ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್‌ನ ಹೊಸ 'ಐಫೋನ್‌ ಎಸ್‌ಇ' 5ಜಿ ಫೋನ್‌ ಅನಾವರಣ: ಆರಂಭಿಕ ಬೆಲೆ ₹43,900

Last Updated 9 ಮಾರ್ಚ್ 2022, 7:41 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಆ್ಯಪಲ್‌ ಕಂಪನಿಯು ಹೊಸ ಫೋನ್‌ 'ಐಫೋನ್‌ ಎಸ್‌ಇ 3' ಅನಾವರಣ ಮಾಡಿದೆ. ಸಮರ್ಥವಾದ ಎ15 ಬಯೋನಿಕ್‌ ಚಿಪ್‌, 5ಜಿ ತಂತ್ರಜ್ಞಾನ, ಸುದೀರ್ಘ ಬ್ಯಾಟರಿ ಚಾರ್ಜ್ ಉಳಿಕೆ, ಹೊಸ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಈ ಫೋನ್‌ ಗಮನ ಸೆಳೆದಿದೆ.

ಐಒಎಸ್‌ 15 ಕಾರ್ಯಾಚರಣೆಯ ವ್ಯವಸ್ಥೆ ಒಳಗೊಂಡಿರುವ ಐಫೋನ್‌ ಎಸ್‌ಇ, ವಿನ್ಯಾಸ ಮತ್ತು ಬೆಲೆಯ ಕಾರಣಗಳಿಂದಲೂ ಸದ್ದು ಮಾಡುತ್ತಿದೆ. ಗೇಮಿಂಗ್‌, ಆಗ್ಮೆಂಟೆಡ್ ರಿಯಾಲಿಟಿ, ಫೋಟೊ ಎಡಿಟಿಂಗ್‌ ಸೇರಿದಂತೆ ಹಲವು ಕೆಲಸಗಳನ್ನು ತಡೆ ಇಲ್ಲದೆ ನಡೆಸಬಹುದಾಗಿದೆ.

ಏರೊಸ್ಪೇಸ್‌ ಗ್ರೇಡ್‌ ಅಲ್ಯುಮಿನಿಯಂ ಮತ್ತು ಗ್ಲಾಸ್‌ ಡಿಸೈನ್‌, ಸುರಕ್ಷಿತ ಲಾಗಿನ್‌ಗಾಗಿ ಹೋಂ ಬಟನ್‌ ಜೊತೆಗೆ ಟಚ್‌ ಐಡಿ, 4.7 ಇಂಚು ಡಿಸ್‌ಪ್ಲೇ, ಸರಾಗವಾಗಿ ಕಾರ್ಯಾಚರಿಸಲು 6–ಕೋರ್‌ ಸಿಪಿಯು ಇರುವ ಎ15 ಬಯೋನಿಕ್‌ ಚಿಪ್‌, ಐಒಎಸ್‌ 15 ವ್ಯವಸ್ಥೆಯು ಬ್ಯಾಟರಿ ಚಾರ್ಜ್‌ ದೀರ್ಘಾವಧಿಯ ವರೆಗೂ ಉಳಿಸುತ್ತದೆ. ಫಾಸ್ಟ್‌ ಚಾರ್ಜಿಂಗ್‌ ಮತ್ತು ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯೂ ಇದೆ.

ಫೋನ್‌ ಹಿಂಬದಿಯಲ್ಲಿ 12ಎಂಪಿ ವೈಡ್‌ ಕ್ಯಾಮೆರಾ ಇದ್ದು, ಸ್ಮಾರ್ಟ್‌ ಎಚ್‌ಡಿಆರ್‌ 4, ಫೋಟೊಗ್ರಾಫಿಕ್‌ ಸ್ಟೈಲ್‌, ಡೀಪ್‌ ಫ್ಯೂಷನ್‌ ಸೇರಿದಂತೆ ಫೋಟೊ ಮತ್ತು ವಿಡಿಯೊ ಚಿತ್ರೀಕರಣಕ್ಕೆ ಪೂರಕವಾದ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ.

'ಐಫೋನ್‌ ಎಸ್‌ಇ 3' ಫೋನ್‌ನ ವೈಶಿಷ್ಯತೆ:

* ಆರಂಭಿಕ ಬೆಲೆ: ₹43,900
* ಐಫೋನ್‌ ಎಸ್‌ಇ 64ಜಿಬಿ, 128ಜಿಬಿ ಮತ್ತು 256ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಲಭ್ಯವಿದೆ. ಮಿಡ್‌ನೈಟ್‌, ಸ್ಟಾರ್‌ಲೈಟ್‌ ಮತ್ತು (ಪ್ರಾಡಕ್ಟ್) ರೆಡ್‌ ಬಣ್ಣಗಳಲ್ಲಿ ಸಿಗಲಿದೆ.
* ಮಾರ್ಚ್‌ 11ರಿಂದ ಬುಕ್ಕಿಂಗ್‌ ಮಾಡಲು ಅವಕಾಶವಿದ್ದು, ಮಾರ್ಚ್‌ 18 ಫೋನ್‌ ಲಭ್ಯವಾಗಲಿದೆ.
* ನೀರು ಹಾಗೂ ದೂಳಿನಿಂದ ರಕ್ಷಣೆ ಪಡೆಯುವ ವ್ಯವಸ್ಥೆಯನ್ನು ಈ ಫೋನ್‌ ಒಳಗೊಂಡಿದೆ.
* 20 ವ್ಯಾಟ್‌ ಅಡಾಪ್ಟರ್‌ ಮೂಲಕ 30 ನಿಮಿಷ ಚಾರ್ಜ್ ಮಾಡಿದರೆ, ಬ್ಯಾಟರಿ ಶೇಕಡ 50ರಷ್ಟು ಚಾರ್ಜ್‌ ಆಗುತ್ತದೆ.
* ಪೋರ್ಟ್ರೇಟ್‌ ಮೋಡ್‌ನಲ್ಲಿ ಫೋನ್‌ ಜನರ ಗುರುತು ಪತ್ತೆ ಹಚ್ಚುತ್ತದೆ.
* 5ಜಿ, ಗಿಗಾಬಿಟ್‌ ಎಲ್‌ಇಟಿ, ವೋಲ್ಟ್‌, ವೈ–ಫೈ ಕಾಲಿಂಗ್‌ ಆಯ್ಕೆಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT