ಮಂಗಳವಾರ, ಸೆಪ್ಟೆಂಬರ್ 21, 2021
20 °C

Apple Event 2021: ಹೊಸ ಆ್ಯಪಲ್ ಐಫೋನ್, ಐಪ್ಯಾಡ್ ಮತ್ತು ವಾಚ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple India NewsRoom

ಬೆಂಗಳೂರು: ವರ್ಷದ ಬಹುನಿರೀಕ್ಷಿತ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಸರಣಿಯ ಗ್ಯಾಜೆಟ್‌ಗಳನ್ನು ಪರಿಚಯಿಸಲಾಗಿದೆ.

ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಆ್ಯಪಲ್ ಬಿಡುಗಡೆ ಮಾಡಿದೆ.

ಐಫೋನ್ 13 ಸರಣಿಯಲ್ಲಿ, ಐಫೋನ್ 13, 13 ಮಿನಿ ಮತ್ತು ಐಫೋನ್ 13 ಪ್ರೊ ಹಾಗೂ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ನೂತನ ಸರಣಿಯ ಐಪ್ಯಾಡ್ ಬೆಲೆ ದೇಶದಲ್ಲಿ ₹30,900 ರಿಂದ ಆರಂಭವಾಗಲಿದೆ. ಐಪ್ಯಾಡ್ ಮಿನಿ ದರ ₹46,900 ರಿಂದ ಆರಂಭವಾದರೆ, ಐಪೋನ್ 13 ಮಿನಿ ದರ ₹69,900 ರಿಂದ ಮತ್ತು ಐಫೋನ್ 13 ಪ್ರೊ ಸರಣಿ ದರ ₹1,19,900 ದಿಂದ ಆರಂಭವಾಗುತ್ತದೆ.

ಆದರೆ ಹೊಸ ವಾಚ್ ಸಿರೀಸ್ 7 ದರ ಮತ್ತು ಲಭ್ಯತೆ ಕುರಿತು ವಿವರವನ್ನು ಆ್ಯಪಲ್ ಬಿಡುಗಡೆ ಮಾಡಿಲ್ಲ. ಉಳಿದಂತೆ, ಐಪ್ಯಾಡ್ ತಕ್ಷಣದಿಂದಲೇ ಖರೀದಿಗೆ ಲಭ್ಯವಿದ್ದರೆ, ಐಫೋನ್ 13 ಸರಣಿ ಸೆ. 17ರಿಂದ ಪ್ರಿ ಬುಕಿಂಗ್ ಆರಂಭವಾಗಿ, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು