MarQ M3: ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಫ್ಲಿಪ್ಕಾರ್ಟ್

ಬೆಂಗಳೂರು: ಫ್ಲಿಪ್ಕಾರ್ಟ್ ಒಡೆತನದ ಬ್ರ್ಯಾಂಡ್ ಮಾರ್ಕ್, ಭಾರತದ ಮಾರುಕಟ್ಟೆಗೆ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಮಾರ್ಕ್ ಬ್ರ್ಯಾಂಡ್ ಮೂಲಕ ಫ್ಲಿಪ್ಕಾರ್ಟ್ ಈ ಮೊದಲು ಸ್ಮಾರ್ಟ್ ಟಿವಿ, ಸ್ಪೀಕರ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಬಿಡುಗಡೆ ಮಾಡಿತ್ತು.
ಈ ಬಾರಿ ಹೊಸದಾಗಿ ಮೊದಲ ಮಾರ್ಕ್ ಎಂ3 ಸ್ಮಾರ್ಟ್ ಎನ್ನುವ ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಬೆಲೆ ಮತ್ತು ಲಭ್ಯತೆ
ಹೊಸ ಮಾರ್ಕ್ ಎಂ3 ಸ್ಮಾರ್ಟ್, 2 GB + 32 GB ಮಾದರಿಗೆ ದೇಶದಲ್ಲಿ ₹7,999 ದರವಿದೆ. ಆದರೆ ಸೀಮಿತ ಅವಧಿಯ ಕೊಡುಗೆಯಾಗಿ ₹6,299ಗೆ ಲಭ್ಯವಾಗುತ್ತಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅವಧಿಯಲ್ಲಿ ಹೊಸ ಫೋನ್ ಖರೀದಿಗೆ ದೊರೆಯಲಿದೆ.
Itel A26: ದೇಶದ ಮಾರುಕಟ್ಟೆಗೆ ಬಜೆಟ್ ದರದ ಸ್ಮಾರ್ಟ್ಫೋನ್
6.088 ಇಂಚಿನ ಡಿಸ್ಪ್ಲೇ, 13 ಮೆಗಾಪಿಕ್ಸೆಲ್ ಸಹಿತ ಹಿಂಬದಿಯಲ್ಲಿ ಎರಡು ಕ್ಯಾಮರಾ, 5 ಮೆಗಾಪಿಕ್ಸೆಲ್ ಸೆಲ್ಫಿ, 5,000mAh ಬ್ಯಾಟರಿ ಇದರಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.