ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಪ್ಲೇ ಸ್ಟೋರ್‌ಗೆ ಜೋಕರ್‌ ಕಾಟ

Last Updated 10 ಜುಲೈ 2020, 15:19 IST
ಅಕ್ಷರ ಗಾತ್ರ

ಪದೇ ಪದೇ ಗೂಗಲ್‌ಗೆ ಕಾಟ ಕೊಡುತ್ತಿರುವ ‘ಜೋಕರ್’ ಮತ್ತೆ ಈ ಬಾರಿ ಹೊಸ ರೂಪದೊಂದಿಗೆ ಗೂಗಲ್‌ ಭದ್ರಕೋಟೆಯನ್ನು ಯಾಮಾರಿಸಿ ಒಳ ನುಸುಳಿದೆ. ಈ ಕುತಂತ್ರಗಳ ಬಗ್ಗೆ ಮೊದಲೇ ಗುಮಾನಿಯಿಂದ ನೋಡುತ್ತಿದ್ದ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಅಡಗಿ ಕುಳಿತಿದ್ದ‘ಜೋಕರ್‌’ನನ್ನು ಹಿಡಿದು ಹೊರಗಟ್ಟಿದೆ.

ಹೌದು! ‘ಜೋಕರ್‌’ ಕಳ್ಳ ತಂತ್ರಾಂಶ (ಮಾಲ್‌ವೇರ್)‌ ಅಡಗಿ ಕುಳಿತಿದ್ದ 11 ಆಂಡ್ರಾಯ್ಡ್‌ ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ‌ತೆಗೆದು ಹಾಕಿದೆ.ಜೋಕರ್‌ ಕಳ್ಳ ತಂತ್ರಾಂಶ ಹೊಂದಿದಶಂಕೆಯಿಂದಾಗಿ ಈ ಆ್ಯಪ್‌ಗಳ ಮೇಲೆ ಗೂಗಲ್‌ ಮೂರು ವರ್ಷಗಳಿಂದಲೇ (2017ರಿಂದ) ಕಣ್ಣು ಇಟ್ಟಿತ್ತು.ಎಲ್ಲ ಸುರಕ್ಷತಾ ಕ್ರಮಗಳ ಹೊರತಾಗಿಯೂ ಜೋಕರ್‌ ಮಾಲ್‌ವೇರ್ ಹೊಸ ರೂಪದಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನೊಳಗೆ‌ ನುಸುಳಿದೆ.

ಏನಿದು ಬ್ರೆಡ್‌ ಆ್ಯಪ್‌?

ವಿಶ್ವಾಸಾರ್ಹ ಆ್ಯಪ್‌ಗಳಲ್ಲಿಯೇ ಹೊಸ, ಹೊಸ ರೂಪದಲ್ಲಿ ಜೋಕರ್ ಕಳ್ಳ ತಂತ್ರಾಂಶವನ್ನುಹ್ಯಾಕರ್‌ಗಳು ಹರಿಬಿಡುತ್ತಿದ್ದಾರೆ. ಆ್ಯಪ್‌ಗಳಲ್ಲಿ ಅಡಗಿ ಕುಳಿತು ಈ ಕಳ್ಳ ತಂತ್ರಾಂಶಗಳು ಪ್ಲೇ ಸ್ಟೋರ್‌ ಒಳಗೆ ಹೋಗುತ್ತವೆ. ಮಾಲ್‌ವೇರ್‌ಗಳು ‌ಆಶ್ರಯ ಪಡೆಯುವ ಆ್ಯಪ್‌ಗಳನ್ನು ‘ಬ್ರೆಡ್‌ ಆ್ಯಪ್’‌ ಎಂದು ಕರೆಯಲಾಗುತ್ತದೆ.

ಎಂಥ ಹದ್ದಿನ ಕಣ್ಣನ್ನಾದರೂ ತಪ್ಪಿಸುವಷ್ಟು ಚಾಲಾಕಿಯಾಗಿರುವ ಈ ಮಾಲ್‌ವೇರ್‌ಗಳನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಈ ವರ್ಷದ ಆರಂಭದಲ್ಲಿಯೇ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಇಂಥ 1,700 ಬ್ರೆಡ್‌ ಆ್ಯಪ್‌ಗಳನ್ನು ಪತ್ತೆ ಹಚ್ಚಿ, ಹೊರದಬ್ಬಿತ್ತು.

‘ತಂತ್ರಜ್ಞರು ಪರಿಷ್ಕೃತ ಜೋಕರ್ ಕಳ್ಳ ತಂತ್ರಾಂಶವನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗೂಗಲ್‌, ಪ್ಲೇ ಸ್ಟೋರ್‌ನಿಂದ 11 ಆ್ಯಪ್‌ಗಳನ್ನು ತೆಗೆದು ಹಾಕಿ ಸ್ಯಾನಿಟೈಸ್‌ ಮಾಡಿದೆ‘ ಎಂದು ಚೆಕ್‌ ಪಾಯಿಂಟ್ ತಂತ್ರಜ್ಞಾನ ಸಂಸ್ಥೆ ಹೇಳಿದೆ.‌

‘ಬಳಕೆದಾರರು ಡೌನ್‌ಲೋಡ್‌ ಮಾಡುವ ಮುನ್ನವೇ ಇಂತಹ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ‘ ಎಂದುಗೂಗಲ್ ಹೇಳಿತ್ತು. ಆದರೂ, ಪದೇ ಪದೇ ಹೊಸ ಕಳ್ಳವೇಷದಲ್ಲಿ ‘ಜೋಕರ್’‌ ಪ್ಲೇ ಸ್ಟೋರ್‌ಗೆ ಕನ್ನ ಹಾಕುತ್ತಲೇ ಇರುವುದುಗೂಗಲ್‌ಗೆ ತಲೆನೋವಾಗಿದೆ.

2019ರಿಂದಲೇ ಕೋಡ್‌ಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಪದೇ ಪದೇ ‘ಜೋಕರ್ ಮಾಲ್‌ವೇರ್‌’ ಹರಿಬಿಡುತ್ತಿದ್ದ ಹ್ಯಾಕರ್‌ಗಳು ಮೂರು ವರ್ಷಗಳಿಂದ ಈಚೆಗೆ ಕಾರ್ಯಾಚರಣೆಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡಿದ್ದಾರೆ. ಅತ್ಯಂತ ನಂಬುಗೆಯ ಮತ್ತು ಜನಪ್ರಿಯ ಆ್ಯಪ್‌ಗಳಲ್ಲಿ ಈ ಕಳ್ಳ ತಂತ್ರಾಂಶವನ್ನು ಹ್ಯಾಕರ್‌ಗಳು ತೂರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನುವುದು ತಂತ್ರಜ್ಞಾನ ವಿಶ್ಲೇಷಣಾ ತಜ್ಞರ ಅನಿಸಿಕೆ.

‘ಪೊಕೊ’ದಲ್ಲಿ ನಿಷೇಧಿತ ಚೀನಾ ಆ್ಯಪ್
ನಾಲ್ಕು ದಿನಗಳ ಹಿಂದೆಯಷ್ಟೇ ಪೊಕೊ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ ‘ಎಂ‌2 ಪ್ರೊ’ ಸ್ಮಾರ್ಟ್‌ಫೋನ್‌ನಲ್ಲಿ ನಿಷೇಧಿತಚೀನಾ ಆ್ಯಪ್‌ಗಳಿರುವ ಸಂಗತಿ ಬೆಳಕಿಗೆ ಬಂದಿದೆ.

ಭಾರತ ಸರ್ಕಾರ ಈ ಆ್ಯಪ್‌ಗಳನ್ನು ನಿಷೇಧಿಸುವ ಮೊದಲೇ ಚೀನಾದ ಕೆಲವು ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಅಳವಡಿಸಲಾಗಿತ್ತು ಎಂದು ಕಂಪನಿಯು ಗ್ರಾಹಕರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಸಮಜಾಯಿಷಿ ನೀಡಿದೆ.

ಹೊಸದಾಗಿ ಬಿಡುಗಡೆಯಾದ ಮೊಬೈಲ್ ಫೀಚರ್‌ಗಳನ್ನು ಯೂಟ್ಯೂಬರ್‌ಗಳು ಚೆಕ್‌ ಮಾಡುವಾಗ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ನಿಷೇಧಿತ ಆ್ಯಪ್‌ಗಳಿರುವುದು ಬೆಳಕಿಗೆ ಬಂದಿತ್ತು. ಹೊಸದಾಗಿ ಮಾರುಕಟ್ಟೆಗೆ ಬಂದ ಗ್ಯಾಜೆಟ್‌ಗಳ ಬಗ್ಗೆ ‌ವಿಮರ್ಶೆ ಬರೆಯುವ ಯೂಟ್ಯೂಬರ್‌ಗಳು ಈ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕಂಪನಿಯ ಗಮನ ಸೆಳೆದಿದ್ದರು.

ಪೊಕೊ ಎಂ2 ಪ್ರೊ ಕೆಲವು ಮೊಬೈಲ್‌ಗಳಲ್ಲಿ ಭಾರತ ಸರ್ಕಾರ ನಿಷೇಧಿಸಿರುವ ಚೀನಾದ ’ಹಲೊ’ ಮತ್ತು ’ಕ್ಲೀನ್’‌ ಮಾಸ್ಟರ್‌ ಆ್ಯಪ್‌ಗಳು ಹಾಗೆಯೇ ಉಳಿದುಕೊಂಡಿದ್ದು, ಈ ಅಚಾರ್ತುಯ ಕಂಪನಿಯನ್ನು ಪೇಚಿಗೆ ಸಿಲುಕಿಸಿದೆ.

‘ಗ್ರಾಹಕರ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಗ್ರಾಹಕರ ಖಾಸಗಿತನ ಮತ್ತು ದತ್ತಾಂಶ ರಕ್ಷಣೆ ನಮ್ಮ ಮೊದಲ ಆದ್ಯತೆ. ಗ್ರಾಹಕರ ಖಾಸಗಿ ಮಾಹಿತಿ ಮತ್ತು ಡೇಟಾಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಕೂಡಲೇ ಸಾಫ್ಟ್‌ವೇರ್‌ ಅಪ್‌ಡೇಟ್‌ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಪೊಕೊ ಇಂಡಿಯಾ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾದ ಆಂಡ್ರಾಯ್ಡ್‌ ಆ್ಯಪ್‌ಗಳು

com.imagecompress.android

com.contact.withme.texts

com.hmvoice.friendsms

com.relax.relaxation.androidsms

com.cheery.message.sendsms (two different instances)

com.peason.lovinglovemessage

com.file.recovefiles

com.LPlocker.lockapps

com.remindme.alram

com.training.memorygame

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT