ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಮಡಚುವ ಹೊಸ 5ಜಿ ಫೋನ್‌ಗಳು, ವಾಚ್‌, ಬಡ್ಸ್ ಬಿಡುಗಡೆ

Last Updated 11 ಆಗಸ್ಟ್ 2021, 16:57 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪನಿ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಸರಣಿಯ ಹೊಸ ಫೋನ್‌, ವಾಚ್‌ ಹಾಗೂ ಇಯರ್‌ ಬಡ್ಸ್‌ ಅನಾವರಣ ಮಾಡಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ಚೀನಾದ ಶಿಯೊಮಿ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದು, ಸ್ಯಾಮ್‌ಸಂಗ್‌ ಹೊಸ ಉತ್ಪನ್ನಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ.

ತೆಳುವಾದ ಮತ್ತು ಆಕರ್ಷಕ ವಿನ್ಯಾಸವಿರುವ 5ಜಿ ತಂತ್ರಜ್ಞಾನದ ಗ್ಯಾಲಕ್ಸಿ 'ಝಡ್‌ ಪೋಲ್ಡ್‌ 3' ಮತ್ತು 'ಝಡ್‌ ಫ್ಲಿಪ್‌ 3' ಮಡಚುವ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಗ್ಯಾಲಕ್ಸಿ ಅನ್‌ಪ್ಯಾಕಡ್‌ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫೋಲ್ಡ್‌ 3 (Galaxy Z Fold 3)

ನೀರಿನಿಂದ ರಕ್ಷಣೆ, ಎಸ್‌–ಪೆನ್‌ ಬಳಕೆ, ಗೊರಿಲ್ಲಾ ಗ್ಲಾಸ್‌ ರಕ್ಷಣೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಝಡ್‌ ಫೋಲ್ಡ್‌ 3 ಒಳಗೊಂಡಿದೆ.

ಅಲ್ಯೂಮಿನಿಯಂ ಹೊರ ಕವಚ, 6.2 ಇಂಚು ಎಚ್‌ಡಿ ಪ್ಲಸ್‌ ಅಮೊಲೆಡ್‌ 2X ಡಿಸ್‌ಪ್ಲೇ, ಮಡಚಿರುವ ಫೋನ್‌ ತೆರೆದರೆ; ಪರದೆ 7.6 ಇಂಚು ವಿಸ್ತರಿಸಿಕೊಳ್ಳುತ್ತದೆ. 64 ಬಿಟ್‌ ಆಕ್ಟಾ–ಕೋರ್‌ ಪ್ರೊಸೆಸರ್‌, 12ಜಿಬಿ ರ್‍ಯಾಮ್‌ ಹಾಗೂ 256ಜಿಬಿ ಮತ್ತು 512ಜಿಬಿ ಸಂಗ್ರಹ ಸಾಮರ್ಥ್ಯದ ಆಯ್ಕೆಗಳಿವೆ. ಆ್ಯಂಡ್ರಾಯ್ಡ್‌ 11 ಒಸ್‌ ಅಳವಡಿಸಲಾಗಿದ್ದು, ಆ್ಯಂಡ್ರಾಯ್ಡ್‌ 12ಕ್ಕೆ ಅಪ್‌ಗ್ರೇಡ್‌ ಆಗುವ ಸಾಧ್ಯತೆ ಇದೆ.

ಅಲ್ಟ್ರಾ ವೈಡ್‌, ವೈಡ್‌ ಆ್ಯಂಗಲ್‌ ಮತ್ತು ಟೆಲಿಫೋಟೊ ರೀತಿಯ ಫೋಟೊಗಳನ್ನು ಸೆರೆ ಹಿಡಿಯಲು 12 ಮೆಗಾಪಿಕ್ಸೆಲ್‌ನ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೆಲ್ಫಿಗಾಗಿ ಫೋನ್‌ ಮಡಚಿದಾಗ ಮುಂಭಾಗದಲ್ಲಿ ಒಂದು ಲೆನ್ಸ್‌ ಮತ್ತು ಫೋನ್‌ ತೆರೆದಾಗ ಮತ್ತೊಂದು ಕ್ಯಾಮೆರಾ ಇದೆ. 4,400ಎಂಎಎಚ್‌ ಬ್ಯಾಟರಿ ಇದೆ. ಫ್ಯಾಂಟಮ್‌ ಬ್ಲ್ಯಾಕ್‌, ಫ್ಯಾಂಟಮ್‌ ಗ್ರೀನ್‌ ಹಾಗೂ ಫ್ಯಾಂಟಮ್‌ ಸಿಲ್ವರ್‌ ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫ್ಲಿಪ್‌ 3 (Galaxy Z Flip 3)

ಗ್ಯಾಲಕ್ಸಿ ಝಡ್‌ ಫ್ಲಿಪ್‌ 3 ಮಡಚುವ ಫೋನ್‌ 6.7 ಇಂಚು ಎಫ್ಎಚ್‌ಡಿ+ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಫೋನ್‌ ಮಡಚಿದಾದ 1.9 ಇಂಚು ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಗೋಚರಿಸುತ್ತದೆ. ಗೊರಿಲ್ಲಾ ಗ್ಲಾಸ್‌ನ ರಕ್ಷಾ ಕವಚ, ನೀರಿನಿಂದ ರಕ್ಷಿಸುವ ವ್ಯವಸ್ಥೆ ಮತ್ತು ಅಲ್ಯೂಮಿನಿಯಂ ಹೊರ ಭಾಗವನ್ನು ಹೊಂದಿದೆ.

64 ಬಿಟ್‌ ಆಕ್ಟಾ–ಕೋರ್‌ ಪ್ರೊಸೆಸರ್‌, 8ಜಿಬಿ ರ್‍ಯಾಮ್‌ ಹಾಗೂ 256ಜಿಬಿ ಮತ್ತು 512ಜಿಬಿ ಸಂಗ್ರಹ ಸಾಮರ್ಥ್ಯದ ಆಯ್ಕೆಗಳಿವೆ. ಆ್ಯಂಡ್ರಾಯ್ಡ್‌ 11 ಒಎಸ್‌ ಇದ್ದು, 3,300ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಹಿಂಬದಿಯಲ್ಲಿ 12 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 10 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಇದೆ.

ಆಗಸ್ಟ್‌ 27ರಿಂದ ಹೊಸ ಮಡಚುವ ಫೋನ್‌ಗಳು ಖರೀದಿಗೆ ಸಿಗಲಿವೆ. ಗ್ಯಾಲಕ್ಸಿ ಝಡ್‌ ಫೋಲ್ಡ್‌ 3 ಬೆಲೆ 1,799.99 ಡಾಲರ್‌ (ಸುಮಾರು ₹ 1.3 ಲಕ್ಷ) ಹಾಗೂ ಗ್ಯಾಲಕ್ಸಿ ಝಡ್‌ ಫ್ಲಿಪ್‌ 3 ಬೆಲೆ 999.99 ಡಾಲರ್‌ (ಸುಮಾರು ₹ 74,000) ನಿಗದಿಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 4

ಹೊಸ ಗ್ಯಾಲಕ್ಸಿ ವಾಚ್‌ 4ರಲ್ಲಿ ಗೂಗಲ್‌ ಮತ್ತು ಸ್ಯಾಮಸಂಗ್‌ನ ನೂತನ ವಾಚ್‌ಒಸ್‌ ಅಳವಡಿಸಲಾಗಿದೆ. ಇದರಿಂದಾಗಿ ವಾಚ್‌ನಲ್ಲಿ ಬಹಳಷ್ಟು ಆ್ಯಂಡ್ರಾಯ್ಡ್‌ ಅಪ್ಲಿಕೇಷನ್‌ಗಳ ಬಳಕೆ ಸಾಧ್ಯವಾಗಲಿದೆ. ಆರೋಗ್ಯ ಮತ್ತು ಫಿಟ್ನೆಸ್‌ ಗ್ರಹಿಸುವ ಆಯ್ಕೆಗಳಿವೆ.

ವಾಚ್‌ 4 ಮತ್ತು ವಾಚ್‌ 4 ಕ್ಲಾಸಿಕ್‌ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. 1.2 ಇಂಚು ಮತ್ತು 1.4 ಇಂಚು ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. 1.5ಜಿಬಿ ರ್‍ಯಾಮ್‌, 16ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ ನೂತನ 'ವೇರ್‌ಒಸ್‌' ಒಳಗೊಂಡಿದೆ. 1.18ಗಿಗಾಹರ್ಟ್ಸ್‌ ಎಕ್ಸಿನೋಸ್‌ ಡಬ್ಲ್ಯು920 ಡ್ಯೂಯಲ್‌ ಕೋರ್‌ ಪ್ರೊಸೆಸರ್‌ ಮತ್ತು 247ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ.

ವೋಲ್ಟ್‌, ಬ್ಲೂಟೂಥ್‌ 5.0, ವೈಫೈ, ಎನ್‌ಎಫ್‌ಸಿ, ಜಿಪಿಎಸ್‌ ಸೇರಿ ಹಲವು ಸಂಪರ್ಕ ಸಾಧಿಸುವ ಆಯ್ಕೆಗಳಿವೆ. ಗ್ಯಾಲಕ್ಸಿ ವಾಚ್‌ 4 ಬೆಲೆ 249 ಡಾಲರ್‌ ಮತ್ತು ವಾಚ್‌ 4 ಕ್ಲಾಸಿಕ್‌ ಬೆಲೆ 349 ಡಾಲರ್‌ ನಿಗದಿಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್‌ 2

ಮಾತನಾಡುವಾಗ, ಕೇಳುವಾಗ ಹೊರಗಿನ ಸದ್ದನ್ನು ಕಡಿತಗೊಳಿಸುವ ಸುಧಾರಿತ ವ್ಯವಸ್ಥೆ'ಗ್ಯಾಲಕ್ಸಿ ಬಡ್‌2' ಹೊಂದಿರುವುದಾಗಿ ಸ್ಯಾಮ್‌ಸಂಗ್‌ ಪ್ರಕಟಿಸಿದೆ. ವಯರ್‌ಲೆಸ್‌ ಇಯರ್‌ಬಡ್ಸ್‌ ಗ್ರಾಫೈಟ್‌, ವೈಟ್‌, ಆಲಿವ್‌ ಹಾಗೂ ಲ್ಯಾವೆಂಡರ್‌ ಬಣ್ಣಗಳಲ್ಲಿ ಲಭ್ಯವಿರಲಿದೆ.

ಬಡ್‌ಗಳಲ್ಲಿ 61ಎಂಎಎಚ್‌ ಬ್ಯಾಟರಿ ಮತ್ತು ಬ್ಯಾಟರಿ ಕೇಸ್‌ನಲ್ಲಿ 472ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ, 20 ಗಂಟೆಗಳ ವರೆಗೂ ಬಡ್‌ಗಳನ್ನು ಬಳಸಬಹುದಾಗಿದೆ. ಕ್ಷಿಪ್ರವಾಗಿ ಮತ್ತು ವಯರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ. ಇದಕ್ಕೆ 149.99 ಡಾಲರ್‌ (ಸುಮಾರು ₹ 11,000) ಬೆಲೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT