ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪೊ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ 'ಕಲರ್‌ಒಎಸ್‌ 7' ಟ್ರಯಲ್‌ ವರ್ಶನ್‌ ಲಭ್ಯ

Last Updated 22 ಫೆಬ್ರುವರಿ 2020, 11:01 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ಹೊಸ ಆಪರೇಟಿಂಗ್‌ ಸಿಸ್ಟಮ್‌ 'ಕಲರ್‌ಒಎಸ್‌ 7' ಅನಾವರಣಗೊಳಿಸಿದ್ದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಒಪ್ಪೊ, ಈಗ ಟ್ರಯಲ್‌ ವರ್ಶನ್‌ ಬಳಕೆಗೆ ತಂದಿದೆ.

ಆ್ಯಂಡ್ರಾಯ್ಡ್‌ 10 ಆಧಾರಿತ 'ಕಲರ್‌ಒಎಸ್‌ 7' ಭಾರತದಲ್ಲಿ ಒಪ್ಪೊ ಬಳಕೆದಾರರಿಗೆ ಲಭ್ಯವಿದೆ. ಈ ಆಪರೇಟಿಂಗ್‌ ಸಿಸ್ಟಮ್ ಕಾರ್ಯಾಚರಣೆಯನ್ನು ಮತ್ತಷ್ಟು ಸರಳ ಮತ್ತು ಆರಾಮದಾಯಕಗೊಳಿಸಲಿದೆ. ಪ್ರಸ್ತುತ ರೆನೊ, ರೆನೊ 10x ಜೂಮ್‌, ರೆನೊ 2, ಎಫ್‌11, ಎಫ್‌11 ಪ್ರೊ ಮತ್ತು ಆರ್‌17, ಆರ್‌17 ಪ್ರೊ, ಫೈಂಡ್‌ X ಹಾಗೂ ಫೈಂಡ್‌ X ಆಟೊಮೊಬಿಲಿ ಲ್ಯಾಂಬೊರ್ಗಿನಿ ಎಡಿಷನ್‌ ಸೇರಿದಂತೆ ಹತ್ತು ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಒಎಸ್‌ ಲಭ್ಯವಿದೆ.

ಹೊಸ ರೀತಿಯ ಡಾರ್ಕ್‌ ಮೋಡ್‌, ಡಿಜಿಟಲ್‌ ಡಾಕ್ಯುಮೆಂಟ್‌ ಮ್ಯಾನೇಜರ್‌ ಡಾಕ್‌ವಾಲ್ಟ್‌, ಮೂರು ಬೆರಳು ಬಳಸಿ ಸ್ಟ್ರೀಕ್‌ಶಾಟ್‌ ಪಡೆಯುವುದು ಹಾಗೂ ಸೋಲೂಪ್‌ ವಿಡಿಯೊ ಎಡಿಟರ್‌ನಂತಹ ವಿನೂತನ ಆಯ್ಕೆಗಳನ್ನು ಒಳಗೊಳ್ಳುವ ಮೂಲಕ ಯೂಸರ್‌ ಇಂಟರ್‌ಫೇಸ್‌ (ಯುಐ) ಬಳಕೆದಾರರ ಮೆಚ್ಚುಗೆ ಪಡೆದಿದೆ. ಭಾರತದಲ್ಲಿ 4.5 ಕೋಟಿ ಬಳಕೆದಾರರು ಇದರ ಉಪಯೋಗ ಪಡೆಯುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿಯೂ ಕಲರ್‌ಒಸ್‌ ಬಳಸಲಾಗುತ್ತಿದೆ.

ಟ್ರಯಲ್‌ ವರ್ಶನ್‌ ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಂದ ಅನುಭವ ಮತ್ತು ಸಲಹೆಗಳನ್ನು ಪಡೆಯಲಾಗುತ್ತಿದೆ. ಇಂಗ್ಲಿಷ್‌, ಹಿಂದಿ, ಮರಾಠಿ, ಬಾಂಗ್ಲಾ, ಥಾಯ್‌, ಇಂಡೋನೇಷಿಯನ್‌ ಸೇರಿದಂತೆ ಜಗತ್ತಿನ 72 ಭಾಷೆಗಳಿಗೆ ಕಲರ್‌ಒಸ್‌ ಬಳಕೆಯಲ್ಲಿದೆ. https://community.coloros.com/forum.php ಲಿಂಕ್‌ ಬಳಸಿ ಅಭಿಪ್ರಾಯ ತಿಳಿಸಬಹುದಾಗಿದೆ.

ಒಪ್ಪೊ ಸ್ಮಾರ್ಟ್‌ಫೋನ್‌ ಬಳಸುತ್ತಿರುವವರು ಸೆಟ್ಟಿಂಗ್ಸ್‌– 'ಸಾಫ್ಟ್‌ವೇರ್‌ ಅಪ್‌ಡೇಟ್‌'ನಲ್ಲಿ ಟ್ರಯಲ್‌ ವರ್ಶನ್‌ ಆಯ್ಕೆ ಮಾಡಿ. ಕೇಳುವ ಮಾಹಿತಿ ಸಲ್ಲಿಸಿ, ಮಸ್ಟ್‌–ನೌ ಬಾಕ್ಸ್‌ ಆಯ್ಕೆ ಮಾಡಿ 'ಅಪ್ಲೈ ನೌ' ಕೊಟ್ಟು ಮುಂದುವರಿಯಬೇಕು.

2008ರಲ್ಲಿ 'ಸ್ಮೈಲಿ ಫೇಸ್‌' ಹೆಸರಿನ ಸ್ಮಾರ್ಟ್‌ಫೋನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಒಪ್ಪೊ ಆಧುನಿಕ ತಂತ್ರಜ್ಞಾನವನ್ನು ಬಹುಬೇಗ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಒಪ್ಪೊ ಕ್ಲೌಡ್‌ ಮತ್ತು ಒಪ್ಪೊ ಪ್ಲಸ್‌ ಇಂಟರ್‌ನೆಟ್‌ ಸೇವೆಗಳನ್ನೂ ಒದಗಿಸುತ್ತಿದ್ದು, 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 6 ಸಂಶೋಧನಾ ಕೇಂದ್ರಗಳು, 4 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ಲಂಡನ್‌ನಲ್ಲಿ ಇಂಟರ್‌ನ್ಯಾಷನಲ್‌ ಡಿಸೈನ್‌ ಸೆಂಟರ್‌ ಹೊಂದಿದೆ. ಜಗತ್ತಿನಾದ್ಯಂತ ಒಪ್ಪೊ 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT