ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಚುವ ಐಫೋನ್ ತಯಾರಿಕೆಯತ್ತ ಆ್ಯಪಲ್‌ ಚಿತ್ತ!

Published 7 ಫೆಬ್ರುವರಿ 2024, 14:53 IST
Last Updated 7 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಮಡಚುವ ಫೋನ್ ತಯಾರಿಕೆಯತ್ತ ಆ್ಯಪಲ್ ಕಂಪನಿ ಚಿತ್ತ ಹರಿಸಿದ್ದು, ಕನಿಷ್ಠ ಎರಡು ಮಾದರಿಯ ಫೋಲ್ಡಬಲ್ ಫೋನ್‌ನ ಪ್ರತಿಕೃತಿಯನ್ನು ಅದು ಸಿದ್ಧಪಡಿಸಿದೆ ಎಂದು ಖಚಿತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕಪ್ಪೆಚಿಪ್ಪಿನಂತೆ ಮಡಚುವ ವಿನ್ಯಾಸದ ಫೋನ್‌ಗಳು ಈ ಪಟ್ಟಿಯಲ್ಲಿದೆ. ಕಂಪನಿಯ ಅಭಿವೃದ್ಧಿ ದೃಷ್ಟಿಯಿಂದಲೇ ಈ ಯೋಜನೆ ರೂಪಿಸಲಾಗಿದೆ. ಆದರೆ 2024 ಅಥವಾ 2025ರಲ್ಲಿ ಇದು ತಯಾರಿಕೆ ಹಂತಕ್ಕೆ ಬರುವುದು ಅನುಮಾನ ಎಂದೆನ್ನಲಾಗಿದೆ.

ಎರಡು ಭಿನ್ನ ಅಳತೆಯ ಮಡಚುವ ಫೋನ್‌ಗಳಿಗೆ ಅಗತ್ಯವಿರುವ ಬಿಡಿಭಾಗಗಳ ಅಭಿವೃದ್ಧಿಗೆ ಏಷ್ಯಾದ ಎರಡು ತಯಾರಕರನ್ನು ಆ್ಯಪಲ್ ಸಂಪರ್ಕಿಸಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಆದರೆ ಇದಕ್ಕೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಐಫೋನ್ 15ರ ಸರಣಿಯ ಫೋನ್‌ಗಳ ನಂತರ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಆ್ಯಪಲ್ ಮುಂದಾಗಿದೆ. ಜತೆಗೆ ತನ್ನ ವಿಸ್ತೃತ ಶ್ರೇಣಿಯ ಸಾಲಿಗೆ ಮಡಚುವ ಫೋನ್‌ಗಳನ್ನು ಸೇರಿಸಿಕೊಳ್ಳಲು ಕಂಪನಿ ಬಯಸಿದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT