.

ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಅಂದರೆ...

ಈ ಕಲ್ಪನೆ ಹೊಸದೇನೂ ಅಲ್ಲ. ಕಳೆದ ಆರೇಳು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಅಮೆಜಾನ್ನ ಅಲೆಕ್ಸಾ ಹಾಗೂ ಗೂಗಲ್ ಅಸಿಸ್ಟೆಂಟ್ ಬಂದಾಗಲಂತೂ ‘ಇನ್ನೇನು ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಸದ್ಯದಲ್ಲೇ ನಮ್ಮ ಅನುಭವಕ್ಕೆ ಬರಲಿದೆ’ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅದರ ನಂತರ ಆ ನಿಟ್ಟಿನಲ್ಲಿ ಮಹತ್ವದ ಸಾಧನೆಯೇನೂ ಆದಂತೆ ಕಾಣಲಿಲ್ಲ. ಆದರೆ, ಈಗ ಜೆನರೇಟಿವ್ ಎ.ಐ. ಬಂದ ಮೇಲೆ ಮತ್ತೆ ಈ ಕಲ್ಪನೆ ಹೊಸ ಚಿಗುರೊಡೆದು ನಿಂತಿದೆ. ಅದಕ್ಕೆ ಪೂರಕವಾಗಿ ಅಮೆಜಾನ್ ಕೂಡ ತನ್ನ ಅಲೆಕ್ಸಾ ಪ್ಲಸ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಎಂಬುದು ನಮ್ಮ ಮನೆಯಲ್ಲಿರುವ ಅಥವಾ ಒಂದಕ್ಕೊಂದು ಕನೆಕ್ಟ್ ಆಗಿರುವ ಎಲ್ಲ ಡಿಜಿಟಲ್ ಸಾಧನಗಳೂ ಸ್ವಯಂಚಾಲಿತವಾಗಿ ನಮ್ಮ ಸ್ಪಷ್ಟ ಆದೇಶ ಇಲ್ಲದೆಯೂ ನಮ್ಮ ಚಲನವಲನಗಳಿಗೆ ಅನುಗುಣವಾಗಿ ಕೆಲಸ ಮಾಡುವುದು!

ಲೇಖನದ ಆರಂಭದಲ್ಲಿ ನೀಡಿದ ಉದಾಹರಣೆಯ ಹಾಗೆ, ನಾವು ಸ್ಪಷ್ಟವಾಗಿ ಡಿಜಿಟಲ್ ಸಾಧನಕ್ಕೆ ಕ್ಯಾಲೆಂಡರ್ನಲ್ಲಿ ಏನನ್ನೋ ಗುರುತು ಮಾಡುವುದಕ್ಕೆ ಹೇಳದೇ ಇದ್ದರೂ ಅದು ನಮ್ಮ ಮಾತನ್ನು ಸ್ವತಃ ಕೇಳಿಸಿಕೊಂಡು ಮಾಡಿಬಿಡುತ್ತದೆ. ನಾಳೆ ತರಕಾರಿ ಹಾಗೂ ದಿನಸಿ ಖಾಲಿಯಾಗುತ್ತದೆ ಎಂದು ಗಂಡನಿಗೆ ಹೆಂಡತಿ ಹೇಳಿದರೆ, ಅದನ್ನು ಕೇಳಿಸಿಕೊಂಡು, ಈ ಹಿಂದೆ ಯಾವ ಯಾವ ರೀತಿಯ ದಿನಸಿ ಹಾಗೂ ತರಕಾರಿಯನ್ನು ಈ ವ್ಯಕ್ತಿ ಆರ್ಡರ್ ಮಾಡುತ್ತಿದ್ದರು ಎಂಬುದನ್ನು ಆಧರಿಸಿ ಅಂತಹ ಎಲ್ಲ ತರಕಾರಿ ಹಾಗೂ ದಿನಸಿಯನ್ನು ಇ–ಕಾಮರ್ಸ್ನಿಂದ ಆರ್ಡರ್ ಮಾಡುತ್ತದೆ!

ಒಂದು ಕಾರ್ಯಕ್ರಮ ಅಥವಾ ಸಭೆ ನಡೆಯುತ್ತಿರುವಾಗ ಈ ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಸಾಧನವು ಸುಮ್ಮನೆ ಕುಳಿತು ಸಭೆಯ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತದೆ. ಇದನ್ನು ಕ್ಯಾಮೆರಾ ಮತ್ತು ಮೈಕ್ಗೂ ಕನೆಕ್ಟ್ ಮಾಡಿದ್ದರೆ, ಮಾತನಾಡುವವರ ಮೇಲೆ ಕ್ಯಾಮೆರಾ ಫೋಕಸ್ ಆಗುತ್ತದೆ ಜೊತೆಗೆ, ಮೈಕ್ ಕೂಡ ಮಾತನಾಡುವವರ ಫ್ರೀಕ್ವೆನ್ಸಿಯನ್ನು ಸರಿಯಾಗಿ ಗ್ರಹಿಸಿ, ಆಚೆ ಈಚೆಯಿಂದ ಕೇಳಿಬರುವ ಧ್ವನಿಗಳನ್ನು ಕಡಿಮೆ ಮಾಡಿ, ಮಾತನಾಡುವವರ ಧ್ವನಿ ಮಾತ್ರ ಹೆಚ್ಚು ಸ್ಪಷ್ಟವಾಗಿ ಕೇಳಿಸುವಂತೆ ಮಾಡುತ್ತದೆ.

ಈ ಆ್ಯಂಬಿಯೆಂಟ್ ಕಂಪ್ಯೂಟಿಂಗ್ನ ಅತ್ಯಂತ ಮುಖ್ಯ ಅನುಕೂಲವೆಂದರೆ, ನಾವು ಕಂಪ್ಯೂಟಿಂಗ್ ಸಾಧನಕ್ಕೆ ಗಿಣಿಗೆ ಹೇಳಿದ ಹಾಗೆ ತಿದ್ದಿ ತೀಡಿ ಸೂಚನೆ ಕೊಡಬೇಕಿಲ್ಲ. ಅಷ್ಟಕ್ಕೂ, ಅದಕ್ಕೆ ನಾವು ಸೂಚನೆಯನ್ನೇ ಕೊಡಬೇಕಿಲ್ಲ! ನಮ್ಮ ದೈನಂದಿನ ಸಂವಹನವನ್ನೇ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಕೆಲಸ ಮಾಡುತ್ತದೆ.

ಸಂವಹನದ ವಿಧಾನವೇ ಬದಲು?:

ಡಿಜಿಟಲ್ ಜಗತ್ತಿನಲ್ಲಿ ಆದ ಒಂದೊಂದು ಬದಲಾವಣೆಯೂ ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆಗಳನ್ನು ಉಂಟುಮಾಡಿದೆ. ಟಿ.ವಿ. ಬಂದ ಕಾಲಕ್ಕೆ ನಮ್ಮ ಮನರಂಜನೆಯ ವಿಧಾನವೇ ಬದಲಾಯಿತು. ಮೊಬೈಲ್ ಬಂದಾಗ ನಮ್ಮ ಸಂವಹನದ ವಿಧಾನ ಬದಲಾಯಿತು. ಸ್ಮಾರ್ಟ್ಫೋನ್ ಬಂದಾಗ ಇಡೀ ಜಗತ್ತಿಗೇ ನಮಗೆ ಸುಲಭದಲ್ಲಿ ಆಕ್ಸೆಸ್ ಸಿಕ್ಕ ಹಾಗಾಯಿತು. 5gbps ಡೇಟಾವನ್ನು ಸಾಗಿಸುವ ಸಾಮರ್ಥ್ಯವಿರುವ ವೈಫೈ 7 ಬಳಕೆಗೆ ಬರುತ್ತಿರುವುದರಿಂದ ಹಲವು ಡಿಜಿಟಲ್ ಸಾಧನಗಳನ್ನು ಕನೆಕ್ಟ್ ಮಾಡುವುದು ಮತ್ತು ಅದರ ಜೊತೆಗೆ ಸಂವಹನ ನಡೆಸುವುದು ತುಂಬಾ ಸುಲಭವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ನಾವು ‘ಐಒಟಿ’ಅಂದರೆ ‘ಇಂಟರ್ನೆಟ್ ಆಫ್ ಥಿಂಗ್ಸ್’ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಆ್ಯಂಬಿಯೆಂಟ್ ಕಂಪ್ಯೂಟಿಂಗ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ಯಾವ ಯಾವ ಸಾಧನಗಳನ್ನು ನಾವು ಕನೆಕ್ಟ್ ಮಾಡಬಹುದು ಎಂಬುದನ್ನು ಯೋಚಿಸಿದರೆ, ಹೀಗೆ ಕನೆಕ್ಟ್ ಆದ ಸಾಧನಗಳು ಮುಂದೇನು ಮಾಡುತ್ತವೆ ಎಂಬುದನ್ನು ಆ್ಯಂಬಿಯೆಂಟ್ ಕಂಪ್ಯೂಟಿಂಗ್ ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ, ಐಒಟಿಗಿಂತ ಒಂದು ಹೆಜ್ಜೆಯನ್ನು ನಾವು ಅದಾಗಲೇ ಮುಂದಿಟ್ಟಾಗಿದೆ. ಆ ಹೆಜ್ಜೆ ಇನ್ನು ಜೆನ್ ಎ.ಐ. ಮತ್ತು ಆಗ್ಮೆಂಟೆಡ್ ರಿಯಾಲಿಟಿಯಿಂದ ಇನ್ನಷ್ಟು ಗಟ್ಟಿಯಾಗಬೇಕಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.