ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ

ಆ್ಯಪಲ್ ನೂತನ ಐಪ್ಯಾಡ್ ಮತ್ತು ಮ್ಯಾಕ್ ಸರಣಿ ಪರಿಚಯಿಸಲು ಸಜ್ಜು
Last Updated 14 ಅಕ್ಟೋಬರ್ 2022, 10:24 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ತಿಂಗಳು ವಿಶೇಷ ಈವೆಂಟ್ ಆಯೋಜಿಸಿದ್ದ ಆ್ಯಪಲ್, ಐಫೋನ್ 14 ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

ಈ ಬಾರಿ ಮತ್ತೊಂದು ಈವೆಂಟ್ ನಡೆಸಿ, ಹೊಸ ಸರಣಿಯ ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಬಿಡುಗಡೆ ಮಾಡಲು ಆ್ಯಪಲ್ ಸಜ್ಜಾಗಿದೆ.

ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈವೆಂಟ್ ಒಂದನ್ನು ಆಯೋಜಿಸಿ, ನೂತನ ಐಪ್ಯಾಡ್ ಮತ್ತು ಮ್ಯಾಕ್ ಬಿಡುಗಡೆಯನ್ನು ಆ್ಯಪಲ್ ಮಾಡಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

10th Gen ಐಪ್ಯಾಡ್ ಮತ್ತು 5th Gen ಐಪ್ಯಾಡ್ ಪ್ರೊ ಅನ್ನು ಆ್ಯಪಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜತೆಗೆ M2 ಸಿಲಿಕಾನ್ ಪ್ರೊಸೆಸರ್ ಸಹಿತ ಹೊಸ ಮ್ಯಾಕ್‌ ಸರಣಿಯನ್ನು ಆ್ಯಪಲ್ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ ಎಂದು ಗ್ಯಾಜೆಟ್ ಮಾರುಕಟ್ಟೆ ಪರಿಣತ ಮಾರ್ಕ್ ಗುರ್ಮನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT