ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Apple iPhone: ಬುಲೆಟ್‌ಪ್ರೂಫ್ ಮಾದರಿ ಮಾರುಕಟ್ಟೆಗೆ ಬಿಡುಗಡೆ

Last Updated 16 ಡಿಸೆಂಬರ್ 2021, 11:24 IST
ಅಕ್ಷರ ಗಾತ್ರ

ಬೆಂಗಳೂರು: ಪಿಸ್ತೂಲ್‌ನಿಂದ ಗುಂಡು ಹಾರಿಸಿದರೂ ಹಾನಿಯಾಗದ ಬಲಿಷ್ಠ ಜಾಕೆಟ್ ಹೊಂದಿರುವ ಹೊಸ ಆ್ಯಪಲ್ ಐಫೋನ್ 13 ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ರಷ್ಯಾ ಮೂಲದ ಕೇವಿಯರ್ ಕಂಪನಿ, ಕಸ್ಟಮ್ ಐಫೋನ್ 13 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಲಕ್ಷುರಿ ಬ್ರ್ಯಾಂಡ್ ಮತ್ತು ಕಸ್ಟಮ್ ವಿನ್ಯಾಸದಲ್ಲಿ ಫೋನ್ ತಯಾರಿಸುವ ಕೇವಿಯರ್ ನೂತನ ಐಫೋನ್ 13 ಬುಲೆಟ್‌ಪ್ರೂಫ್ ಮಾದರಿಯ ಕುರಿತು ಕಂಪನಿ ವೆಬ್‌ಸೈಟ್‌ನಲ್ಲಿ ವಿವರ ಪ್ರಕಟಿಸಿದೆ.

ಐಫೋನ್ 13 ಪ್ರೊ ಮತ್ತು 13 ಪ್ರೊ ಮ್ಯಾಕ್ಸ್ ಎಂಬ ಎರಡು ಮಾದರಿಗಳು ಬುಲೆಟ್‌ಪ್ರೂಫ್ ಆವೃತ್ತಿಯಲ್ಲಿ ದೊರೆಯಲಿದೆ.

ಬುಲೆಟ್‌ಪ್ರೂಫ್ ವಿನ್ಯಾಸದಲ್ಲಿ ಹೊಸ ಐಫೋನ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಕೇವಿಯರ್ ಕಂಪನಿ ಮಾಡಿದೆ.

ನೂತನ ಆವೃತ್ತಿಯ ಐಫೋನ್ 13 ಬುಲೆಟ್‌ಪ್ರೂಫ್ ಮಾದರಿಗೆ $6,370 ಆರಂಭಿಕ ದರ (ಅಂದಾಜು ₹4.85 ಲಕ್ಷ) ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT